ಡ್ಯೂಟಿ ವೇಳೆ.. ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿ ಜೊತೆ ಎಣ್ಣೆ ಪಾರ್ಟಿ: CCB ಘಟಕದಿಂದ 8 ಸಿಬ್ಬಂದಿ ಟ್ರಾನ್ಸ್​ಫರ್​

ಕರ್ತವ್ಯದ ವೇಳೆ ಬಾರಿನಲ್ಲಿ ಎಣ್ಣೆ ಪಾರ್ಟಿ ಮಾಡಿದ್ದ ನಗರದ CCB ಘಟಕದ 8 ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. ಸಿಬ್ಬಂದಿಯನ್ನು ‌ನಗರದ ಬೇರೆ ಬೇರೆ ಠಾಣೆಗಳಿಗೆ ವರ್ಗಾವಣೆ ಮಾಡಲಾಗಿದೆ.

ಡ್ಯೂಟಿ ವೇಳೆ.. ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿ ಜೊತೆ ಎಣ್ಣೆ ಪಾರ್ಟಿ: CCB ಘಟಕದಿಂದ 8 ಸಿಬ್ಬಂದಿ ಟ್ರಾನ್ಸ್​ಫರ್​
ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿ ಜೊತೆ ಸಿಬ್ಬಂದಿಯ ಎಣ್ಣೆ ಪಾರ್ಟಿ
Follow us
KUSHAL V
|

Updated on: Jan 31, 2021 | 12:01 AM

ಮಂಗಳೂರು: ಕರ್ತವ್ಯದ ವೇಳೆ ಬಾರಿನಲ್ಲಿ ಎಣ್ಣೆ ಪಾರ್ಟಿ ಮಾಡಿದ್ದ ನಗರದ CCB ಘಟಕದ 8 ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. ಸಿಬ್ಬಂದಿಯನ್ನು ‌ನಗರದ ಬೇರೆ ಬೇರೆ ಠಾಣೆಗಳಿಗೆ ವರ್ಗಾವಣೆ ಮಾಡಲಾಗಿದೆ. ಜೊತೆಗೆ, CCB ಘಟಕದ 8 ಸಿಬ್ಬಂದಿ ವಿರುದ್ಧ ಇಲಾಖಾ ಶಿಸ್ತು ಕ್ರಮ ಜರುಗಿಸಲು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ‌ಆದೇಶ ಹೊರಡಿಸಿದ್ದಾರೆ.

ಏನಿದು ಪ್ರಕರಣ? ನಗರದ ಕುತ್ತಾರು ಬಳಿಯ ಬಾರ್​ನಲ್ಲಿ ಕಳೆದ ಕೆಲವು ದಿನಗಳ ಹಿಂದೆ CCB ಘಟಕದ 8 ಸಿಬ್ಬಂದಿ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿ ಜೊತೆ ಹಾಡಹಗಲೇ ಎಣ್ಣೆ ಪಾರ್ಟಿ ಮಾಡಿದ್ದರು. ಬಾರ್ ಬಳಿ ಸರ್ಕಾರಿ ವಾಹನ ನಿಲ್ಲಿಸಿ ಪಾರ್ಟಿ ಮಾಡಿದ್ದ ಆರೋಪ ಕೇಳಿಬಂದಿತ್ತು. ಜೊತೆಗೆ, CCB ಪೊಲೀಸರ ಪಾರ್ಟಿ ಮಾಡಿದ್ದ ವಿಡಿಯೋ ಸಹ ವೈರಲ್ ಆಗಿತ್ತು.

ಇನ್ನು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಗರ ಪೊಲೀಸ್​ ಆಯುಕ್ತ ಶಶಿಕುಮಾರ್ ತನಿಖೆಗೆ ಆದೇಶಿಸಿದ್ದರು. ಡಿಸಿಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದರು. ಇದೀಗ, ಪ್ರಾಥಮಿಕ ತನಿಖೆಯ ಆಧಾರದ ಮೇಲೆ 8 ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ.

ಥಿಯೇಟರ್‌ಗಳಲ್ಲಿ ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ -ಕೇಂದ್ರದಿಂದ ಹೊಸ ಮಾರ್ಗಸೂಚಿ ಬಿಡುಗಡೆ