ಹಾವೇರಿಯ ಬಸಾಪುರ ಗ್ರಾಮದ ಬಳಿ ಅನುಮಾನಾಸ್ಪದ ರೀತಿ ಪ್ರೇಮಿಗಳ ಶವ ಪತ್ತೆ

ಹಾವೇರಿಯ ಬಸಾಪುರ ಗ್ರಾಮದ ಬಳಿ ಅನುಮಾನಾಸ್ಪದ ರೀತಿ  ಪ್ರೇಮಿಗಳ ಶವ ಪತ್ತೆ
ಪ್ರಾತಿನಿಧಿಕ ಚಿತ್ರ

ಪ್ರೀತಿಸಿದ ಹುಡುಗಿಗೆ ಬೇರೆ ಮದುವೆಗೆ ಸಿದ್ಧತೆ ನಡೆಯುತ್ತಿರುವ ಹಿನ್ನೆಲೆ ಡೆತ್ ​ನೋಟ್ ಬರೆದಿಟ್ಟು ಪ್ರಿಯಕರ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ನಡೆದಿದೆ.

sandhya thejappa

| Edited By: Ghanashyam D M | ಡಿ.ಎಂ.ಘನಶ್ಯಾಮ

Feb 28, 2021 | 7:37 PM


ಹಾವೇರಿ: ತಾಲೂಕಿನ ಬಸಾಪುರ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪ್ರೇಮಿಗಳಿಬ್ಬರ ಮೃತದೇಹ ಪತ್ತೆಯಾಗಿದೆ. ಶವಗಳ ಬಳಿ ಬಿಯರ್ ಬಾಟಲಿ, ವಿಷದ ಬಾಟಲಿ ಮತ್ತು ಚಾಕು ಸಿಕ್ಕಿದೆ. ಮೃತರನ್ನು ಪ್ರವೀಣ ಬಾಗಿಲದ (24) ಮತ್ತು ನೇತ್ರಾ ಬಾಳಿಕಾಯಿ (18) ಎಂದು ಗುರುತಿಸಲಾಗಿದೆ. ಮೃತದೇಹಗಳ ಸಮೀಪ ಪ್ರವೀಣ ತಂದಿದ್ದ ಬೈಕ್ ಕೂಡಾ ಸಿಕ್ಕಿದೆ. ನಾಲ್ಕು ದಿನಗಳ ಹಿಂದೆಯೇ ಪ್ರೇಮಿಗಳು ಮೃತಪಟ್ಟಿರುವ ಸಾಧ್ಯತೆಯಿದೆ. ಸದ್ಯ ಸ್ಥಳಕ್ಕೆ ಗುತ್ತಲ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ
ಪ್ರೀತಿಸಿದ ಹುಡುಗಿಗೆ ಬೇರೆ ಮದುವೆಗೆ ಸಿದ್ಧತೆ ನಡೆಯುತ್ತಿರುವ ಹಿನ್ನೆಲೆ ಡೆತ್ ​ನೋಟ್ ಬರೆದಿಟ್ಟು ಪ್ರಿಯಕರ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ನಡೆದಿದೆ. ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಪ್ರಿಯಕರ ರಾಘವೇಂದ್ರ ಮತ್ತು ಯುವತಿ ಆರು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಆದರೆ ಯುವತಿ ಪೋಷಕರು ಮಗಳನ್ನ ಬೇರೆ ವರನೊಂದಿಗೆ ಮದುವೆ ಮಾಡಲು ಹೊರಟಿದ್ದರು. ಮನನೊಂದು ಪ್ರಿಯಕರ ರಾಘು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ

ಬೇರೆ ಹುಡುಗನ ಜೊತೆ ವಿವಾಹ ನಿಶ್ಚಯ.. ಪ್ರೇಮಿಗಳ ದಿನದಂದೇ ನೇಣಿಗೆ ಕೊರಳೊಡ್ಡಿ ಯುವ ಪ್ರೇಮಿಗಳು ಆತ್ಮಹತ್ಯೆ

ಪೂಜಾ ಚೌವಾಣ್ ಆತ್ಮಹತ್ಯೆ ಪ್ರಕರಣ: ಮಹಾರಾಷ್ಟ್ರದ ಅರಣ್ಯ ಸಚಿವ ಸಂಜಯ್ ರಾಥೋಡ್ ರಾಜೀನಾಮೆ


Follow us on

Related Stories

Most Read Stories

Click on your DTH Provider to Add TV9 Kannada