ಪ್ರವಾಸಿಗರಿಗೆ ಮುದ ನೀಡುತ್ತಿದೆ ವಲಸೆ ಹಕ್ಕಿಗಳು: ಜೋಯಿಡಾ ಕಾನನದಲ್ಲಿ ಬೀಡುಬಿಟ್ಟಿವೆ ಪಕ್ಷಿ ಸಂಕುಲ

ಕಾನನ ನಡುವೆ ವಾಸಕ್ಕೆ ಬರುವ ಪ್ರವಾಸಿಗಗರಿಗೆ ಚಳಿಗಾಲ ಮುಗಿಯುತ್ತಿರುವ ಈ ಹೊತ್ತಿಗೆ ರಾಶಿರಾಶಿ ಪಕ್ಷಿ ಸಂಕುಲವೇ ಬಂದು ಜೋಯ್ಡಾ ಕಾಡು ಸೇರುತ್ತಿದ್ದು, ಸಾಕಷ್ಟು ಜಾತಿಯ ಪಕ್ಷಿಸಂಕುಲ ಈಗ ಕಾಣಿಸಿಗುತ್ತಿವೆ.

ಪ್ರವಾಸಿಗರಿಗೆ ಮುದ ನೀಡುತ್ತಿದೆ ವಲಸೆ ಹಕ್ಕಿಗಳು: ಜೋಯಿಡಾ ಕಾನನದಲ್ಲಿ ಬೀಡುಬಿಟ್ಟಿವೆ ಪಕ್ಷಿ ಸಂಕುಲ
ಜೋಯಿಡಾದಲ್ಲಿ ಕಂಡು ಬಂದ ಪಕ್ಷಿ
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 28, 2021 | 7:43 PM

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ಅಂದರೆ ಸಾಕು ಅದು ಪ್ರವಾಸಿಗರ ಪಾಲಿನ ಸ್ವರ್ಗ ಎಂದೇ ಪ್ರಸಿದ್ಧಿ ಪಡೆದ ಜಾಗ. ಇಲ್ಲಿನ ಕಾನನದ ರೆಸಾರ್ಟ್​ಗಳ ಮಧ್ಯೆ ಕಾಡಿನ ಹಕ್ಕಿಗಳಂತೆ ಕಾಲ ಕಳಿಯಬೇಕು ಜೊತೆಗೆ ನಗರ ಜೀವನದ ಜಂಜಾಟದಿಂದ ದೂರವಿರಬೇಕು ಎಂದು ಅದಷ್ಟೋ ಜನ ಇಲ್ಲಿಗೆ ಬರುತ್ತಾರೆ. ಹೀಗೆ ಬರುವ ಪ್ರವಾಸಿಗರಿಗೀಗ ಕಾಡಿನ ಹಕ್ಕಿಗಳು ಮುದ ನೀಡುತ್ತಿದ್ದು, ಪ್ರವಾಸಿಗರನ್ನು ಮತ್ತಷ್ಟು ಖುಷಿಪಡಿಸುತ್ತಿದೆ.

ಉತ್ತರಕನ್ನಡ ಜಿಲ್ಲೆಯ ಜೋಯಿಡಾ ಅರಣ್ಯ ವ್ಯಾಪ್ತಿಯ ಸ್ವಚ್ಛಂದ ಪರಿಸರದಲ್ಲಿ ಬಗೆ ಬಗೆಯ ಹಕ್ಕಿಗಳ ಕಲರವಿದ್ದು, ಅಳಿಲು ಪ್ರಭೇದದ ಪ್ರಾಣಿ ಮತ್ತು ಕಾಡಿನ ಹಕ್ಕಿಗಳನ್ನ ಇಲ್ಲಿಗೆ ಬರುವ ಜನರು ಕುತೂಹಲದಿಂದ ನೋಡುತ್ತಿದ್ದಾರೆ. ಕೊರೊನಾ ಬಳಿಕ ಜೋಯಿಡಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮುಗಿಬೀಳುತ್ತಿದ್ದು, ಇಲ್ಲಿನ ಹಕ್ಕಿಗಳ ಫೋಟೋಗ್ರಫಿ ಮಾಡುತ್ತಿದ್ದಾರೆ.

ಐಟಿ ಮಂದಿಯ ವರ್ಕ್ ಫ್ರಂ ಹೋಮ್ ಮುಂದುವರೆದಿರುವುದರಿಂದ ಇಲ್ಲಿನ ರೆಸಾರ್ಟ್ ಮತ್ತು ಹೋಮ್ ಸ್ಟೇಗಳನ್ನೇ ತಿಂಗಳಾನುಗಟ್ಟಲೆ ಬಾಡಿಗೆ ಪಡೆದು ವಾಸವಾಗಿದ್ದಾರೆ. ಚಳಿಗಾಲ ಮುಗಿಯುತ್ತಿರುವ ಈ ಹೊತ್ತಿಗೆ ರಾಶಿರಾಶಿ ಪಕ್ಷಿ ಸಂಕುಲವೇ ಜೋಯಿಡಾ ಕಾಡು ಸೇರುತ್ತಿವೆ. ಹಲವು ಜಾತಿಯ ಪಕ್ಷಿಸಂಕುಲಗಳು ಈಗ ಕಾಣಿಸಿಗುತ್ತಿವೆ.

ಹೊರರಾಜ್ಯ, ದೇಶದಿಂದ ನೂರಾರು ತಳಿಯ ಪಕ್ಷಿ ಸಂಕುಲ ಈ ಸಂದರ್ಭದಲ್ಲಿ ಪ್ರತೀ ವರ್ಷ ಆಹಾರ ಅರಸಿ ಬರುತ್ತಿದ್ದು, ಈ ಸಂದರ್ಭದಲ್ಲಿ ಇಲ್ಲಿಗೆ ಬರುವ ಪ್ರವಾಸಿಗರ ಕಣ್ಮನ ಸೆಳೆಯುತ್ತವೆ. ಅಲ್ಲದೇ ಸ್ಥಳೀಯವಾಗಿಯೂ ಕೂಡ ಫೋಟೋಗ್ರಫಿ ಮತ್ತು ಹಕ್ಕಿಗಳ ಬಗ್ಗೆ ಅಧ್ಯಯನ ಮಾಡುವವರಿಗೂ ಈ ವಲಸೆ ಹಕ್ಕಿಗಳಿಂದ ಅನುಕೂಲವಾಗಲಿದೆ. ಹೀಗೆ ವಲಸೆ ಬರುವ ಹಕ್ಕಿಗಳು ಕೆಲ ಸಮಯ ಮಾತ್ರ ಇಲ್ಲಿ ಇರಲಿದ್ದು, ನಂತರ ಅವುಗಳ ಮೂಲ ಸ್ಥಾನ ತಲುಪುತ್ತವೆ ಎಂದು ಸ್ಥಳೀಯರಾದ ರವಿ ಹೇಳಿದ್ದಾರೆ.

ಪ್ರವಾಸಿಗರನ್ನು ಸೆಳೆಯುತ್ತಿರುವ ಪಕ್ಷಿಗಳು

ಆಹಾರವನ್ನು ಅರಸಿ ಜೋಯ್ಡಾಗೆ ಬಂದ ಪಕ್ಷಿ

ಬಾತುಕೋಳಿಗಳು ನೀರಿನಲ್ಲಿರುವ ದೃಶ್ಯ

ಪ್ರವಾಸಿಗರು ಖುಷಿಯಿಂದ ಕಾಲ ಕಳೆಯುತ್ತಿರುವ ದೃಶ್ಯ

ವಿಶೇಷ ತಳಿಯ ಅಳಿಲು

ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ನವಿಲಿನ ಸೌಂದರ್ಯ

ಇದನ್ನೂ ಓದಿ:ಕಾಫಿನಾಡಲ್ಲಿ ಪಕ್ಷಿ ಪ್ರಿಯರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿದೆ ಬೆಳ್ಳಕ್ಕಿಗಳ ವೈಯ್ಯಾರ..!