ಸಿಎಂ B.S.ಯಡಿಯೂರಪ್ಪ ಅವರ ನಿವಾಸ ಕಾವೇರಿ ಬಳಿ ಜಾಗ್ವಾರ್ ಕಾರು ಮರಕ್ಕೆ ಡಿಕ್ಕಿ
ಸಿಎಂ B.S.ಯಡಿಯೂರಪ್ಪ ಅವರ ನಿವಾಸ ಕಾವೇರಿ ಬಳಿ ಜಾಗ್ವಾರ್ ಕಾರೊಂದು ಅಪಘಾತಕ್ಕೆ ಈಡಾಗಿದೆ. ಉದ್ಯಮಿಯೊಬ್ಬರಿಗೆ ಸೇರಿದ ಜಾಗ್ವಾರ್ ಕಾರು ತಡರಾತ್ರಿ ಅಪಘಾತಕ್ಕೆ ಈಡಾಗಿದೆ.
ಬೆಂಗಳೂರು: ಸಿಎಂ B.S.ಯಡಿಯೂರಪ್ಪ ಅವರ ನಿವಾಸ ಕಾವೇರಿ ಬಳಿ ಜಾಗ್ವಾರ್ ಕಾರೊಂದು ಅಪಘಾತಕ್ಕೆ ಈಡಾಗಿದೆ. ಉದ್ಯಮಿಯೊಬ್ಬರಿಗೆ ಸೇರಿದ ಜಾಗ್ವಾರ್ ಕಾರು ತಡರಾತ್ರಿ ಅಪಘಾತಕ್ಕೆ ಈಡಾಗಿದೆ.
ಕಾರನ್ನು ವೇಗವಾಗಿ ಚಾಲಾಯಿಸಿಕೊಂಡು ಸಿಎಂ ನಿವಾಸದ ಬಳಿ ಬಂದ ಚಾಲಕ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಹೊಡೆದಿದ್ದಾನೆ. ಅಪಘಾತದಲ್ಲಿ ಜಾಗ್ವಾರ್ ಕಾರಿನ ಮುಂಬದಿ ಮತ್ತು ಹಿಂಬದಿ ಭಾಗಕ್ಕೆ ಜಖಂ ಆಗಿದೆ. ಡಿಕ್ಕಿಯ ರಭಸಕ್ಕೆ ಕಾರಿನ 2 ಟೈರ್‌ಗಳಿಗೆ ಹಾನಿ ಸಹ ಉಂಟಾಗಿದೆ.
ಇನ್ನು, ವಾಹನವನ್ನು ಯಾರು ಚಲಾಯಿಸುತ್ತಿದ್ದರು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಹೈಗ್ರೌಂಡ್ಸ್ ಸಂಚಾರಿ ಠಾಣಾ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರಲ್ಲಿ ಮಹಿಳೆ ಆತ್ಮಹತ್ಯೆಗೆ ಯತ್ನ: ಸಹೋದ್ಯೋಗಿಗಳ ಸಮಯಪ್ರಜ್ಞೆಯಿಂದ ಬದುಕುಳಿದ ಜೀವ