ಟೈಂ ಫಿಕ್ಸ್ ಮಾಡಿ ಯಡವಟ್ಟು ಮಾಡ್ತಾ ಸರ್ಕಾರ? ಸಾರಿಗೆ ಸಚಿವರಿಗೆ 8 ಪ್ರಶ್ನೆಗಳು

ಬೆಂಗಳೂರು: ಬಸ್ ಓಡಾಟಕ್ಕೆ ಅವಕಾಶ ಕೊಟ್ಟು, ಟೈಂ ಫಿಕ್ಸ್ ಮಾಡಿ ಸರ್ಕಾರ ಯಡವಟ್ಟು ಮಾಡಿಕೊಂಡಿದೆ. ಸರ್ಕಾರದ ಸಂಚಾರಿ ಗೈಡ್​ಲೈನ್ಸ್​ನಿಂದ ಹಲವಾರು ಗೊಂದಲಗಳು ಹುಟ್ಟಿವೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆವರೆಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಸರ್ಕಾರಿ ಬಸ್, ಖಾಸಗಿ ಬಸ್, ಎಲ್ಲಾ ವಾಹನಕ್ಕೆ ಟೈಂ ಕಂಡೀಷನ್ ಹಾಕಲಾಗಿದೆ. ಆದರೆ ಸರ್ಕಾರದ ಸಾರಿಗೆ ಸಂಚಾರ ಗೈಡ್​ಲೈನ್ಸ್​ ಫಾಲೋ ಮಾಡೋದು ಕಷ್ಟವಾಗಿದೆ. ಅವೈಜ್ಞಾನಿಕ ಸಾರಿಗೆ ಸಂಚಾರ ಗೈಡ್​ಲೈನ್ಸ್​ನಿಂದ ಪ್ರಯಾಣಿಕರಿಗೆ ತೊಂದ್ರೆ ಉಂಟಾಗಿದ್ದು, ಬೆಂಗಳೂರಿನಿಂದ ದೂರದ ಜಿಲ್ಲೆಗಳಿಗೆ 12 […]

ಟೈಂ ಫಿಕ್ಸ್ ಮಾಡಿ ಯಡವಟ್ಟು ಮಾಡ್ತಾ ಸರ್ಕಾರ? ಸಾರಿಗೆ ಸಚಿವರಿಗೆ 8 ಪ್ರಶ್ನೆಗಳು
ಸಾಧು ಶ್ರೀನಾಥ್​

Updated on: May 19, 2020 | 2:01 PM

ಬೆಂಗಳೂರು: ಬಸ್ ಓಡಾಟಕ್ಕೆ ಅವಕಾಶ ಕೊಟ್ಟು, ಟೈಂ ಫಿಕ್ಸ್ ಮಾಡಿ ಸರ್ಕಾರ ಯಡವಟ್ಟು ಮಾಡಿಕೊಂಡಿದೆ. ಸರ್ಕಾರದ ಸಂಚಾರಿ ಗೈಡ್​ಲೈನ್ಸ್​ನಿಂದ ಹಲವಾರು ಗೊಂದಲಗಳು ಹುಟ್ಟಿವೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆವರೆಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಸರ್ಕಾರಿ ಬಸ್, ಖಾಸಗಿ ಬಸ್, ಎಲ್ಲಾ ವಾಹನಕ್ಕೆ ಟೈಂ ಕಂಡೀಷನ್ ಹಾಕಲಾಗಿದೆ. ಆದರೆ ಸರ್ಕಾರದ ಸಾರಿಗೆ ಸಂಚಾರ ಗೈಡ್​ಲೈನ್ಸ್​ ಫಾಲೋ ಮಾಡೋದು ಕಷ್ಟವಾಗಿದೆ. ಅವೈಜ್ಞಾನಿಕ ಸಾರಿಗೆ ಸಂಚಾರ ಗೈಡ್​ಲೈನ್ಸ್​ನಿಂದ ಪ್ರಯಾಣಿಕರಿಗೆ ತೊಂದ್ರೆ ಉಂಟಾಗಿದ್ದು, ಬೆಂಗಳೂರಿನಿಂದ ದೂರದ ಜಿಲ್ಲೆಗಳಿಗೆ 12 ಗಂಟೆಯಲ್ಲಿ ಹೋಗಲು ಸಾಧ್ಯವೆ ಎಂಬ ಪ್ರಶ್ನೆ ಉಂಟಾಗಿದೆ.

ಸಾರಿಗೆ ಇಲಾಖೆ ಸಚಿವರಿಗೆ ಟಿವಿ9 ಪ್ರಶ್ನೆ:
ಪ್ರಶ್ನೆ 1 : ಬೆಂಗಳೂರಿನಿಂದ ಬೀದರ್​ಗೆ ಬರೋಬ್ಬರಿ 689 ಕಿಲೋ ಮೀಟರ್ ಇದೆ 12 ಗಂಟೆಗಳ ಅವಧಿಯಲ್ಲಿ ಬೆಂಗಳೂರಿನಿಂದ ಬೀದರ್​ಗೆ ಹೋಗಲು ಸಾಧ್ಯವೆ
ಪ್ರಶ್ನೆ 2 : ಟ್ರಾಫಿಕ್ ಜಾಮ್ ಮಧ್ಯೆ ಸುಡುಬಿಸಿಲಿನಲ್ಲಿ 12 ಗಂಟೆ ಪ್ರಯಾಣ ಸಾಧ್ಯವೇ
ಪ್ರಶ್ನೆ 3 : ಬೀದರ್​ಗೆ 12 ಗಂಟೆಯೊಳಗೆ ತಲಪಿದರೂ, ಅಲ್ಲಿಂದ ಬೇರೆಡೆಗೆ ಹೋಗೋರ ಕಥೆ ಏನು..?
ಪ್ರಶ್ನೆ 4 : ಜಿಲ್ಲಾ ಕೇಂದ್ರದಿಂದ ಹಳ್ಳಿಗಳಿಗೆ 7 ಗಂಟೆ ನಂತ್ರ ಬಸ್​ ಇಲ್ದೆ ಹೋದ್ರೆ ಜನರ ಕಥೆ ಏನು..?
ಪ್ರಶ್ನೆ 5 : 12 ಗಂಟೆಗಳ ಅವಧಿಯಲ್ಲಿ ಚಾಲಕ , ನಿರ್ವಾಹಕರ, ಪ್ರಯಾಣಿಕರ ಊಟದ ವ್ಯವಸ್ಥೆ ಏನು…?
ಪ್ರಶ್ನೆ 6 : ಕ್ಯಾಂಟೀನ್ ತೆರೆಯಲು ಅವಕಾಶವಿದೆ, ಆದ್ರೆ ಊಟಕ್ಕೆ ಸಮಯ ಎಲ್ಲಿದೆ..?
ಪ್ರಶ್ನೆ 7 : ಊಟ ಮಾಡಲು ಸಮಯ ತೆಗೆದುಕೊಂಡ್ರೆ ಸಂಜೆ 7 ಗಂಟೆ ವೇಳೆಗೆ ತಲುಪಲು ಸಾಧ್ಯವೆ
ಪ್ರಶ್ನೆ 8 : ಪ್ರಯಾಣದ ಬಳಿಕ ಇಡೀ ಬಸ್ ಸಾನಿಟೈಜ್ ಮಾಡುವ ವ್ಯವಸ್ಥೆ ನಮ್ಮಲ್ಲಿ ಇದ್ಯಾ..?

ಕಲ್ಯಾಣ ಕರ್ನಾಟಕ ಭಾಗಕ್ಕೆ ನಾಳೆಯಿಂದ ಸಂಚಾರ:
ಟಿವಿ9 ವರದಿ ಬಳಿಕ ಎಚ್ಚೆತ್ತ ಸಚಿವರು ಲಾಂಗ್ ಜರ್ನಿ ಇರುವುದರಿಂದ ಇಂದು ಸಂಚಾರವಿಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ ನಾಳೆಯಿಂದ ಸಂಚಾರಕ್ಕೆ ವ್ಯವಸ್ಥೆ ಮಾಡುತ್ತೇವೆ. ಪ್ರಯಾಣಿಕರಿಗೆ ಮಾಹಿತಿ ಇಲ್ಲದೆ ಬಂದಿರುತ್ತಾರೆ. ಕಮ್ಯೂನಿಕೇಷನ್ ಇಲ್ಲದೆ ಈ ರೀತಿಯಾಗಿ ಆಗಿದೆ ಎಂದು ಸಾರಿಗೆ ಇಲಾಖೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

Published On - 10:23 am, Tue, 19 May 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us