ಕಾರ್ಮಿಕರ ದಿನಾಚರಣೆ: ಚಾಲಕರಿಗೆ ಸಚಿವ ಸವದಿ ಗುಡ್ ನ್ಯೂಸ್ ಕೊಟ್ರು

|

Updated on: May 01, 2020 | 5:18 PM

ಬೆಂಗಳೂರು: ಕಾರ್ಮಿಕರ ದಿನಾಚರಣೆ ಪ್ರಯುಕ್ತ ಬಸ್ ಚಾಲಕರಿಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಚಿನ್ನದ ಮೆಡಲ್​ ಘೋಷಣೆ ಮಾಡಿದ್ದಾರೆ. ರಾಜ್ಯದ 4 ಸಾರಿಗೆ ನಿಗಮಗಳಲ್ಲಿ ಅತೀ‌ ಹೆಚ್ಚು ಇಂಧನ ಕ್ಷಮತೆ ತೋರುವ ಚಾಲಕರಿಗೆ ವೈಯಕ್ತಿಕವಾಗಿ 10 ಗ್ರಾಂ ಚಿನ್ನದ ಮೆಡಲ್ ನೀಡುವುದಾಗಿ ಘೋಷಿಸಿದ್ದಾರೆ. ಕೊರೊನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಕಾರ್ಮಿಕರ ದಿನಾಚರಣೆ ಪ್ರಯುಕ್ತ ನಗರದ KSRTC ಕೇಂದ್ರ ಕಚೇರಿಯಲ್ಲಿ ಲಕ್ಷ್ಮಣ ಸವದಿ ಫೀವರ್ ಕ್ಲಿನಿಕ್ ಉದ್ಘಾಟಿಸಿದರು. ಕಾರ್ಮಿಕರರಿಗೆ ಸಹಾಯವಾಗಲಿ ಎಂದು ಹಳೆಯ KSRTC ಬಸ್ ಅನ್ನು ಫೀವರ್ […]

ಕಾರ್ಮಿಕರ ದಿನಾಚರಣೆ: ಚಾಲಕರಿಗೆ ಸಚಿವ ಸವದಿ ಗುಡ್ ನ್ಯೂಸ್ ಕೊಟ್ರು
Follow us on

ಬೆಂಗಳೂರು: ಕಾರ್ಮಿಕರ ದಿನಾಚರಣೆ ಪ್ರಯುಕ್ತ ಬಸ್ ಚಾಲಕರಿಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಚಿನ್ನದ ಮೆಡಲ್​ ಘೋಷಣೆ ಮಾಡಿದ್ದಾರೆ. ರಾಜ್ಯದ 4 ಸಾರಿಗೆ ನಿಗಮಗಳಲ್ಲಿ ಅತೀ‌ ಹೆಚ್ಚು ಇಂಧನ ಕ್ಷಮತೆ ತೋರುವ ಚಾಲಕರಿಗೆ ವೈಯಕ್ತಿಕವಾಗಿ 10 ಗ್ರಾಂ ಚಿನ್ನದ ಮೆಡಲ್ ನೀಡುವುದಾಗಿ ಘೋಷಿಸಿದ್ದಾರೆ.

ಕೊರೊನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಕಾರ್ಮಿಕರ ದಿನಾಚರಣೆ ಪ್ರಯುಕ್ತ ನಗರದ KSRTC ಕೇಂದ್ರ ಕಚೇರಿಯಲ್ಲಿ ಲಕ್ಷ್ಮಣ ಸವದಿ ಫೀವರ್ ಕ್ಲಿನಿಕ್ ಉದ್ಘಾಟಿಸಿದರು. ಕಾರ್ಮಿಕರರಿಗೆ ಸಹಾಯವಾಗಲಿ ಎಂದು ಹಳೆಯ KSRTC ಬಸ್ ಅನ್ನು ಫೀವರ್ ಕ್ಲಿನಿಕ್ ಆಗಿ ಮಾಡಲಾಗಿದೆ.

ಇದೇ ವೇಳೆ ಮಾತನಾಡಿದ ಸವದಿ, 4 ಸಾರಿಗೆ ನಿಗಮಗಳಲ್ಲಿ ಪ್ರತಿ ತಿಂಗಳು ಅತೀ‌ ಹೆಚ್ಚು ಇಂಧನ ಕ್ಷಮತೆ ತೋರುವ ಚಾಲಕರಿಗೆ ವೈಯಕ್ತಿಕವಾಗಿ 10 ಗ್ರಾಂ ಚಿನ್ನದ ಮೆಡಲ್ ನೀಡುವುದಾಗಿ ಹೇಳಿದರು. BMTC ಅಧ್ಯಕ್ಷ ನಂದೀಶ್ ರೆಡ್ಡಿ, BMTC ಎಂಡಿ ಸಿ.ಶಿಖಾ, KSRTC ಎಂಡಿ ಶಿವಯೋಗಿ ಕಳಸದ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಉಪಸ್ಥಿತರಿದ್ದರು.