ಬೆಂಗಳೂರು, ಜ.25: ನಾಳೆಯಿಂದ ಮೂರು ದಿನಗಳ ಕಾಲ ರಜೆ ಇರುವ ಹಿನ್ನೆಲೆ ಉದ್ಯೋಗ ಸೇರಿದಂತೆ ಇನ್ನಿತರ ಜೀವನಕ್ಕಾಗಿ ಬೆಂಗಳೂರಿನಲ್ಲಿ (Bengaluru) ಕೆಲಸ ಮಾಡುತ್ತಿರುವ ಜನರು ತಮ್ಮ ಊರಿನತ್ತ ಹೊರಟ್ಟಿದ್ದಾರೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಖಾಸಗಿ ಬಸ್ ಮಾಲೀಕರು, ದುಪ್ಪಟ್ಟು ಟಿಕೆಟ್ ದರ ಏರಿಸಿದ್ದಾರೆ. ಅದಾಗ್ಯೂ, ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ಹೋಗುವ ಖಾಸಗಿ ಬಸ್ಗಳು ಬಹುತೇಕ ಭರ್ತಿಯಾಗಿವೆ.
ಜನವರಿ ತಿಂಗಳಿನಲ್ಲಿ ಎರಡನೇ ಬಾರಿಗೆ ಬ್ಯಾಕ್ ಟು ಬ್ಯಾಕ್ ರಜೆ ಸಿಗುತ್ತಿದೆ. ಇಂದು ರಾತ್ರಿಯೇ ಸಿಲಿಕಾನ್ ಸಿಟಿಯಿಂದ ತೆರಳಲು ಜನರು ತಯಾರಾಗಿದ್ದಾರೆ. ಸಾಲು ಸಾಲು ರಜೆ ಹಿನ್ನೆಲೆ ಮೂರು ದಿನ ಪ್ರವಾಸ ಮಾಡಲು ಹಲವರ ಪ್ಲಾನ್ ಮಾಡಿಕೊಂಡಿದ್ದಾರೆ. ರಜೆ ಅಂತ ಊರಿನ ಕಡೆ ಹೊರಟವರಿಗೆ ಖಾಸಗಿ ಬಸ್ ಮಾಲೀಕರು ಮತ್ತೆ ಶಾಕ್ ಕೊಟ್ಟಿದ್ದಾರೆ.
ನಾಳೆ ಗಣರಾಜೋತ್ಸ, ನಾಡಿದ್ದು ನಾಲ್ಕನೇ ಶನಿವಾರ, 28ನೇ ತಾರೀಕು ಭಾನುವಾರ. ಹೀಗಾಗಿ ಎರಡರಿಂದ ಮೂರು ಪಟ್ಟು ಟಿಕೆಟ್ ದರವನ್ನು ಏರಿಸುವ ಮೂಲಕ ಖಾಸಗಿ ಬಸ್ ಮಾಲೀಕರು ಹೆಚ್ಚಿನ ಹಣ ಗಳಿಸಲು ಮುಂದಾಗಿದ್ದಾರೆ. ಟಿಕೆಟ್ ಬುಕ್ಕಿಂಗ್ ವೆಬ್ಸೈಟ್ನಲ್ಲಿಯೂ ಮನಸ್ಸಿಗೆ ಬಂದಂತೆ ದರ ಏರಿಕೆ ಮಾಡಿದ್ದಾರೆ. ಖಾಸಗಿ ಬಸ್ಗಳು ಇಂತಹ ಸುಲಿಗೆ ವಿರುದ್ಧ ಜನರು ಆಕ್ರೋಶ ಹೊರಹಾಕುತ್ತಲೇ ಇದ್ದಾರೆ.
ಇದನ್ನೂ ಓದಿ: ಆರೋಗ್ಯ ಸರಿ ಇಲ್ಲವೆಂದು ಆಫೀಸ್ಗೆ ರಜೆ ಹಾಕಿ, ಒಂದೇ ವಿಮಾನದಲ್ಲಿ ಬಾಸ್ ಮತ್ತು ಉದ್ಯೋಗಿ ಮುಖಾಮುಖಿಯಾದಾಗ
ಸಂಕ್ರಾತಿ ರಜೆ ಸಂದರ್ಭದಲ್ಲಿಯೂ ಖಾಸಗಿ ಬಸ್ ಮಾಲೀಕರು ಸುಲಿಗೆ ಮಾಡಿದ್ದರು. ಇದೀಗ ರಿಪಬ್ಲಿಕ್ ಡೇ ಬ್ಯಾಕ್ ಟು ಬ್ಯಾಕ್ ರಜೆಗೆ 20 ದಿನದ ಹಿಂದೆ ಟೆಕೆಟ್ ಹೆಚ್ಚಳ ಮಾಡಲಾಗಿತ್ತು. ಮನಸಿಗೆ ಬಂದಂತೆ ದರ ಏರಿಕೆ ಮಾಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳದೆ ಸಾರಿಗೆ ಇಲಾಖೆಯೂ ನಿರ್ಲಕ್ಷ್ಯವಹಿಸುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ