‘ಕನ್ನಡದ ಅನಿವಾರ್ಯತೆಯನ್ನು ನಾವು ಸೃಷ್ಟಿ ಮಾಡಬೇಕು.. ಆಗ ಕನ್ನಡೇತರರು ಕೂಡ ನಮ್ಮ ಭಾಷೆ ಕಲೀತಾರೆ’
ನಮಗೆ ಭಾಷಾ ಅಭಿಮಾನದ ಕೊರತೆ ಇದೆ. ಕನ್ನಡದ ಅನಿವಾರ್ಯತೆಯನ್ನು ನಾವು ಸೃಷ್ಟಿ ಮಾಡಬೇಕು. ಆಗ ಕನ್ನಡೇತರರು ಕೂಡ ಕನ್ನಡವನ್ನ ಕಲಿತು ಮಾತನಾಡ್ತಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು: ನಾನು ರಾಜಕಾರಣಕ್ಕೆ ಬಂದಾಗ ಕನ್ನಡ ಕಾವಲು ಸಮಿತಿಯ ಅಧ್ಯಕ್ಷನಾಗಲು ನನ್ನನ್ನ ಕರೆದು ಅಂದಿನ ಸಿಎಂ ರಾಮಕೃಷ್ಣ ಹೆಗಡೆ ಹೇಳಿದ್ದರು. ಅಲ್ಲಿಯವರೆಗೆ ಕಾವಲು ಸಮಿತಿ ಇರಲಿಲ್ಲ, ಅದು ಪ್ರಥಮ ಸಮಿತಿ. ಈ ವೇಳೆ ನಾನು ಸಾಹಿತ್ಯದ ವಿದ್ಯಾರ್ಥಿ ಅಲ್ಲ, ನನಗೆ ಬಾಟ್ನಿ, ಜುವಾಲಜಿ, ಮತ್ತು ಲಾ ಓದಿದ್ದೀನಿ ಎಂದು ಹೇಳಿದ್ದೆ. ಆದರೆ, ಇಲ್ಲ ನಿನಗೆ ಕನ್ನಡದ ಬಗ್ಗೆ ಸಾಕಷ್ಟು ಕಳಕಳಿ ಇದೆ ಅಂದಿದ್ದರು. ನಾನು ಮರು ಮಾತನಾಡದೇ ಒಪ್ಪಿಕೊಂಡಿದ್ದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದ ಕಾಸಿಯಾ ಸಭಾಂಗಣದಲ್ಲಿ ನಡೆದ ಸಂಗೊಳ್ಳಿ ರಾಯಣ್ಣನ ಹುತಾತ್ಮ ದಿನಾಚರಣೆಯಲ್ಲಿ ಸಿದ್ದರಾಮಯ್ಯ ಮಾತನಾಡಿದರು. ನಿಸಾರ್ ಅಹಮದ್, ಪಾಟೀಲ್ ಪುಟ್ಟಪ್ಪರಂಥ ಘಟಾನುಘಟಿಗಳ ಜೊತೆ ಒಂದು ವರ್ಷ ಇದ್ದೆ. ಆಮೇಲೆ ಮಂತ್ರಿ ಮಾಡಿದ್ರು ಬಿಟ್ ಬಿಟ್ಟೆ ಎಂದು ಹೇಳಿದರು.
ಇತಿಹಾಸದಲ್ಲಿ ನಮ್ಮ ಭಾಷೆಯನ್ನ ಕಾಯಲು ಸಮಿತಿ ಮಾಡಿದ್ದು ನಮ್ಮಲ್ಲೇ ಮೊದಲು. ಭಾಷೆ ಮೇಲೆ ಅಭಿಮಾನ ಇರಬೇಕು, ಆದ್ರೆ ನಮ್ಮಲ್ಲಿ ಔದಾರ್ಯ ಹೆಚ್ಚು. ನಮಗೆ ಭಾಷಾ ಅಭಿಮಾನದ ಕೊರತೆ ಇದೆ. ಕನ್ನಡದ ಅನಿವಾರ್ಯತೆಯನ್ನು ನಾವು ಸೃಷ್ಟಿ ಮಾಡಬೇಕು. ಆಗ ಕನ್ನಡೇತರರು ಕೂಡ ಕನ್ನಡವನ್ನ ಕಲಿತು ಮಾತನಾಡ್ತಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಈಗ ನಕಲಿ ದೇಶಭಕ್ತರೇ ಹೆಚ್ಚಾಗಿದ್ದಾರೆ -ಸಿದ್ದರಾಮಯ್ಯ ಡೈಲಾಗ್ಗೆ ‘ಹೌದು ಹುಲಿಯಾ’ ಎಂದ ಅಭಿಮಾನಿ!