ಏನಿದು 110 ಸೈಟ್​ಗಳ ವಿಚಾರ: ಖಾಲಿ ಜಾಗದಲ್ಲಿ ಗುಡಿಸಲು ಹಾಕಿ, ಕೈಯಲ್ಲಿ ದೊಣ್ಣೆ ಹಿಡಿದು ಡಿ.ಸಿ ಕಚೇರಿ ಮುಂದೆ ಈ ಬಡವರು ಪ್ರತಿಭಟನೆ ನಡೆಸುತ್ತಿರುವುದು ಏಕೆ?

ಮಹಾನಗರ ಪಾಲಿಕೆಯ ಸಿಬ್ಬಂದಿ ಗೋವಿಂದ್ ನಾಯ್ಕ. 110 ಸೈಟ್​ಗಳಿಗೆ ತಲಾ 110000 ರೂಪಾಯಿ ಎಂದು ಹಣ ಪಡೆದು ಅವರವರ ಹೆಸರಿಗೆ ಸೈಟ್ ಮಾಡಿದ್ದಾರೆ. ಆದರೆ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಮಾತ್ರ ಇದರ ಬಗ್ಗೆ ಮಾಹಿತಿ ನೀಡುತ್ತಿಲ್ಲ ಎಂದು ಸ್ಥಳೀಯ ನಿವಾಸಿ ತಾಜ್ ಫೀರ್ ಆರೋಪಿಸಿದ್ದಾರೆ.

ಏನಿದು 110 ಸೈಟ್​ಗಳ ವಿಚಾರ: ಖಾಲಿ ಜಾಗದಲ್ಲಿ ಗುಡಿಸಲು ಹಾಕಿ, ಕೈಯಲ್ಲಿ ದೊಣ್ಣೆ ಹಿಡಿದು ಡಿ.ಸಿ ಕಚೇರಿ ಮುಂದೆ ಈ ಬಡವರು ಪ್ರತಿಭಟನೆ ನಡೆಸುತ್ತಿರುವುದು ಏಕೆ?
ಖಾಲಿ ಜಾಗದಲ್ಲಿ ಗುಡಿಸಲು ಹಾಕುತ್ತಿರುವ ಜನರು
Follow us
TV9 Web
| Updated By: preethi shettigar

Updated on: Jul 14, 2021 | 1:38 PM

ದಾವಣಗೆರೆ: ಬಡವರಿಗಾಗಿ ಮೀಸಲಿಟ್ಟ ಸೈಟ್​ಗಳನ್ನು ಬೇರೆಯವರಿಗೆ ನೀಡಲು ಮುಂದಾದ ಮಹಾನಗರ ಪಾಲಿಕೆ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಖಾಲಿ ಜಾಗದಲ್ಲಿ ತಮ್ಮ ಗುಡಿಸಲು ಹಾಕಿ ಪ್ರತಿಭಟನೆ ನಡೆಸಿದ್ದಾರೆ. ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಬಸಾಪುರ ಹಳ್ಳದ ಬಳಿ ಇರುವ ಜಾಗದಲ್ಲಿ ಬಡವರಿಗೆ ಉಚಿತ ಸೈಟ್​ ನೀಡುವುದಾಗಿ ಹಲವು ವರ್ಷಗಳ ಹಿಂದೆಯೇ ತಿಳಿಸಲಾಗಿತ್ತು. ಹೀಗಾಗಿ ಈ ಭಾಗದ ಜನರು ಮಹಾನಗರ ಪಾಲಿಕೆಗೆ ಅರ್ಜಿ ಸಹ ಸಲ್ಲಿಸಿದ್ದರು. ಆದರೆ ಇವರೆಗೂ ಯಾವುದೇ ಸೈಟ್​ ಜನರ ಪಾಲಾಗಿಲ್ಲ. ಹೀಗಿರುವಾಗ ಧಾರವಾಡ ಮಹಾನಗರ ಪಾಲಿಕೆ ಈ ಜಾಗವನ್ನು ಬೇರೆಯವರಿಗೆ ನೀಡಿದೆ ಎಂಬ ಸುದ್ದಿ ಸಿಕ್ಕಿದ್ದು, ಸಿಡಿದೆದ್ದ ಈ ಭಾಗದ ಜನರು ಖಾಲಿ ಜಾಗದಲ್ಲಿ ಗುಡಿಸಲು ಹಾಕಿ, ಕೈಯಲ್ಲಿ ದೊಣ್ಣೆ ಹಿಡಿದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಮಹಾನಗರ ಪಾಲಿಕೆ ವ್ಯಾಪ್ತಿಯ ಬಸಾಪುರ ಹಳ್ಳದ ಬಳಿ ಇರುವ ಜಾಗದಲ್ಲಿ 110 ಸೈಟ್​ಗಳಿವೆ. ಈ ಸೈಟ್​ಗಳನ್ನು ಇಲ್ಲಿನ ಬಡವರಿಗೆ ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಹಂಚಿತ್ತು. ಹೀಗಾಗಿ ನಮ್ಮದೆ ಸೈಟ್ ಎಂದು ಬಹುತೇಕರು ತಿಳಿದುಕೊಂಡಿದ್ದರು. ಆದರೆ ಇತ್ತೀಚಿಗೆ ಮಹಾನಗರ ಪಾಲಿಕೆಯ ಕೆಲ ಅಧಿಕಾರಿಗಳು ಹಣ ಪಡೆದು ಬೇರೆಯವರು, ಅದರಲ್ಲೂ ಒಂದೇ ಮನೆಯವರಿಗೆ ಮೂರು-ನಾಲ್ಕು ಸೈಟ್ ಮಾಡಿದ್ದಾರೆ. ಇದರಿಂದ ಬಡವರಿಗೆ ಸೈಟ್ ಸಿಗುವುದು ಕಷ್ಟವಾಗಿದೆ ಎಂದು ಸ್ಥಳೀಯ ನಿವಾಸಿ ಕರಿಬಸಮ್ಮ ತಿಳಿಸಿದ್ದಾರೆ.

ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವರು ಇದೇ ಬಸಾಪುರ ಪ್ರದೇಶದ ಬಡವರಿಗೆ ಸೈಟ್ ನೀಡುವಂತೆ ಆದೇಶ ಮಾಡಿದ್ದರು. ಆ ಪ್ರಕಾರ ಇಲ್ಲಿನ ಜನ ಮಹಾನಗರ ಪಾಲಿಕೆಗೆ ಅರ್ಜಿ ಸಹ ಸಲ್ಲಿಸಿದ್ದರು. ಹಳೇ ಪಟ್ಟಿಯಲ್ಲಿ ಇರುವ ಯಾವುದೇ ಹೆಸರು ಹೊಸ ಪಟ್ಟಿಯಲ್ಲಿ ಇಲ್ಲ. ಈ ಬಗ್ಗೆ ಕೇಳಿದರೆ ಅಧಿಕಾರಿಗಳು ಉತ್ತರ ನೀಡುತ್ತಿಲ್ಲ. ಇದಕ್ಕೆ ಕಾರಣ ಮಹಾನಗರ ಪಾಲಿಕೆಯ ಸಿಬ್ಬಂದಿ ಗೋವಿಂದ್ ನಾಯ್ಕ. 110 ಸೈಟ್​ಗಳಿಗೆ ತಲಾ 110000 ರೂಪಾಯಿ ಎಂದು ಹಣ ಪಡೆದು ಅವರವರ ಹೆಸರಿಗೆ ಮಾಡಿದ್ದಾರೆ. ಆದರೆ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಮಾತ್ರ ಇದರ ಬಗ್ಗೆ ಮಾಹಿತಿ ನೀಡುತ್ತಿಲ್ಲ ಎಂದು ಸ್ಥಳೀಯ ನಿವಾಸಿ ತಾಜ್ ಫೀರ್ ಆರೋಪಿಸಿದ್ದಾರೆ.

ಈ ಹಿಂದೆ ಮನೆಯಲ್ಲಿನ ಚಿನ್ನ ಹಾಗೂ ವಸ್ತುಗಳನ್ನು ಮಾರಾಟ ಮಾಡಿ ಈ ಭಾಗದ ಜನರು ಸೈಟ್​ಗಾಗಿ 30 ರಿಂದ 40 ಸಾವಿರ ರೂಪಾಯಿ ನೀಡಿದ್ದಾರೆ. ಕಳೆದ 13 ವರ್ಷಗಳಿಂದ ಈ ಸೈಟ್​ಗಾಗಿ ಹೋರಾಟ ಮಾಡಲಾಗುತ್ತಿದ್ದೆ. ಕೆಲವರು ಇದೇ ಸ್ಥಳದಲ್ಲಿ ಗೂಡಿಸಲು ಹಾಕಿಕೊಂಡು ಜೀವನ ಸಹ ನಡೆಸುತ್ತಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಅಧಿಕಾರಿಗಳು ಶಾಮೀಲಾಗಿ ಬೇಕಾದವರಿಗೆ ಸೈಟ್ ಮಾಡಿದ್ದು, ಸ್ಥಳೀಯರನ್ನು ಆಕ್ರೋಶಗೊಳಿಸಿದೆ. ಆದಷ್ಟು ಬೇಗ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಬಡವರ ನೆರವಿಗೆ ದಾವಿಸಬೇಕಿದೆ.

ಇದನ್ನೂ ಓದಿ: ತುಂಡು ಭೂಮಿಗಾಗಿ ಶ್ಯೂರಿಟಿ ಹಾಕಿದ್ದವನನ್ನೇ ಕೊಂದ ಸ್ನೇಹಿತರು, ಐವರು ಆರೋಪಿಗಳು ಅರೆಸ್ಟ್

ಮುಕ್ಕಾಲು ಎಕರೆ ಭೂಮಿಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದು ಆದಾಯ ಗಳಿಸಿದ ರೈತ; ಬಿಬಿಎಂ ಪದವೀಧರನ ಕೃಷಿ ಒಲವು

ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ