AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದಲ್ಲಿ ಶಿವಮೊಗ್ಗ ಜಿಲ್ಲೆ 18ನೇ ಸ್ಥಾನ ಪಡೆದಿದೆ -ಸ್ಮಾರ್ಟ್​ಸಿಟಿ ಯೋಜನೆಯ ಕಾಮಗಾರಿಗೆ ಸಿಎಂ ಬಿ.ಎಸ್​.ಯಡಿಯೂರಪ್ಪರಿಂದ ಚಾಲನೆ

ನಗರದ ಸ್ಮಾರ್ಟ್​ಸಿಟಿ ಯೋಜನೆಯ ಕಾಮಗಾರಿಗೆ ಇಂದು ಸಿಎಂ ಬಿ.ಎಸ್.ಯಡಿಯೂರಪ್ಪರಿಂದ ಚಾಲನೆ ದೊರೆಯಿತು. ನಗರದ ಹಳೇ ಜೈಲು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಸಿಕ್ಕಿತು.

ದೇಶದಲ್ಲಿ ಶಿವಮೊಗ್ಗ ಜಿಲ್ಲೆ 18ನೇ ಸ್ಥಾನ ಪಡೆದಿದೆ -ಸ್ಮಾರ್ಟ್​ಸಿಟಿ ಯೋಜನೆಯ ಕಾಮಗಾರಿಗೆ ಸಿಎಂ ಬಿ.ಎಸ್​.ಯಡಿಯೂರಪ್ಪರಿಂದ ಚಾಲನೆ
ಸ್ಮಾರ್ಟ್​ಸಿಟಿ ಯೋಜನೆಯ ಕಾಮಗಾರಿಗೆ ಸಿಎಂ ಬಿ.ಎಸ್​.ಯಡಿಯೂರಪ್ಪರಿಂದ ಚಾಲನೆ
KUSHAL V
|

Updated on: Feb 28, 2021 | 8:03 PM

Share

ಶಿವಮೊಗ್ಗ: ನಗರದ ಸ್ಮಾರ್ಟ್​ಸಿಟಿ ಯೋಜನೆಯ ಕಾಮಗಾರಿಗೆ ಇಂದು ಸಿಎಂ ಬಿ.ಎಸ್.ಯಡಿಯೂರಪ್ಪರಿಂದ ಚಾಲನೆ ದೊರೆಯಿತು. ನಗರದ ಹಳೇ ಜೈಲು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಸಿಕ್ಕಿತು. ಸಚಿವರಾದ ಭೈರತಿ ಬಸವರಾಜ್, ಕೆ.ಎಸ್​.ಈಶ್ವರಪ್ಪ ಮತ್ತು ಸಂಸದ ಬಿ.ವೈ.ರಾಘವೇಂದ್ರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಚಾಲನೆ ಬಳಿಕ ಮಾತನಾಡಿದ ಸಿಎಂ ಬಿ.ಎಸ್.ಯಡಿಯೂರಪ್ಪ ಸ್ಮಾರ್ಟ್​ ಸಿಟಿ ಯೋಜನೆಯಿಂದ ಅಭಿವೃದ್ಧಿಗೆ ಅನುಕೂಲವಾಗಲಿದೆ. ಯೋಜನೆಯಿಂದ ನಗರಗಳ ಅಭಿವೃದ್ಧಿಗೆ ಅನುಕೂಲವಾಗಿದೆ. ಅಭಿವೃದ್ಧಿ ಬಳಿಕ ಜನರ ಜೀವನಮಟ್ಟ ಸುಧಾರಣೆ ಆಗಲಿದೆ. ನಗರದಲ್ಲಿ ಸಮಗ್ರ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ದೇಶದಲ್ಲಿ ಶಿವಮೊಗ್ಗ ಜಿಲ್ಲೆ 18ನೇ ಸ್ಥಾನವನ್ನು ಪಡೆದಿದೆ. ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆ 3ನೇ ಸ್ಥಾನದಲ್ಲಿದೆ ಎಂದು ಹೇಳಿದರು. ಜೊತೆಗೆ, ರಾಜ್ಯದ 7 ಸ್ಮಾರ್ಟ್ ಸಿಟಿ ನಗರಗಳ ಅಭಿವೃದ್ಧಿ ನಡೀತಿದೆ ಎಂದು ಕಾರ್ಯಕ್ರಮದಲ್ಲಿ ಸಿಎಂ B.S.ಯಡಿಯೂರಪ್ಪ ಹೇಳಿದರು.

ಈ ನಡುವೆ, ಕಾರ್ಯಕ್ರಮದಲ್ಲಿ ತಮಗೆ ಗೌರವ ನೀಡದಿದ್ದಕ್ಕೆ ಕಾಂಗ್ರೆಸ್ MLC ಪ್ರಸನ್ನ ಕುಮಾರ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸ್ಮಾರ್ಟ್‌ ಸಿಟಿ ಅಧಿಕಾರಿಗಳ ವಿರುದ್ಧ ಪ್ರಸನ್ನ ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು. ಇದಲ್ಲದೆ, ಕಾರ್ಯಕ್ರಮ ಸ್ಥಳದಿಂದ ಸಿಟ್ಟಿನಿಂದ ಹೊರನಡೆದರು.

ಸಿಎಂ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದ ‘ಕೈ’ ಕಾರ್ಯಕರ್ತರು ಇತ್ತ, ಕಾರ್ಯಕ್ರಮಕ್ಕೂ ಮುನ್ನ ಸಿಎಂ ಯಡಿಯೂರಪ್ಪ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದ ‘ಕೈ’ ಕಾರ್ಯಕರ್ತರು ಹಾಗೂ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು. ನಗರದ ಕಾಂಗ್ರೆಸ್ ಕಚೇರಿ ಬಳಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ಸೇರಿ ಹಲವರು ವಶಕ್ಕೆ ಪಡೆಯಲಾಯಿತು.

ಇದನ್ನೂ ಓದಿ: ಸಿದ್ದರಾಮಯ್ಯ ಮನವೊಲಿಸಲು ವೇಣುಗೋಪಾಲ್​ರಿಂದ ‘ಜಾದೂ ಕೀ ಝಪ್ಪಿ’!.. KCV ಕಾರ್ಯತಂತ್ರ ವರ್ಕ್​ಔಟ್​ ಆಯ್ತಾ?