ಹಾವು ಕಚ್ಚಿ ಅಪ್ಪ ಸಾವು: ತಂದೆಯ ಚಿತೆಗೆ ಮೂವರು ಪುತ್ರಿಯರಿಂದ ಅಗ್ನಿಸ್ಪರ್ಶ, ಅಂತಿಮ ಸಂಸ್ಕಾರ

| Updated By: ಸಾಧು ಶ್ರೀನಾಥ್​

Updated on: Dec 11, 2021 | 1:14 PM

ಗಂಡು ಮಕ್ಕಳು ಚಿತೆಗೆ ಅಗ್ನಿಸ್ಪರ್ಶ ಮಾಡುವ ಪದ್ಧತಿ ಹಿಂದೂ ಸಂಪ್ರದಾಯದಲ್ಲಿದೆ. ಆದರೆ ಪುತ್ರಿಯರು ಈ ಕಾರ್ಯವನ್ನು ನೆರವೇರಿಸಿ ಸಂಪ್ರದಾಯಗಳನ್ನು ಬದಿಗಿಟ್ಟು ತಂದೆಯ ಅಂತ್ಯಕ್ರಿಯೆ ಮಾಡಿದ್ದಾರೆ. ತಂದೆಯ ಚಿತೆಗೆ ಅವರ ಹೆಣ್ಣು ಮಕ್ಕಳೇ ಅಗ್ನಿ ಸ್ಪರ್ಶ ಮಾಡುತ್ತಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಹಾವು ಕಚ್ಚಿ ಅಪ್ಪ ಸಾವು: ತಂದೆಯ ಚಿತೆಗೆ ಮೂವರು ಪುತ್ರಿಯರಿಂದ ಅಗ್ನಿಸ್ಪರ್ಶ, ಅಂತಿಮ ಸಂಸ್ಕಾರ
ಹಾವು ಕಚ್ಚಿ ಅಪ್ಪ ಸಾವು: ತಂದೆಯ ಚಿತೆಗೆ ಮೂವರು ಪುತ್ರಿಯರಿಂದ ಅಗ್ನಿಸ್ಪರ್ಶ, ಅಂತಿಮ ಸಂಸ್ಕಾರ
Follow us on

ಶಿವಮೊಗ್ಗ: ಹಾವು ಕಚ್ಚಿ ಮೃತಪಟ್ಟ ತಂದೆಯ ಚಿತೆಗೆ ಮೂವರು ಹೆಣ್ಣು ಮಕ್ಕಳು ಅಗ್ನಿಸ್ಪರ್ಶ ಮಾಡಿ, ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ. ಭದ್ರಾವತಿ ಮೈಸೂರು ಕಾಗದ ಕಾರ್ಖಾನೆಯ ನಿವೃತ್ತ ಕಾರ್ಮಿಕ, ಶಿವಮೊಗ್ಗ ತಾಲೂಕಿನ ನಿಧಿಗೆ ನಿವಾಸಿ ಆರ್. ಜಗನ್ನಾಥ್‌ ಅವರು ಹಾವು ಕಡಿತದಿಂದ ಡಿಸೆಂಬರ್ 8 ರಂದು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು. ಮರು ದಿನ ಡಿಸೆಂಬರ್ 9 ರಂದು ಮೃತ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಶಿವಮೊಗ್ಗ ರೋಟರಿ ಚಿತಾಗಾರದಲ್ಲಿ ನಡೆಸಲಾಯಿತು. ಅಂತ್ಯಕ್ರಿಯೆಯಲ್ಲಿ ಜಗನ್ನಾಥ್‌ ಅವರ ಮೂವರು ಪುತ್ರಿಯರು ಚಿತೆಗೆ ಅಗ್ನಿಸ್ಪರ್ಶ ಮಾಡುವ ಮೂಲಕ ತಮ್ಮ ತಂದೆಗೆ ಅಂತಿಮ ಗೌರವ ಸಲ್ಲಿಸಿದರು.

ಗಂಡು ಮಕ್ಕಳು ಚಿತೆಗೆ ಅಗ್ನಿಸ್ಪರ್ಶ ಮಾಡುವ ಪದ್ಧತಿ ಹಿಂದೂ ಸಂಪ್ರದಾಯದಲ್ಲಿದೆ. ಆದರೆ ಪುತ್ರಿಯರು ಈ ಕಾರ್ಯವನ್ನು ನೆರವೇರಿಸಿ ಸಂಪ್ರದಾಯಗಳನ್ನು ಬದಿಗಿಟ್ಟು ತಂದೆಯ ಅಂತ್ಯಕ್ರಿಯೆ ಮಾಡಿದ್ದಾರೆ. ತಂದೆಯ ಚಿತೆಗೆ ಅವರ ಹೆಣ್ಣು ಮಕ್ಕಳೇ ಅಗ್ನಿ ಸ್ಪರ್ಶ ಮಾಡುತ್ತಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Published On - 1:12 pm, Sat, 11 December 21