AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರೋಗ್ಯ ಸರಿ ಇಲ್ಲವೆಂದು ಆಫೀಸ್​ಗೆ ರಜೆ ಹಾಕಿ, ಒಂದೇ ವಿಮಾನದಲ್ಲಿ ಬಾಸ್​ ಮತ್ತು ಉದ್ಯೋಗಿ ಮುಖಾಮುಖಿಯಾದಾಗ…

ನೀವೂ ಕೂಡ ಆರೋಗ್ಯ ಸರಿ ಇಲ್ಲ ಎಂದು ಆಫೀಸ್​ಗೆ ರಜೆ ಹಾಕಿ ಎಲ್ಲೋ ಹೋಗಿ ಮ್ಯಾನೇಜರ್​ ಕೈಲಿ ಸಿಕ್ಕಿಹಾಕಿಕೊಂಡ ಅನುಭವವಿದೆಯಾ, ಆಸ್ಟ್ರೇಲಿಯಾದ ಮಹಿಳೆಯೊಬ್ಬರಿಗೆ ಇಂಥಾ ಅನುಭವವಾಗಿದೆ, ಹುಷಾರಿಲ್ಲ ಎಂದು ಸುಳ್ಳು ಹೇಳಿ ರಜೆ ಪಡೆದು ಕೊನೆಗೆ ಬಾಸ್ ಹಾಗೂ ಉದ್ಯೋಗಿ ಇಬ್ಬರೂ ಮುಖಾಮುಖಿಯಾಗಿರುವ ಘಟನೆ ನಡೆದಿದೆ.

ಆರೋಗ್ಯ ಸರಿ ಇಲ್ಲವೆಂದು ಆಫೀಸ್​ಗೆ ರಜೆ ಹಾಕಿ, ಒಂದೇ ವಿಮಾನದಲ್ಲಿ ಬಾಸ್​ ಮತ್ತು ಉದ್ಯೋಗಿ ಮುಖಾಮುಖಿಯಾದಾಗ...
ವಿಮಾನ
ನಯನಾ ರಾಜೀವ್
|

Updated on:Jan 23, 2024 | 3:26 PM

Share

ಆರೋಗ್ಯ ಸರಿ ಇಲ್ಲ ಎಂದು ರಜೆ ಹಾಕುವುದು ಆಫೀಸ್​ ಅಲ್ಲಿ ಸಾಮಾನ್ಯ. ಆದರೆ ಕೆಲ ಸಂದರ್ಭದಲ್ಲಿ ಅವರ ಆರೋಗ್ಯ ಸರಿ ಇರಬಹುದು ಆದರೂ ರಜೆ ತೆಗೆದುಕೊಂಡಿರಬಹುದು ಎನ್ನುವ ಅನುಮಾನ ಮ್ಯಾನೇಜರ್​ಗೆ ಇದ್ದರೂ ಕೇಳಲು ಸಾಧ್ಯವಾಗದಂತಹ ಪರಿಸ್ಥಿತಿ ಇರುತ್ತದೆ. ಇದೆಲ್ಲ ಮೊದಲು ಹಳ್ಳಿಯ ಶಾಲೆಗಳಲ್ಲಿ ನಡೆಯುತ್ತಿದ್ದ ಪ್ರಸಂಗ, ಒಂದು ದಿನ ಹೊಟ್ಟೆ ನೋವು, ಒಂದು ದಿನ ಕಾಲು ನೋವು, ತಲೆ ನೋವು ಹೀಗೆ ಎಲ್ಲಾ ನೋವುಗಳು ನಮಗೇ ಬರುತ್ತಿದ್ದುದು ಸರಿ. ಆಗ ಶಿಕ್ಷಕರಿಗೂ ತಿಳಿದಿರುತ್ತಿತ್ತು ಈ ನೋವು ನಿಜವಾದ್ದಲ್ಲ ಎಂದು ಆದರೆ ಮಕ್ಕಳ ಮನಸ್ಸಿಗೆ ನೋವು ಮಾಡಬಾರದೆಂದು ಕೆಲವೊಮ್ಮೆ ನಿಜವಾಗಿಯೂ ಬಂದಿರಬಹುದೆಂದು ತಿಳಿದು ರಜೆ ಕೊಡುತ್ತಿದ್ದರು.

ಆದರೆ ಇದೇ ಪ್ರವೃತ್ತಿ ದೊಡ್ಡವರಾದ ಬಳಿಕವೂ ಕಡಿಮೆಯಾಗುವುದಿಲ್ಲ, ವಾರಪೂರ್ತಿ ದುಡಿದು ಒಂದು ದಿನ ರಜೆ ಇದ್ದರೂ ಇನ್ನೂ ಸುಸ್ತು ಕಡಿಮೆಯಾಗಲಿಲ್ಲವೆನಿಸಿದರೆ ಹುಷಾರಿಲ್ಲವೆಂದು ರಜೆಹಾಕುವವರಿದ್ದಾರೆ. ಸ್ನೇಹಿತರ ಜತೆ ಹೊರಗೆ ಹೋಗುವವರಿದ್ದಾರೆ. ಇದಕ್ಕೆ ಹೋಲುವಂತಹ ಘಟನೆಯೊಂದು ಆಸ್ಟ್ರೇಲಿಯಾದಲ್ಲೂ ನಡೆದಿದೆ.

ಮಹಿಳಾ ಸಿಬ್ಬಂದಿಯೊಬ್ಬರು ಆರೋಗ್ಯ ಸರಿ ಇಲ್ಲ ಎಂದು ಸುಳ್ಳು ಹೇಳಿ ಆಫೀಸ್​ಗೆ ರಜೆ ಹಾಕಿ ವಿಮಾನ ಏರಿದ್ದರು, ಆದರೆ ದುರಾದೃಷ್ಟವೆಂಬಂತೆ ಆಕೆಯ ಬಾಸ್​ ಕೂಡ ಅದೇ ವಿಮಾನದಲ್ಲಿ ಕಾಣಿಸಿಕೊಂಡಿದ್ದಾರೆ, ಒಬ್ಬರನ್ನೊಬ್ಬರು ಮುಖ ನೋಡಿಕೊಂಡಾಗ ಇಬ್ಬರಿಗೂ ಅಲ್ಲಿಂದ ಹೋಗಲಾಗದ ಪರಿಸ್ಥಿತಿಯಲ್ಲಿ ಇಬ್ಬರ ಮನಸ್ಸಿನಲ್ಲೂ ಎಂಥಾ ಆಲೋಚನೆ ಓಡಿರಬಹುದು.

ನನಗೆ ಸುಳ್ಳು ಹೇಳಿ ಈಗ ವಿಮಾನ ಏರಿದ್ದೀಯಾ ಎಂದು ಬಾಸ್​ ಮನಸ್ಸಿನಲ್ಲೇ ಅಂದುಕೊಂಡರೆ ಅಯ್ಯೋ ಈ ಮ್ಯಾನೇಜರ್ ಮುಖ ಇಲ್ಲೂ ನೋಡಬೇಕಲ್ಲ, ನಾನು ಹೇಳಿದ್ದು ಸುಳ್ಳು ಅಂತಾ ಗೋತ್ತಾಗೋಯ್ತು ಎಂದು ಗೊಣಗಿಕೊಳ್ಳುವುದಂತೂ ಸತ್ಯ.

ಟಿಕ್​ಟಾಕ್ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ, ಸೋರೆಸ್​ ಎನ್ನುವ ಮಹಿಳೆಯ ವಿಡಿಯೋ ಇದಾಗಿದೆ. ಜೆಟ್‌ಸ್ಟಾರ್ ವಿಮಾನದಿಂದ ಪ್ರಯಾಣಿಕರು ಹೋಗುತ್ತಿರುವ ವೀಡಿಯೊ ಕಾಣಬಹುದು. ಮ್ಯಾನೇಜರ್​ ಅನ್ನು ಮೊದಲು ನೋಡಿದ್ದ ಆಕೆ ಮಾಸ್ಕ್​, ಸನ್​ ಗ್ಲಾಸ್​, ಕ್ಯಾಪ್​ ಧರಿಸಿ ತಾನು ಎಂದು ತಿಳಿಯದಂತೆ ನೋಡಿಕೊಳ್ಳುತ್ತಾಳೆ, ಆದರೂ ಮ್ಯಾನೇಜರ್ ಆಕೆಯನ್ನು ಕಂಡುಹಿಡಿದುಬಿಡುತ್ತಾರೆ.

ಬಳಕೆದಾರರು ತಮಗಾದ ಅನುಭವವನ್ನೂ ಕಮೆಂಟ್​ ಮಾಡಿದ್ದಾರೆ, ಒಮ್ಮೆ ನಾನು ರಜೆ ಹಾಕಿ ಶಾಪಿಂಗ್​ಗೆ ಹೋಗಿದ್ದೆ, ನನ್ನ ಹಿಂದೆಯೇ ನನ್ನ ಬಾಸ್​ ಕೂಡ ಇದ್ದರು ಎಂದು ಹೇಳಿದ್ದಾರೆ.

ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:16 pm, Tue, 23 January 24

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!