ತಿರುಪತಿ ಲಡ್ಡು ವಿವಾದ: ಇಡಿ ಕ್ಷೇತ್ರ ಗೋ ಮೂತ್ರದ ಮೂಲಕ ಶುದ್ಧೀಕರಣ ಆಗಬೇಕು ಎಂದ ಮುತಾಲಿಕ್

| Updated By: ಗಂಗಾಧರ​ ಬ. ಸಾಬೋಜಿ

Updated on: Sep 20, 2024 | 7:32 PM

ತಿರುಪತಿ ಲಡ್ಡು ವಿವಾದ ವಿಚಾರವಾಗಿ ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್​​, ತಿರುಪತಿ ತಿಮ್ಮಪ್ಪ ಸಹ ಕ್ಷಮಿಸದ ಅಪರಾಧ ಜಗನ್ ರೆಡ್ಡಿ ಮಾಡಿದ್ದಾರೆ. ಹೀಗಾಗಿ ಇಡಿ ಕ್ಷೇತ್ರ ಗೋ ಮೂತ್ರದ ಮೂಲಕ ಶುದ್ಧೀಕರಣ ಆಗಬೇಕು ಎಂದು ಹೇಳಿದ್ದಾರೆ.

ತಿರುಪತಿ ಲಡ್ಡು ವಿವಾದ: ಇಡಿ ಕ್ಷೇತ್ರ ಗೋ ಮೂತ್ರದ ಮೂಲಕ ಶುದ್ಧೀಕರಣ ಆಗಬೇಕು ಎಂದ ಮುತಾಲಿಕ್
ತಿರುಪತಿ ಲಡ್ಡು ವಿವಾದ: ಇಡಿ ಕ್ಷೇತ್ರ ಗೋ ಮೂತ್ರದ ಮೂಲಕ ಶುದ್ಧೀಕರಣ ಆಗಬೇಕು ಎಂದ ಮುತಾಲಿಕ್
Follow us on

ಧಾರವಾಡ, ಸೆಪ್ಟೆಂಬರ್ 20: ‘ತಿರುಪತಿ ತಿಮ್ಮಪ್ಪನ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ’ ಆರೋಪ ಸದ್ಯ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈ ಬಗ್ಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ (Pramod Muthalik) ಮಾತನಾಡಿದ್ದು, ಚಂದ್ರಬಾಬು ನಾಯ್ಡು ಹೇಳಿಕೆ ದೇಶದಲ್ಲಿ ಸಂಚಲನ ಮೂಡಿಸಿದೆ. ಇಡಿ ಕ್ಷೇತ್ರ ಗೋ ಮೂತ್ರದ ಮೂಲಕ ಶುದ್ಧೀಕರಣ ಆಗಬೇಕು ಎಂದು ಹೇಳಿದ್ದಾರೆ.

ಇವರಿಗೆ ಹಿಂದೂ ಸಮಾಜ ಬೆಂಬಲಕ್ಕೆ ನಿಲ್ಲಬೇಕು

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಂದ್ರಬಾಬು ನಾಯ್ಡು, ಪವನ ಕಲ್ಯಾಣ, ಮತಾಂತರ, ಇಸ್ಲಾಮೀಕರಣ ಶುದ್ಧೀಕರಣ ಮಾಡುತ್ತಿದ್ದಾರೆ. ತಿರುಪತಿ ತಿಮ್ಮಪ್ಪನ ಕ್ಷೇತ್ರದಲ್ಲಾದ ಘೋರ ಅನ್ಯಾಯ ತೊಳೆಯುವ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಹಿಂದೂ ಸಮಾಜ ಬೆಂಬಲಕ್ಕೆ ನಿಲ್ಲಬೇಕು. ಸಿಇಒ ಅಮಾನತು, ಇನ್ನಾರೋ ಮೇಲೆ ಕೇಸ್ ಹಾಕಿದರೆ ಸಾಲದು. ಇಡಿ ಕ್ಷೇತ್ರ ಗೋ ಮೂತ್ರದ ಮೂಲಕ ಶುದ್ಧೀಕರಣ ಆಗಬೇಕು ಎಂದಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ದೇಗುಲಗಳಲ್ಲಿ ನಂದಿನಿ ತುಪ್ಪ ಬಳಕೆಗೆ ಸೂಚನೆ: ಧಾರ್ಮಿಕ ದತ್ತಿ ಇಲಾಖೆ ಆದೇಶ

ಲಡ್ಡುವಿನಲ್ಲಿ ಶುದ್ಧವಾದ ತುಪ್ಪ ಬಳಸಿಲ್ಲ. ಗೋಮಾಂಸದ ಕೊಬ್ಬು, ಮೀನಿನ ಎಣ್ಣೆ ಉಪಯೋಗಿಸಿದ್ದಾರೆ ಎಂದು ಹಿಂದಿನ ಜಗನ್ ರೆಡ್ಡಿ ಸರ್ಕಾರದ ಮೇಲೆ ಆರೋಪ ಮಾಡಲಾಗಿದೆ. ಇದು ಸಣ್ಣ ಆರೋಪವಲ್ಲ. ಬಹಳ ಗಂಭೀರವಾದ ಆರೋಪ ಎಂದು ಹೇಳಿದ್ದಾರೆ.

ಗುಜರಾತ್ ಪ್ರಯೋಗಾಲಯದ ವರದಿ ಸಹ ಬಹಿರಂಗಪಡಿಸಿದ್ದಾರೆ. ಇದು ನೂರಕ್ಕೆ ನೂರು ಜಗನ್ ರೆಡ್ಡಿ ಅವಧಿಯ ಘೋರ ಅಪರಾಧ. ಅಕ್ಷಮ್ಯ ಅಪರಾಧ. ಇದನ್ನು ಹಿಂದೂ ಸಮುದಾಯ ಕ್ಷಮಿಸುವುದಿಲ್ಲ. ತಿರುಪತಿ ತಿಮ್ಮಪ್ಪ ಸಹ ಕ್ಷಮಿಸದ ಅಪರಾಧ ಜಗನ್ ರೆಡ್ಡಿ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಎನ್​ಕೌಂಟರ್ ಮಾಡಬೇಕು: ಮುತಾಲಿಕ್ ಕಿಡಿ

ಇಡೀ ಜಗತ್ತಿನ ಕೋಟ್ಯಂತರ ಭಕ್ತರು ಅಲ್ಲಿಗೆ ಬರುತ್ತಾರೆ. ಭಕ್ತಿ-ಭಾವದಿಂದ ತುಂಬಿ ತುಳಕುವ ಪ್ರಸಾದದಲ್ಲಿ ಇಂತಹ ದ್ರೋಹ ಮಾಡಿದ್ದಾರೆ. ಇದನ್ನು ಕ್ಷಮಿಸಲು ಸಾಧ್ಯವಿಲ್ಲ. ಈ ಘೋರ ಅಪರಾಧ ಮಾಡಿದವರನ್ನು ಎನ್​ಕೌಂಟರ್ ಮಾಡಬೇಕು. ಇದು ಕ್ರಿಮಿನಲ್ ಅಪರಾಧ. ಹಿಂದೂಗಳ ನಂಬಿಕೆ, ವಿಶ್ವಾಸಕ್ಕೆ ಆಘಾತ ಮಾಡುವ ಕೆಲಸ. ಪ್ರಸಾದದ ಪವಿತ್ರತೆಗೆ ಕಳಂಕ ತಂದ ಕೆಲಸ. ತಪ್ಪಿತಸ್ಥರ ಮೇಲೆ ಕೋರ್ಟ್ ಸೆಕ್ಷನ್ ಹಾಕಿದರೆ ಸಾಲದು, ಕಠಿಣ ಕ್ರಮ ಆಗಬೇಕು ಎಂದಿದ್ದಾರೆ.

ಇದನ್ನೂ ಓದಿ: ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಆರೋಪಕ್ಕೆ ಕೆಎಂಎಫ್​ ಅಧ್ಯಕ್ಷ ಸ್ಪಷ್ಟನೆ

ಇದೇ ಲಡ್ಡುವಿನಲ್ಲಿ ವಿಷ ಹಾಕಿದ್ರೆ? ಇದೇ ಲಡ್ಡುವಿನಲ್ಲಿ ಸ್ಲೋ ಪಾಯಿಸನ್ ಹಾಕಿದ್ರೆ? ಅದನ್ನೆಲ್ಲ ಹಾಕುವಂತಹ ನೀಚ ಬುದ್ಧಿ, ಪ್ರವೃತ್ತಿ ಇವತ್ತಿನ ರಾಜಕಾರಣಗಳಲ್ಲಿದೆ. ಜಗನ್ ತಂದೆ ವೈ.ಎಸ್. ರಾಜಶೇಖರ ರೆಡ್ಡಿ ಅಲ್ಲಿನ ಬೆಟ್ಟಗಳನ್ನು ಕ್ರಿಶ್ಚಿಯನ್​ರಿಗೆ ಕೊಟ್ಟಿದ್ದರು. ಹೀಗಾಗಿ ಅವರು ತಿಮ್ಮಪ್ಪನ ಶಾಪದಿಂದ ಸತ್ತರು. ಅವರ ಎಲುಬು ಸಹ ಸಿಗಲಿಲ್ಲ. ಆತ ಸುಟ್ಟು ಬೂದಿಯಾಗಿ ಹೋಗಿದ್ದ. ಎಲ್ಲಿ‌ ಸತ್ತಿದ್ದಾರೆಂಬುದ ಸುಳಿವು ಸಿಗದಂತಹ ಸ್ಥಳದಲ್ಲಿ ಅಪಘಾತ ಆಗಿತ್ತು. ಅದೇ ಮಾದರಿಯಲ್ಲಿ ಜಗನ್ ಹೀನಾಯವಾಗಿ ಸೋತಿದ್ದಾರೆ. ಇದು ಹಿಂದು ಸಮಾಜ ಮತ್ತು ತಿರುಪತಿ ತಿಮ್ಮಪ್ಪನ ಶಾಪ ಎಂದು ವಾಗ್ದಾಳಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.