ಬೆಂಗಳೂರಿನಲ್ಲಿ 90ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೊರೊನಾ: 10ಕ್ಕೂ ಹೆಚ್ಚು BBMP ಶಾಲೆಗಳು ತಾತ್ಕಾಲಿಕವಾಗಿ ಬಂದ್

ಬಿಬಿಎಂಪಿ ಶಾಲೆಗಳ 90 ಕ್ಕೂ ಅಧಿಕ ಮಕ್ಕಳಿಗೆ ಸೋಂಕು ಧೃಡಪಟ್ಟಿದೆ. ಹೀಗಾಗಿ ಸೋಂಕು ಧೃಡಪಟ್ಟ ಕಾರಣ ತಾತ್ಕಾಲಿಕವಾಗಿ ಶಾಲೆಗಳು ಕ್ಲೋಸ್ ಮಾಡಲಾಗಿದೆ.

ಬೆಂಗಳೂರಿನಲ್ಲಿ 90ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೊರೊನಾ: 10ಕ್ಕೂ ಹೆಚ್ಚು BBMP ಶಾಲೆಗಳು ತಾತ್ಕಾಲಿಕವಾಗಿ ಬಂದ್
ಲಾಕ್​ಡೌನ್​ ಇನ್ನೂ ಜಾರಿಯಲ್ಲಿದೆ, ಕೊರೊನಾ ಹಾವಳಿ ಮುಗಿದಿಲ್ಲ: ಬೆಂಗಳೂರಿಗೆ ವಾಪಸಾಗುವವರಿಗೆ BBMP ಎಚ್ಚರಿಕೆಯ ಗಂಟೆ
Follow us
ಪೃಥ್ವಿಶಂಕರ
|

Updated on:Apr 01, 2021 | 12:39 PM

ಬೆಂಗಳೂರು: ನಗರದಲ್ಲಿ 90ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದ್ದು, ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಿಂದಾಗಿ ಕೆಲವು ಶಾಲೆಗಳನ್ನು ಬಂದ್ ಮಾಡಲಾಗಿದೆ. 10ಕ್ಕೂ ಹೆಚ್ಚು BBMP ಶಾಲೆಗಳು ತಾತ್ಕಾಲಿಕವಾಗಿ ಬಂದ್ ಆಗಿವೆ.

ಬಿಬಿಎಂಪಿ ಶಾಲೆಗಳ 90 ಕ್ಕೂ ಅಧಿಕ ಮಕ್ಕಳಿಗೆ ಸೋಂಕು ಧೃಡಪಟ್ಟಿದೆ. ಹೀಗಾಗಿ ಸೋಂಕು ಧೃಡಪಟ್ಟ ಕಾರಣ ತಾತ್ಕಾಲಿಕವಾಗಿ ಶಾಲೆಗಳು ಕ್ಲೋಸ್ ಮಾಡಲಾಗಿದೆ. ಬೆಂಗಳೂರಿನಲ್ಲಿ 10 ಕ್ಕೂ ಅಧಿಕ ಬಿಬಿಎಂಪಿ ಶಾಲೆಗಳು ತಾತ್ಕಾಲಿಕವಾಗಿ ಬಂದ್ ಆಗಿವೆ. ಒಬ್ಬ ವಿದ್ಯಾರ್ಥಿಯಿಂದ ಹಲವರಿಗೆ ಸೋಂಕು ಸ್ಪ್ರೇಡ್ ಆಗ್ತಿದ್ದು. ಸೋಂಕು ಪತ್ತೆಯಾದ ಶಾಲೆಗಳನ್ನ ಬಿಬಿಎಂಪಿ ತಾತ್ಕಾಲಿಕವಾಗಿ ಬಂದ್ ಮಾಡ್ತಿದೆ. ಇನ್ನೂ ಭಾಗಶಃ ಮಕ್ಕಳ ಕೋವಿಡ್ ರಿಪೋರ್ಟ್ ಬಾರದ ಕಾರಣ ಪೋಷಕರಲ್ಲಿ ಆತಂಕ ಮನೆಮಾಡಿದೆ. ಟೆಸ್ಟ್ ಮಾಡ್ಸಿ ಸಾಕಷ್ಟು ದಿನಗಳು ಕಳೆದರು ಟೆಸ್ಟ್ ರಿಪೋರ್ಟ್ ಬಂದಿಲ್ಲದೆ ಇರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ:HD Deve Gowda: ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಹಾಗೂ ಚನ್ನಮ್ಮಗೆ ಕೊರೊನಾ ಸೋಂಕು

Published On - 9:22 am, Thu, 1 April 21