ಉತ್ತರ ಕನ್ನಡ ಜಿಲ್ಲಾ BJP ಪ್ರಧಾನ ಕಾರ್ಯದರ್ಶಿ ನೇಮಕ ಸಭೆಯಲ್ಲಿ ವಾಗ್ವಾದ; ಹೊರನಡೆದ ಅನಂತ್​ ಕುಮಾರ್ ಹೆಗಡೆ

ಆರೋಗ್ಯದ ಕಾರಣ ನೀಡಿ ನಾಲ್ಕು ವರ್ಷ ಜನರ ಕೈಗೆ ಸಿಗದಿದ್ದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಉತ್ತರ ಕನ್ನಡ ಕ್ಷೇತ್ರದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಆದರೆ, ಸಂಸದರ ನಿರ್ಧಾರಕ್ಕೆ ಸ್ವಪಕ್ಷದಲ್ಲೇ ಮಣ್ಣನೆ ಸಿಗುತ್ತಿಲ್ಲ ಎಂಬ ಅಂಶ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ನೇಮಕ ಮಾಡುವ ಸಭೆಯಿಂದಾಗಿ ಹೊರಬಿದ್ದಿದೆ.

ಉತ್ತರ ಕನ್ನಡ ಜಿಲ್ಲಾ BJP ಪ್ರಧಾನ ಕಾರ್ಯದರ್ಶಿ ನೇಮಕ ಸಭೆಯಲ್ಲಿ ವಾಗ್ವಾದ; ಹೊರನಡೆದ ಅನಂತ್​ ಕುಮಾರ್ ಹೆಗಡೆ
ಅನಂತ್ ಕುಮಾರ್ ಹೆಗಡೆ
Follow us
ವಿನಾಯಕ ಬಡಿಗೇರ್​, ಉತ್ತರ ಕನ್ನಡ
| Updated By: Rakesh Nayak Manchi

Updated on: Jan 25, 2024 | 10:22 AM

ಕಾರವಾರ, ಜ.25: ಆರೋಗ್ಯದ ಕಾರಣ ನೀಡಿ ನಾಲ್ಕು ವರ್ಷ ಜನರ ಕೈಗೆ ಸಿಗದಿದ್ದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ (Ananth Kumar Hegde) ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಉತ್ತರ ಕನ್ನಡ (Uttara Kannada) ಕ್ಷೇತ್ರದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಸಂಸದರ ನಿರ್ಧಾರಕ್ಕೆ ಸ್ವಪಕ್ಷದಲ್ಲೇ ಮಣ್ಣನೆ ಸಿಗುತ್ತಿಲ್ಲ ಎಂಬ ಅಂಶ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ನೇಮಕ ಮಾಡುವ ಸಭೆಯಿಂದಾಗಿ ಹೊರಬಿದ್ದಿದೆ.

ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ನೇಮಕ ಮಾಡುವ ಸಭೆ ಜನವರಿ 23 ರಂದು ನಡೆದಿದ್ದು, ಈ ಸಭೆಯಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ ಮತ್ತು ಉತ್ತರ ಕನ್ನಡ ಬಿಜೆಪಿ ಜಿಲ್ಲಾದ್ಯಕ್ಷ ಎನ್​ಎಸ್ ಹೆಗಡೆ ನಡುವೆ ಭಾರೀ ವಾಗ್ವಾದ ನಡೆದಿರುವುದು ಬಹಿರಂಗವಾಗಿದೆ.

ಇದನ್ನೂ ಓದಿ: ಮುರುಕುರಾಮಯ್ಯನ ಗ್ಯಾರಂಟಿಗಳು ಉಳಿಯಲ್ಲ, ಅವುಗಳು ಸುಳ್ಳು: ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಡುಗಿದ ಅನಂತ್​ ಕುಮಾರ್ ಹೆಗಡೆ

ಜಿಲ್ಲಾದ್ಯಕ್ಷ ಎನ್​ಎಸ್ ಹೆಗಡೆ, ಮಾಜಿ ಸ್ಪಿಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಪ್ರಧಾನ ಕಾರ್ಯದರ್ಶಿಗಳ ಜೊತೆ ಗೌಪ್ಯ ಸಭೆ ನಡೆದಿತ್ತು. ಈ ಸಭೆಯಲ್ಲಿ ಅನಂತ್​ ಕುಮಾರ್ ಹೆಗಡೆ ಸೂಚಿಸುವ ಹೆಸರಿಗೆ ಸ್ಪಿಕರ್ ಕಾಗೇರಿ ಒಲವು ವ್ಯಕ್ತಪಡಿಸದ ಹಿನ್ನೆಲೆ ರಾಜ್ಯ ಮಟ್ಟದ ನಾಯಕರಿಗೆ ಆಯ್ಕೆ ಜವಾಬ್ದಾರಿ ಕೊಡುವುದಕ್ಕೆ ತಿರ್ಮಾನಿಸಿ ಕಾಗೇರಿ ಅವರು ಸಭೆಯಿಂದ ಹೊರ ನಡೆದರು.

ಕಾಗೇರಿ ಸಭೆಯಿಂದ ಹೊರ ನಡೆದ ಬಳಿಕ ಲಿಸ್ಟ್ ಫೈನಲ್ ಮಾಡಿ ಎಂಬ ಅನಂತ್ ಕುಮಾರ್ ಹೆಗಡೆ ಸೂಚನೆಗೆ ಜಿಲ್ಲಾಧ್ಯಕ್ಷರು ಸೊಪ್ಪು ಹಾಕಿಲ್ಲ. ಕಾಗೇರಿ ಅವರು ಇರುವಾಗಲೇ ಹೇಳಬೇಕಿತ್ತು. ಅವರು ಹೊದ ಮೇಲೆ ಹಿಗೆಲ್ಲ ಮಾಡಿದರೆ ನನಗೆ ಕೆಟ್ಟ ಹೆಸರ ಬರುತ್ತದೆ. ನಾನು ಲಿಸ್ಟ್ ಮಾಡಲ್ಲ ಎಂದಿದ್ದಾರೆ. ಈ ವೇಳೆ ಸಿಟ್ಟಿಗೆದ್ದ ಅನಂತ್ ಕುಮಾರ್ ಹೆಗಡೆ, ಇಂತಹ ಸಭೆಗೆಲ್ಲ ನನ್ನನ್ನು ಯಾಕೆ ಕರೆಯುತ್ತೀರಾ? ಎಲ್ಲ ಅರ್ಧಂಬರ್ಧ ಮಾಡುತ್ತೀರಾ ಎಂದು ಏರು ಧ್ವನಿಯಲ್ಲಿ ಹರಿಹಾಯ್ದು ಸಭೆಯಿಂದ ಹೊರ ನಡೆದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್