ಕಾಫಿನಾಡಲ್ಲಿ ಪಕ್ಷಿ ಪ್ರಿಯರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿದೆ ಬೆಳ್ಳಕ್ಕಿಗಳ ವೈಯ್ಯಾರ..!

ಕಾಫಿನಾಡಲ್ಲಿ ಪಕ್ಷಿ ಪ್ರಿಯರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿದೆ ಬೆಳ್ಳಕ್ಕಿಗಳ ವೈಯ್ಯಾರ..!
ಬೆಳ್ಳಕ್ಕಿಗಳ ವೈಯ್ಯಾರ

ಚಳಿಗಾಲದಲ್ಲಿ ಬೆಳ್ಳಕ್ಕಿಗಳಿಗೆ ಕಾಫಿನಾಡು ಒಂಥರಾ ಹಾಟ್‌ ಫೇವರಿಟ್ ಸ್ಫಾಟ್‌.. ಅದ್ರಲ್ಲೂ ಭದ್ರಾ ನದಿ ತೀರದ ಕೆಲವೊಂದು ಸ್ಥಳಗಳಲ್ಲಿ ಬೆಳ್ಳಕ್ಕಿಗಳು ವಾಸಿಸುತ್ತಾ ಪಕ್ಷಿಪ್ರಿಯರಿಗೆ ಸಖತ್‌ ಮನರಂಜನೆ ನೀಡ್ತಿವೆ.

pruthvi Shankar

|

Jan 31, 2021 | 7:48 AM

ಚಿಕ್ಕಮಗಳೂರು: ಹಕ್ಕಿಗಳನ್ನ ನೋಡಿದ್ರೆ ಯಾರಿಗೆ ತಾನೆ ಖುಷಿಯಾಗಲ್ಲ ಹೇಳಿ.. ಹಕ್ಕಿಗಳ ಹಾಗೆ ಸ್ವಚ್ಛಂದವಾಗಿ ಹಾರಾಡಬೇಕು ಅಂತ ಎಷ್ಟೋ ಬಾರಿ ಅಂದುಕೊಂಡಿರುತ್ತೇವೆ. ಆದ್ರೆ ವಾಸ್ತವವಾಗಿ ಅದು ಸಾಧ್ಯವಾಗಲ್ಲ ಆದ್ರೂ ಕೂಡ ಮನಸ್ಸಿನಲ್ಲಿ ಆ ರೀತಿಯ ಒಂದು ಯೋಜನೆ ಬರದೇ ಇರದು. ಯೆಸ್.. ಸದ್ಯ ಕಾಫಿನಾಡಿನಲ್ಲಿ ಬೆಳ್ಳಕ್ಕಿಗಳು ಸೃಷ್ಟಿಸಿರೋ ವೈಯ್ಯಾರ ನಿಜಕ್ಕೂ ಪಕ್ಷಿ ಪ್ರಿಯರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಹೌದು.. ಸದ್ಯ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇದೀಗ ಹಕ್ಕಿಗಳ ಚಿಲಿಪಿಲಿಗಳದ್ದೇ ಸದ್ದು.. ಚಳಿಗಾಲದಲ್ಲಿ ಬೆಳ್ಳಕ್ಕಿಗಳಿಗೆ ಕಾಫಿನಾಡು ಒಂಥರಾ ಹಾಟ್‌ ಫೇವರಿಟ್ ಸ್ಫಾಟ್‌.. ಅದ್ರಲ್ಲೂ ಭದ್ರಾ ನದಿ ತೀರದ ಕೆಲವೊಂದು ಸ್ಥಳಗಳಲ್ಲಿ ಬೆಳ್ಳಕ್ಕಿಗಳು ವಾಸಿಸುತ್ತಾ ಪಕ್ಷಿಪ್ರಿಯರಿಗೆ ಸಖತ್‌ ಮನರಂಜನೆ ನೀಡ್ತಿವೆ. ಇದು ಚಿಕ್ಕಮಗಳೂರು ತಾಲೂಕಿನ ಖಾಂಡ್ಯಾ ಸಮೀಪದ ಭದ್ರಾ ನದಿಯಲ್ಲಿ ಕಂಡು ಬರ್ತಿರೋ ನಯನಮನೋಹರ ದೃಶ್ಯ. ಚಳಿಗಾಲದ ಸಮಯಕ್ಕೆ ಈ ಸ್ಥಳಗಳಿಗೆ ಆಗಮಿಸೋ ಹಕ್ಕಿಗಳು.. ಕ್ರಮೇಣ ಬೇಸಿಗೆ ಕಾಲ ಬರೋ ಸಮಯಕ್ಕೆ ಬೇರೆ ಕಡೆ ವಲಸೆ ಹೋಗಿರುತ್ವೆ.

ಸಂಜೆಯಾಗುತ್ತಲೇ ಮರಗಳ ಮೇಲೇರುತ್ತವೆ.. ಹಸಿರ ಕಾನನದಲ್ಲಿ ಬಿಳಿ ಚುಕ್ಕಿ ಇಟ್ಟಂತೆ ಬಾಸವಾಗ್ತಿರೋ ಬೆಳ್ಳಕ್ಕಿಗಳ ನೋಟ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸುತ್ತಿದೆ. ಪ್ರತಿ ವರ್ಷ ಚಳಿಗಾಲದಲ್ಲಿ ಸುತ್ತಮುತ್ತಲ ಭತ್ತದಗದ್ದೆ, ಹಳ್ಳ ಕೊಳ್ಳಗಳಲ್ಲಿ ಮೀನು, ಸಣ್ಣ ಪುಟ್ಟ ಕೀಟಗಳನ್ನ ತಿಂದು ಸಂಜೆಯಾಗುತ್ತಲೇ ಮರಗಳ ಮೇಲೇರಿ ಸಾವಿರಾರು ಬೆಳ್ಳಕ್ಕಿಗಳು ಆಶ್ರಯ ಪಡೆಯುತ್ತಿವೆ.

ಇನ್ನು ಮುಸ್ಸಂಜೆಯಲ್ಲಿ ರವಿ ಮೆಲ್ಲಗೆ ಮರೆಯಾಗ್ತಿದ್ದಂತೆ ಬೆಳ್ಳಕ್ಕಿಗಳ ಬಳಗ ಎಲ್ಲೇ ಇದ್ರೂ ಇದೇ ಮರಗಳನ್ನ ಹುಡುಕಿಕೊಂಡು ಬರೋದು ವಿಶೇಷ. ಒಮ್ಮಲೆ ಸಾವಿರಾರು ಬೆಳ್ಳಕ್ಕಿಗಳು ಕಣ್ಣಿಗೆ ಹಬ್ಬದೂಟ ಬಡಿಸುತ್ತವೆ. ಒಟ್ನಲ್ಲಿ ಚಳಿಗಾಲದ ಸಂದರ್ಭದಲ್ಲಿ ಭದ್ರಾ ನದಿ ತೀರದಲ್ಲಿ ಬೆಳ್ಳಕ್ಕಿಗಳ ಸಾಲು.. ಮರಗಳ ಕೊಂಬೆಗಳ ಮೇಲೆ ಕುಳಿತು ಅವುಗಳು ರಿಲಾಕ್ಸ್ ಮಾಡೋ ಪರಿ ನಿಜಕ್ಕೂ ಕಣ್ಣಿಗೆ ಹಬ್ಬವೇ ಸರಿ.

ನಾಗರಹೊಳೆಯಲ್ಲಿ 6 ಹೊಸ ಜಾತಿಯ ಪಕ್ಷಿಗಳು ಪತ್ತೆ!

Follow us on

Related Stories

Most Read Stories

Click on your DTH Provider to Add TV9 Kannada