ಬಿಳಿ ಬಟ್ಟೆ ಧರಿಸಿದ್ದ ವ್ಯಕ್ತಿ ಹಳಿಯ ಮೇಲಿದ್ದರು.. ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ರೈಲು ಚಾಲಕ
ಬಿಳಿ ಬಟ್ಟೆ ಧರಿಸಿದ ವ್ಯಕ್ತಿಯೊಬ್ಬರು ಹಳಿಯ ಮೇಲೆ ನಿಂತಿದ್ದರು. ಅಲ್ಲದೆ ಹಳಿಯ ಮೇಲೆ ರೈಲಿಗೆ ನೇರಾನೇರ ನಿಂತಿರುವುದು ಕಾಣಿಸಿತ್ತು. ಇದು ದೂರದಲ್ಲಿ ಕಂಡರೂ ಅತ್ಯಂತ ವೇಗದಲ್ಲಿದ್ದ ರೈಲಿಗೆ ಬ್ರೇಕ್ ಹಾಕಿ ನಿಲ್ಲಿಸಲು ಸಾಧ್ಯವಾಗಲಿಲ್ಲ ಎಂದು ಮಾಹಿತಿ ನೀಡಿದ್ದಾನೆ.
ಚಿಕ್ಕಮಗಳೂರು: ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜನ ಶತಾಬ್ದಿ ರೈಲು ಚಾಲಕ ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಮಂಗಳವಾರದಂದು ಜಿಲ್ಲೆಯ ಕಡೂರು ತಾಲೂಕಿನ ಗುಣಸಾಗರ ಬಳಿ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಪರಿಷತ್ ಉಪಸಭಾಪತಿ S.L.ಧರ್ಮೇಗೌಡ(65) ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ S.L.ಧರ್ಮೇಗೌಡ ಅವರಿಗೆ ಡಿಕ್ಕಿ ಹೊಡೆದಿದ್ದು ಜನ ಶತಾಬ್ದಿ ರೈಲು ಅನ್ನೋದು ಕನ್ಫರ್ಮ್ ಆಗಿದೆ.
ಈ ಬಗ್ಗೆ ರೈಲು ಚಾಲಕ ಸಿದ್ದರಾಮ್, ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಬಿಳಿ ಬಟ್ಟೆ ಧರಿಸಿದ ವ್ಯಕ್ತಿಯೊಬ್ಬರು ಹಳಿಯ ಮೇಲೆ ನಿಂತಿದ್ದರು. ಅಲ್ಲದೆ ಹಳಿಯ ಮೇಲೆ ರೈಲಿಗೆ ನೇರಾನೇರ ನಿಂತಿರುವುದು ಕಾಣಿಸಿತ್ತು. ಇದು ದೂರದಲ್ಲಿ ಕಂಡರೂ ಅತ್ಯಂತ ವೇಗದಲ್ಲಿದ್ದ ರೈಲಿಗೆ ಬ್ರೇಕ್ ಹಾಕಿ ನಿಲ್ಲಿಸಲು ಸಾಧ್ಯವಾಗಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.
Published On - 2:56 pm, Wed, 30 December 20