AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಆರ್​ಎಸ್ ಡ್ಯಾಂ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಬೇಕು; ಡ್ಯಾಂ ರಕ್ಷಣೆಗೆ ಟಾಸ್ಕ್ ಫೋರ್ಸ್ ರಚನೆಗೆ ಸೂಚಿಸಿದ್ದೇನೆ: ಸುಮಲತಾ ಅಂಬರೀಶ್

MP Sumalatha Press Meet: ಕೋ ಆರ್ಡಿನೇಷನ್​ ಟಾಸ್ಕ್​ಫೋರ್ಸ್​ ರಚನೆಗೆ ಸೂಚಿಸಿರುವೆ. ಹಲವು ಸಭೆಗಳಲ್ಲಿ ಮಂಡ್ಯ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ ಎಂದು ಕೆಆರ್​ಎಸ್​ನ ಕಾವೇರಿ ಸಭಾಂಗಣದಲ್ಲಿ ಸುಮಲತಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ಕೆಆರ್​ಎಸ್ ಡ್ಯಾಂ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಬೇಕು; ಡ್ಯಾಂ ರಕ್ಷಣೆಗೆ ಟಾಸ್ಕ್ ಫೋರ್ಸ್ ರಚನೆಗೆ ಸೂಚಿಸಿದ್ದೇನೆ: ಸುಮಲತಾ ಅಂಬರೀಶ್
ಸುಮಲತಾ (ಸಂಗ್ರಹ ಚಿತ್ರ)
Follow us
TV9 Web
| Updated By: ganapathi bhat

Updated on:Jul 14, 2021 | 3:30 PM

ಮಂಡ್ಯ: ಕೆಆರ್​ಎಸ್​ನಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಮಂಡ್ಯ ಸಂಸದೆ ಸುಮಲತಾ ಸುದ್ದಿಗೋಷ್ಠಿ ನಡೆಸಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್​ನ ಕಾವೇರಿ ಸಭಾಂಗಣದಲ್ಲಿ ಸುಮಲತಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಅಪಾಯ ಆಗುವ ಮುನ್ನ ಎಚ್ಚೆತ್ತುಕೊಳ್ಳುವುದು ಜವಾಬ್ದಾರಿ. ನಾವೆಲ್ಲರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಅಪಾಯ ನಿಶ್ಚಿತ. ಕೆಆರ್​ಎಸ್ ಡ್ಯಾಂನಿಂದ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಬೇಕಾಗಿದೆ. ಈ ಸಂಬಂಧ ಗಣಿ ಮತ್ತು ಭೂವಿಜ್ಞಾನ ಸಚಿವರಿಗೆ ಆಗ್ರಹಿಸುವೆ ಎಂದು ಅವರು ಹೇಳಿದ್ದಾರೆ.

ಮಹಾರಾಜರ ತ್ಯಾಗದಿಂದ ಕೆಆರ್​ಎಸ್​ ಡ್ಯಾಂ ನಿರ್ಮಾಣ ಆಗಿದೆ. 10 ಸಾವಿರ ಜನರನ್ನು ಬಳಸಿಕೊಂಡು ಅಣೆಕಟ್ಟು ನಿರ್ಮಾಣ ಮಾಡಲಾಗಿದೆ. ಇಂತಹ ಆಸ್ತಿಯನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ಸದ್ಯಕ್ಕೆ ಯಾವುದೇ ಸಮಸ್ಯೆಯಿಲ್ಲವೆಂದು ತಾತ್ಸಾರ ಸಲ್ಲದು. ಒಂದು ವೇಳೆ ಸಮಸ್ಯೆಯಾದರೆ ಹೊಣೆ ಹೊರುವವಱರು, ಮತ್ತೆ ನಾವು ಇಂತಹ ಜಲಾಶಯ ನಿರ್ಮಿಸಲು ಸಾಧ್ಯವೇ? ಎಂದು ಸುಮಲತಾ ಪ್ರಶ್ನಿಸಿದ್ದಾರೆ.

ಡ್ಯಾಂನಲ್ಲಿ ಸಣ್ಣಪುಟ್ಟ ಬಿರುಕು ಕಾಣಿಸಿಕೊಂಡಿದ್ದರಿಂದ ದುರಸ್ತಿ ಮಾಡಲಾಗಿದೆ. 67 ಕೋಟಿ ರೂಪಾಯಿ ವೆಚ್ಚದಲ್ಲಿ ದುರಸ್ತಿ ಮಾಡಿದ್ದಾರೆ. ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ, ಒಳ್ಳೆಯದು. ಆದರೆ, ನನ್ನ ಹೇಳಿಕೆಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸುಮಲತಾ ತಿಳಿಸಿದ್ದಾರೆ.

ಕೆಆರ್​ಎಸ್​ ಡ್ಯಾಂ ವಿಚಾರದಲ್ಲಿ ಟಾಸ್ಕ್​ಫೋರ್ಸ್​ ರಚಿಸಿ. ಟಾಸ್ಕ್​ಫೋರ್ಸ್​ ರಚಿಸುವಂತೆ ಮಂಡ್ಯ ಡಿಸಿಗೆ ಸೂಚಿಸಿದ್ದೇನೆ. 3 ತಿಂಗಳ ಹಿಂದೆ ಹೇಳಿದ್ದರೂ ಈವರೆಗೆ ಪ್ರತಿಕ್ರಿಯೆ ನೀಡಿಲ್ಲ. ಎಲ್ಲಾ ವಿಭಾಗದ ಅಧಿಕಾರಿಗಳನ್ನು ಒಗ್ಗೂಡಿಸಿ ಟಾಸ್ಕ್​ಫೋರ್ಸ್ ರಚಿಸಿ. ಇಂದಿನ ಸಭೆಯಲ್ಲಿ ಪ್ರಶ್ನೆಗಳಿಗೆ ಅಧಿಕಾರಿಗಳಿಂದ ಉತ್ತರ ಸಿಕ್ಕಿಲ್ಲ. ಇದು ನಮ್ಮ ವ್ಯಾಪ್ತಿಗೆ ಬರಲ್ಲವೆಂದು ಅಧಿಕಾರಿಗಳು ಹೇಳ್ತಾರೆ. ಒಂದು ಇಲಾಖೆ ಅಧಿಕಾರಿಗಳು ಒಂದೊಂದು ಹೇಳುತ್ತಿದ್ದಾರೆ. ಹಾಗಾಗಿ ಟಾಸ್ಕ್​ಫೋರ್ಸ್​ ರಚನೆ ಅನಿವಾರ್ಯವಾಗಿದೆ ಎಂದು ಸುಮಲತಾ ಹೇಳಿದ್ದಾರೆ.

ನನ್ನ ಹೇಳಿಕೆಗೆ ಬೇರೆ ಬೇರೆ ಅರ್ಥ ಕಲ್ಪಿಸುತ್ತಿರುವುದು ಯಾಕೆ? ಕನ್ನಂಬಾಡಿ ಕಟ್ಟೆಯಲ್ಲಿ ಬಿರುಕು ಬಿಟ್ಟಿದ್ದಕ್ಕೆ ದುರಸ್ತಿ ಮಾಡಿದ್ದಾರೆ. ಗ್ರೌಟಿಂಗ್​ ಮಾಡಿ ಬಿರುಕು ಮುಚ್ಚಿದ್ದಾರೆ. ಕನ್ನಂಬಾಡಿ ಕಟ್ಟೆ ನಿರ್ಮಿಸಿ 100 ವರ್ಷ ಕಳೆದ್ರೂ ಭದ್ರವಾಗಿದೆ. ಮಹಾರಾಜರ ದೂರಾಲೋಚನೆಗೆ ದೇಗುಲ ಕಟ್ಟಿ ಪೂಜಿಸಬೇಕು. ಆದರೆ, ನಮ್ಮಲ್ಲಿ ಬರೀ ದುರಾಲೋಚನೆಯೇ ತುಂಬಿದೆ. ಕೆಆರ್​ಎಸ್​ ಅಣೆಕಟ್ಟೆ ಬಗ್ಗೆ ಹಲವರ ಪ್ರತಿಕ್ರಿಯೆಗೆ ಬೇಸರ ಉಂಟಾಗಿದೆ. ಜನರ ಗಮನ ಬೇರೆಡೆ ಸೆಳೆಯಲು ಹೀಗೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸುಮಲತಾ ತಿಳಿಸಿದ್ದಾರೆ.

ನಮಗಿರುವ ಆತಂಕ ವ್ಯಕ್ತಪಡಿಸಿದರೆ ವಾಗ್ದಾಳಿ ಮಾಡುತ್ತಾರೆ. ನಾನು ಧ್ವನಿ ಎತ್ತಿದ್ದಕ್ಕೆ ತಾನೆ ವಾಸ್ತವ ವಿಚಾರ ಗೊತ್ತಾಯಿತು. ಪ್ರತಿಯೊಬ್ರೂ ಸಾಮಾಜಿಕ ಜವಾಬ್ದಾರಿಯಿಂದ ನಡೆಯಬೇಕು. ಆಗ ಮಾತ್ರ ಎಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತೆ. ಟ್ರಯಲ್ ಬ್ಲಾಸ್ಟ್​ ನಡೆಸಿ ಪರಿಶೀಲನೆ ಮಾಡುವುದು ಸೂಕ್ತ. ಜಾರ್ಖಂಡ್​ನ ತಜ್ಞರ ತಂಡದಿಂದ ಪರಿಶೀಲನೆ ಮಾಡ್ಬೇಕು. ಕೆಆರ್​ಎಸ್ ಅಣೆಕಟ್ಟೆ ಸುರಕ್ಷತೆ ಬಗ್ಗೆ ವರದಿ ನೀಡುವುದು ಸೂಕ್ತ ಎಂದು ಸುಮಲತಾ ಹೇಳಿಕೆ ನೀಡಿದ್ದಾರೆ.

ಅಧಿಕಾರಿಗಳನ್ನು ಪ್ರಶ್ನಿಸಿದ ಸುಮಲತಾ ಅಪಾಯದ ಬಗ್ಗ ಯಾವಾಗಲಾದರು ಮೇಲಧಿಕಾರಿಗಳಿಗೆ ತಿಳಿಸಿದ್ದಿರಾ? ಎಂಬ ಸುಮಲತಾ ಪ್ರಶ್ನೆಗೆ ಚೀಫ್ ಇಂಜಿನಿಯರ್ ಶಂಕರೇಗೌಡ, ಕಾಲಕಾಲಕ್ಕೆ ನಾವು ಈ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ನೀಡುತ್ತವೆ. ಈ ಬಗ್ಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ನೀವು ಬರೆದಿರುವ ಪತ್ರ ಇದ್ದರೆ ಕೊಡಿ ಎಂದು ಸುಮಲತಾ ಕೇಳಿದ್ದಾರೆ. ಕಾವೇರಿ ನೀರಾವರಿ ನಿಗಮದ ಪಾತ್ರ ಏನು? ಎಂದು ಸುಮಲತಾ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಕಾವೇರಿ ನದಿ ಪಾತ್ರದ ಉಸ್ತುವಾರಿ ನಾವು ಎಂದು ಅಧಿಕಾರಿಗಳು ಉತ್ತರಿಸಿದ್ದಾರೆ. ನಾಲ್ಕು ಅಣೆಕಟ್ಟಿನಿಂದ ನೀರು ರೈತರಿಗೆ ತಲುಪಿಸುವುದು. ನಾಲೆ ಉಸ್ತುವಾರಿ ಸೇರಿದಂತೆ ಡ್ಯಾಮ್ ಸಂಬಂಧಿಸಿದ ಕೆಲಸ ಮಾಡ್ತಿವಿ ಎಂದು ಅಧಿಕಾರಿಗಳು ಹೇಳಿದ್ದಾರೆ.

ಡ್ಯಾಮ್ ಸುರಕ್ಷತೆ ವಿಚಾರವಾಗಿ ನಿಮ್ಮ ಪಾತ್ರ ಏನು? ಎಂಬ ಸುಮಲತಾ ಪ್ರಶ್ನೆಗೆ ನಾವೇ ಸುರಕ್ಷತೆಯ ಜವಾವ್ದಾರಿ. ಡ್ಯಾಮ್ ಸೇಫ್ಟಿ ಸೆಲ್‌ ಇದೆ. ಪ್ರತಿ ಆರು ತಿಂಗಳಿಗೆ ನಾವು ಸಭೆ ಮಾಡಿ ರಿವ್ಯೂ ಮಾಡ್ತಿವಿ. ಎಲ್ಲಾ ನಾಲ್ಕು ಡ್ಯಾಮ್ ಗಳ ಉಸ್ತುವಾರಿ, ಇಂಜಿನಿಯರ್ ಕರೆದು ಮಾತನಾಡ್ತೀವಿ ಎಂದು ಹೇಳಿದ್ದಾರೆ. ಕೆಆರ್​ಎಸ್​ ಸುತ್ತಮುತ್ತ ಅಕ್ರಮ ಗಣಿಗಾರಿಕೆ ಅಥವಾ ಕ್ವಾರಿ ಬ್ಲಾಸ್ಟ್ ವಿಚಾರ ಯಾವಾಗಲಾದರೂ ಚರ್ಚೆ ಆಗಿದೆಯಾ ನಿಮ್ಮ ಸಭೆಯಲ್ಲಿ ಎಂಬ ಸುಮಲತಾ ಪ್ರಶ್ನೆಗೆ ಕೂಡ ಅಧಿಕಾರಿಗಳು ವಿವರಣೆ ನೀಡಿದ್ದಾರೆ.

ಇದನ್ನೂ ಓದಿ: ಜನ ಬುದ್ಧಿ ಕಲಿಸಿದರೆ ನಾನು ಕಲಿಯುತ್ತೇನೆ: ಸಂಸದೆ ಸುಮಲತಾ ಅಂಬರೀಶ್

ಬೇಬಿಬೆಟ್ಟ, ಕೆಆರ್​ಎಸ್ ಜಲಾಶಯಕ್ಕೆ ಇಂದು ಸುಮಲತಾ ಭೇಟಿ: ಪೊಲೀಸರಿಗೆ ಎಚ್ಚರಿಕೆಯ ಪತ್ರ ನೀಡಿದ ಗ್ರಾಮ ಪಂಚಾಯ್ತಿ ಅಧ್ಯಕ್ಷ

Published On - 3:13 pm, Wed, 14 July 21

ಕದನ ವಿರಾಮ ಉಲ್ಲಂಘನೆ: ಪಾಕಿಸ್ತಾನದಿಂದ ಭಾರತದ ಮೇಲೆ ಮತ್ತೆ ದಾಳಿ
ಕದನ ವಿರಾಮ ಉಲ್ಲಂಘನೆ: ಪಾಕಿಸ್ತಾನದಿಂದ ಭಾರತದ ಮೇಲೆ ಮತ್ತೆ ದಾಳಿ
ಭಾರತೀಯ ಸೇನೆ ಸಂವಿಧಾನಿಕ ಮೌಲ್ಯಗಳಲ್ಲಿ ವಿಶ್ವಾಸ ಹೊಂದಿದೆ: ಸೋಫಿಯಾ ಖುರೇಷಿ
ಭಾರತೀಯ ಸೇನೆ ಸಂವಿಧಾನಿಕ ಮೌಲ್ಯಗಳಲ್ಲಿ ವಿಶ್ವಾಸ ಹೊಂದಿದೆ: ಸೋಫಿಯಾ ಖುರೇಷಿ
ಒಂದನ್ನು ಜೈಸಲಮ್ಮೇರ್​ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ
ಒಂದನ್ನು ಜೈಸಲಮ್ಮೇರ್​ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ
ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ
ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ
Live: ರಕ್ಷಣಾ ಇಲಾಖೆಯಿಂದ ಸುದ್ದಿಗೋಷ್ಠಿ
Live: ರಕ್ಷಣಾ ಇಲಾಖೆಯಿಂದ ಸುದ್ದಿಗೋಷ್ಠಿ
ನೋಂದಣಿಗೆ ಬಂದವರಲ್ಲಿ ಯುವತಿಯರು ಮತ್ತು ವಯಸ್ಕರೂ ಶಾಮೀಲು!
ನೋಂದಣಿಗೆ ಬಂದವರಲ್ಲಿ ಯುವತಿಯರು ಮತ್ತು ವಯಸ್ಕರೂ ಶಾಮೀಲು!
ಪ್ರಧಾನಿ ಮೋದಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಜೊತೆಗಿದ್ದೇವೆ: ಮುಸಲ್ಮಾನರು
ಪ್ರಧಾನಿ ಮೋದಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಜೊತೆಗಿದ್ದೇವೆ: ಮುಸಲ್ಮಾನರು
ದಿನೇದಿನೆ ಅತೀವ ಹಾನಿಗೊಳಗಾಗುತ್ತಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ
ದಿನೇದಿನೆ ಅತೀವ ಹಾನಿಗೊಳಗಾಗುತ್ತಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ
ಕಾಶ್ಮೀರ ಗಡಿಯಲ್ಲಿ ಉಗ್ರ ನೆಲೆಗಳು ಉಡೀಸ್: ಸೇನೆಯ ಅಧಿಕೃತ ವಿಡಿಯೋ ಇಲ್ಲಿದೆ
ಕಾಶ್ಮೀರ ಗಡಿಯಲ್ಲಿ ಉಗ್ರ ನೆಲೆಗಳು ಉಡೀಸ್: ಸೇನೆಯ ಅಧಿಕೃತ ವಿಡಿಯೋ ಇಲ್ಲಿದೆ
ಕೇಂದ್ರ ಗೃಹ ಇಲಾಖೆಯಿಂದ ಕರ್ನಾಟಕಕ್ಕೂ ಎಚ್ಚರಿಕೆ ಸೂಚನೆ ಬಂದಿದೆ: ಡಿಕೆಶಿ
ಕೇಂದ್ರ ಗೃಹ ಇಲಾಖೆಯಿಂದ ಕರ್ನಾಟಕಕ್ಕೂ ಎಚ್ಚರಿಕೆ ಸೂಚನೆ ಬಂದಿದೆ: ಡಿಕೆಶಿ