9 ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರ ಧರಣಿ: 7 ದಿನ ನಡೆಯುವ ವಿಭಿನ್ನ ಪ್ರತಿಭಟನೆಯ ಪಟ್ಟಿ ಇಲ್ಲಿದೆ

|

Updated on: Apr 01, 2021 | 12:43 PM

ಸಾರಿಗೆ ನೌಕರರು ತಮ್ಮ 9 ಬೇಡಿಕೆಗಳ ಈಡೇರಿಕೆಗಾಗಿ ಇಂದಿನಿಂದ ವಿಭಿನ್ನ ಧರಣಿ ನಡೆಸುತ್ತಿದ್ದಾರೆ. ಮೊದಲ ದಿನದಂದು ನೌಕರರು ಸರ್ಕಾರದ ವಿರುದ್ಧ ಕಪ್ಪು ಪಟ್ಟಿ ಚಳುವಳಿ ಆರಂಭಿಸಿದ್ದಾರೆ.

9 ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರ ಧರಣಿ: 7 ದಿನ ನಡೆಯುವ ವಿಭಿನ್ನ ಪ್ರತಿಭಟನೆಯ ಪಟ್ಟಿ ಇಲ್ಲಿದೆ
ಮತ್ತೆ ಸಾರಿಗೆ ಮುಷ್ಕರದ ಸುಳಿವು: ‘ಬ್ರೇಕ್​ ಹಾಕಿ’ ಸಿಬ್ಬಂದಿಗೆ ಶಾಕ್ ಕೊಟ್ಟ ಸರ್ಕಾರ, ಈ ವರ್ಷ ಇನ್ನು ಸಾರಿಗೆ ಮುಷ್ಕರ ನಡೆಸುವಂತಿಲ್ಲ!
Follow us on

ಬೆಂಗಳೂರು: ಸಾರಿಗೆ ನೌಕರರು ತಮ್ಮ 9 ಬೇಡಿಕೆಗಳ ಈಡೇರಿಕೆಗಾಗಿ ಇಂದಿನಿಂದ ವಿಭಿನ್ನ ಧರಣಿ ನಡೆಸುತ್ತಿದ್ದಾರೆ. ಮೊದಲ ದಿನದಂದು ನೌಕರರು ಸರ್ಕಾರದ ವಿರುದ್ಧ ಕಪ್ಪು ಪಟ್ಟಿ ಚಳುವಳಿ ಆರಂಭಿಸಿದ್ದಾರೆ. ಇಂದು ನಾಲ್ಕು ನಿಗಮದ ಡಿಪೋಗಳಲ್ಲಿ ಕಪ್ಪು ಪಟ್ಟಿ ಕಟ್ಟಿಕೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ನೌಕರರು ಬೆಳಗ್ಗೆ 10 ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಿದ್ದಾರೆ.

ಸಾರಿಗೆ ನೌಕರರ ಕೂಟದ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಚಳುವಳಿ ಆರಂಭವಾಗಿದ್ದು, ಇಂದಿನಿಂದ ನಡೆಯುವ 7 ದಿನಗಳ ಹೋರಾಟದ ರೂಪುರೇಷೆ ಹೀಗಿದೆ.
-ಏಪ್ರಿಲ್ 2, ಬೆಂಗಳೂರಿನ ಸರ್ಕಲ್​ಗಳಲ್ಲಿ ಕುಟುಂಬದವರೊಂದಿಗೆ ಸೇರಿಕೊಂಡು ಬಜ್ಜಿ ಬೊಂಡಾ ಮಾರಾಟ
– ಏಪ್ರಿಲ್ 3, ನೌಕರರು ಹಾಗೂ ಅವರ ಕುಟುಂಬದವರೊಂದಿಗೆ ನಗರಗಳ ಸರ್ಕಲ್ ಗಳಲ್ಲಿ ಮಾನವ ಸರಪಳಿ ಮಾಡಿ ಭಿತ್ತಿಪತ್ರ ಪ್ರದರ್ಶನ
– ಏಪ್ರಿಲ್ 4, ಸಾರ್ವಜನಿಕರಿಗೆ ಕರಪತ್ರ ಹಂಚುವುದು
– ಏಪ್ರಿಲ್ 5, ಧರಣಿ ಸತ್ಯಾಗ್ರಹ
– ಏಪ್ರಿಲ್ 6, ಸಾಮೂಹಿಕ ಉಪವಾಸ ಸತ್ಯಾಗ್ರಹ
– ಏಪ್ರಿಲ್ 7, ರಿಂದ ಕರ್ನಾಟಕದಾದ್ಯಂತ ಬಸ್ ಸಂಚಾರ ಸ್ಥಗಿತ

ಇದನ್ನೂ ಓದಿ:ಸಾರಿಗೆ ಸಚಿವರ ಪ್ರಕಟಣೆಗೆ ಕೋಡಿಹಳ್ಳಿ ಚಂದ್ರಶೇಖರ್ ಅಸಮಾಧಾನ; ಬೇಡಿಕೆ ಈಡೇರಿಸದಿದ್ದರೆ ಏ.7ರಂದು ಸಾರಿಗೆ ಸೇವೆ ಬಂದ್​

Published On - 10:14 am, Thu, 1 April 21