ಎಸ್ಎಸ್ಎಲ್​ಸಿ ಬೋರ್ಡ್​ಗೆ ಮುತ್ತಿಗೆ ಹಾಕಿದ ಆಮ್ ಆದ್ಮಿ ಪಾರ್ಟಿ, ಸ್ಥಳದಲ್ಲಿ ಪೊಲೀಸ್ ಬಿಗಿ ಭದ್ರತೆ

ಕೊರೊನಾದಿಂದಾಗಿ ಶಾಲೆಗಳ ಬಾಗಿಲು ತೆರೆದಿಲ್ಲ. ಆನ್ಲೈನ್ ತರಗತಿಗಳು ಮಾತ್ರ ನಡೆದಿವೆ. ಕೊರೊನಾದಿಂದ ಕೆಲಸವಿಲ್ಲದ ಕಾರಣ ಪೋಕರು ಶಾಲಾ ಶುಲ್ಕ ಸಹ ಪಾವತಿಸಿಲ್ಲ. ಆದ್ರೆ ಶಾಲೆಗಳು ಈಗ ಹಾಲ್ ಟಿಕೆಟ್ ನೀಡಬೇಕೆಂದರೆ ಶುಲ್ಕ ಪಾವತಿಸಿ ಎಂದು ಡಿಮ್ಯಾಂಡ್ ಮಾಡುತ್ತಿವೆ.

ಎಸ್ಎಸ್ಎಲ್​ಸಿ ಬೋರ್ಡ್​ಗೆ ಮುತ್ತಿಗೆ ಹಾಕಿದ ಆಮ್ ಆದ್ಮಿ ಪಾರ್ಟಿ, ಸ್ಥಳದಲ್ಲಿ ಪೊಲೀಸ್ ಬಿಗಿ ಭದ್ರತೆ
ಎಸ್ಎಸ್ಎಲ್ಸಿ ಬೋರ್ಡ್ಗೆ ಮುತ್ತಿಗೆ ಹಾಕಿದ ಆಮ್ ಆದ್ಮಿ ಪಾರ್ಟಿ
Follow us
TV9 Web
| Updated By: ಆಯೇಷಾ ಬಾನು

Updated on: Jul 14, 2021 | 3:09 PM

ಬೆಂಗಳೂರು: ಜುಲೈ 19, 22ರಂದು ಎಸ್ಎಸ್ಎಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಶುಲ್ಕ ಕಟ್ಟದ ಕಾರಣ ಶಾಲೆಗಳು ಹಾಲ್ ಟಿಕೆಟ್ ನೀಡಲು ಸತಾಯಿಸುತ್ತಿದ್ದಾರೆ. ಹೀಗಾಗಿ ಆಮ್ ಆದ್ಮಿ ಪಾರ್ಟಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಗೆ ಮುತ್ತಿಗೆ ಹಾಕಿದೆ. ಹೀಗಾಗಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಬಳಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಕೊರೊನಾದಿಂದಾಗಿ ಶಾಲೆಗಳ ಬಾಗಿಲು ತೆರೆದಿಲ್ಲ. ಆನ್ಲೈನ್ ತರಗತಿಗಳು ಮಾತ್ರ ನಡೆದಿವೆ. ಕೊರೊನಾದಿಂದ ಕೆಲಸವಿಲ್ಲದ ಕಾರಣ ಪೋಕರು ಶಾಲಾ ಶುಲ್ಕ ಸಹ ಪಾವತಿಸಿಲ್ಲ. ಆದ್ರೆ ಶಾಲೆಗಳು ಈಗ ಹಾಲ್ ಟಿಕೆಟ್ ನೀಡಬೇಕೆಂದರೆ ಶುಲ್ಕ ಪಾವತಿಸಿ ಎಂದು ಡಿಮ್ಯಾಂಡ್ ಮಾಡುತ್ತಿವೆ. ಹೀಗಾಗಿ ಶುಲ್ಕ ಕಟ್ಟದ ಕಾರಣ ಹಾಲ್ಟಿಕೆಟ್ ನೀಡದಿದ್ದಕ್ಕೆ ಖಂಡನೆ ವ್ಯಕ್ತಪಡಿಸಿ ಆಪ್ನಿಂದ ಎಸ್ಎಸ್ಎಲ್ಸಿ ಬೋರ್ಡ್ಗೆ ಮುತ್ತಿಗೆ ಹಾಕಲಾಗಿದೆ. ಎಸ್ಎಸ್ಎಲ್ಸಿ ಬೋರ್ಡ್ ಬಳಿ ಪೊಲೀಸರಿಂದ ಭಿಗಿ ಭದ್ರತೆ ಕೈಗೊಳ್ಳಲಾಗಿದೆ.

ಖಾಸಗಿ ಶಾಲೆಗಳು ಮಕ್ಕಳಿಗೆ ಹಾಲ್ ಟಿಕೆಟ್ ಕೊಡದೆ ಸತಾಯಿಸುತ್ತಿವೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಶಾಲೆಗಳಿಂದ ಕಿರುಕುಳ ನೀಡಲಾಗ್ತಿದೆಯಂತೆ. ಖಾಸಗಿ ಶಾಲೆಗಳ ನಡೆ ಖಂಡಿಸಿ ಜೊತೆಗೆ ರಾಜ್ಯ ಸರ್ಕಾರ, ಕೋರ್ಟ್ ನೆಪ ಹೇಳಿಕೊಂಡು ಪರೀಕ್ಷೆಗೆ ಮುಂದಾಗಿದೆ ಎಂದು ಪ್ರತಿಭಟನೆಗೆ ಮುಂದಾಗಿದೆ. ಇನ್ನು ಕಿರುಕುಳ ನೀಡುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಸರ್ಕಾರ ಚೆಲ್ಲಾಟವಾಡ್ತಿದೆ. ಸರ್ಕಾರ ಕೂಡಲೇ ಕ್ರಮಕ್ಕೆ ಮುಂದಾಗುವಂತೆ ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.

ಎಸ್​ಎಸ್​ಎಲ್​ಸಿ ಬೋರ್ಡ್​ನ ಪ್ರವೇಶ ದ್ವಾರ ಕ್ಲೋಸ್ ಮಾಡಲಾಗಿದೆ. ಪ್ರತಿಭಟನಾಕಾರರನ್ನ ಪ್ರವೇಶ ದ್ವಾರದ ಬಳಿಯೇ ತಡೆಯಲಾಗಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿರುದ್ಧ ಧಿಕ್ಕಾರ ಕೂಗಿ ಆಪ್​ ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ. ಸುರೇಶ್ ಕುಮಾರ್ ಒಬ್ಬ ಅಸಮರ್ಥ ಶಿಕ್ಷಣ ಮಂತ್ರಿ. ಹಾಲ್ ಟಿಕೆಟ್ ಕೊಡದೆ ಖಾಸಗಿ ಶಾಲೆಗಳು ಸತಾಯಿಸುತ್ತಿವೆ. ಸರ್ಕಾರ ಖಾಸಗಿ ಶಾಲೆಗಳ ಶುಲ್ಕಕ್ಕೆ ಕಡಿವಾಣ ಹಾಕುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸಿಎಂ ಯಡಿಯೂರಪ್ಪ ವಿರುದ್ದವೂ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Aam Aadmi Party protest

ಎಸ್ಎಸ್ಎಲ್ಸಿ ಬೋರ್ಡ್ಗೆ ಮುತ್ತಿಗೆ ಹಾಕಿದ ಆಮ್ ಆದ್ಮಿ ಪಾರ್ಟಿ

ಇದನ್ನೂ ಓದಿ: SSLC Exam 2021: ಜುಲೈ 19 ಹಾಗೂ 22ರಂದು ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ