ರಮೇಶ್ ಜಾರಕಿಹೊಳಿ CD ಪ್ರಕರಣ: ಅಜ್ಜಿ ಆರೊಗ್ಯದಲ್ಲಿ ಏರುಪೇರು, ವಿಜಯಪುರಕ್ಕೆ ತೆರಳಿದ ಸಿಡಿ ಸಂತ್ರಸ್ಥೆಯ ಪೋಷಕರು

ಈಗಾಲಲೇ ನಾವು ಸಾಕಷ್ಟು ಕುಗ್ಗಿ ಹೋಗಿದ್ದೇವೆ. ನಮ್ಮ ಅತ್ತೆಯವರ ಅನಾರೋಗ್ಯ ವಿಚಾರವಾಗಿ ಮತ್ತಷ್ಟು ನೊಂದಿದ್ದೇವೆ. ನಾವು ಮತ್ತಷ್ಟು ಮಾನಸಿಕ ಹಿಂಸೆ ಅನುಭವಿಸಲು ಸಿದ್ದರಿಲ್ಲಾ, ಮನಸ್ಸು ಸರಿಯಲ್ಲಾ.

ರಮೇಶ್ ಜಾರಕಿಹೊಳಿ CD ಪ್ರಕರಣ: ಅಜ್ಜಿ ಆರೊಗ್ಯದಲ್ಲಿ ಏರುಪೇರು, ವಿಜಯಪುರಕ್ಕೆ ತೆರಳಿದ ಸಿಡಿ ಸಂತ್ರಸ್ಥೆಯ ಪೋಷಕರು
ಸಿಡಿ ಯುವತಿಯ ಕುಟುಂಬಸ್ಥರು
Follow us
ಪೃಥ್ವಿಶಂಕರ
|

Updated on:Apr 01, 2021 | 12:40 PM

ವಿಜಯಪುರ: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ CD ಬಹಿರಂಗ ಕೇಸ್ ಪ್ರಕರಣಕ್ಕೆ ಸಂಬಂಧಿಸಿರುವ ಸಂತ್ರಸ್ಥೆಯ ಅಜ್ಜಿಯ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಿಂದಾಗಿ ಯುವತಿಯ ಪೋಷಕರು ಬೆಳಗಾವಿಯಿಂದ ವಿಜಯಪುರ ಜಿಲ್ಲೆಯ ಗ್ರಾಮಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಈ ಬಗ್ಗೆ ಟಿವಿ9 ಬಳಿ ಮಾತಾನಾಡಿದ ಸಿಡಿಯಲ್ಲಿರುವ ಯುವತಿಯ ತಂದೆ, ಈಗಾಲಲೇ ನಾವು ಸಾಕಷ್ಟು ಕುಗ್ಗಿ ಹೋಗಿದ್ದೇವೆ. ನಮ್ಮ ಅತ್ತೆಯವರ ಅನಾರೋಗ್ಯ ವಿಚಾರವಾಗಿ ಮತ್ತಷ್ಟು ನೊಂದಿದ್ದೇವೆ. ನಾವು ಮತ್ತಷ್ಟು ಮಾನಸಿಕ ಹಿಂಸೆ ಅನುಭವಿಸಲು ಸಿದ್ದರಿಲ್ಲಾ, ಮನಸ್ಸು ಸರಿಯಲ್ಲಾ. ನಾವು ಇಲ್ಲಿ ನೆಮ್ಮದಿಯಿಂದ ಇರಲು ಅನಕೂಲ ಮಾಡಿಕೊಡಬೇಕೆಂದು‌ ಜನರಿಗೆ ಹಾಗೂ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ. ನಮ್ಮ ಅತ್ತೆ ಆರೋಗ್ಯ ಹಾಗೂ ಚಿಕಿತ್ಸೆ ಕುರಿತು ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಯುವತಿಯ ತಂದೆ ಹೇಳಿಕೆ ನೀಡಿದ್ದಾರೆ.

ಸಧ್ಯ ನಾವೆಲ್ಲಾ ಇಲ್ಲಿಯೇ ಉಳಿದುಕೊಂಡು ನಮ್ಮ ಅತ್ತೆಯವರನ್ನು ನೋಡಿಕೊಳ್ಳುತ್ತೇವೆ. ಇಲ್ಲಿ ನಾವು ಯಾವುದೇ ಒತ್ತಡದಿಂದ ಬಂದಿಲ್ಲ. ಘಟನೆಯ ಕುರಿತು ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಹೆಚ್ಚಿಗೆ ಹೇಳಲು ಇಷ್ಟ ಪಡಲ್ಲಾ ಸದ್ಯ ತನಿಖೆ ನಡೆಯುತ್ತಿದೆ. ಮುಂದೆ ದೇವರು ಏನೇನು ಬುದ್ದಿ ಕೊಡುತ್ತಾನೋ, ಏನೇನು ದಾರಿ ತೋರಿಸುತ್ತಾನೋ ನೋಡೋಣವೆಂದು ಯುವತಿ ತಂದೆ ಹೇಳಿದ್ದಾರೆ.

ಎಸ್ಐಟಿ‌ ತನಿಖೆ ಸರಿಯಾದ ದಿಕ್ಕಿನಲ್ಲಿ ಹೋಗುತ್ತಿದೆ ಡಿಕೆಶಿ ವಿರುದ್ಧ ಮಾಡಿರುವ ಆರೋಪದ ಕುರಿತು ಎಸ್ಐಟಿ ತನಿಖಾಧಿಕಾರಿಗಳಿಗೆ ರೆಕಾರ್ಡಿಂಗ್ ಹಾಗೂ ಇತರೆ ಮಾಹಿತಿ ನೀಡಿದ್ದೇವೆ. ಮುಂದೆ ಏನಾಗತ್ತೋ ಎಂದು‌ ನೋಡೋಣ. ನಮ್ಮ ಮಗಳಿಗೆ ಈಗಾಗಲೇ ಮನೆಗೆ ಬರುವಂತೆ ಮನವಿ ಮಾಡಿಕೊಂಡಿದ್ದೇವೆ. ನಮ್ಮ ಮಗಳ ಭೇಟಿಗೆ ಅವಕಾಶ‌ ನೀಡಬೇಕೆಂದು ಪತ್ರ ನೀಡಿದ್ದೇವೆ. ತನಿಖೆಗಾಗಿ ಅಧಿಕಾರಿಗಳು ಮಗಳ ಭೇಟಿಗೆ ಅವಕಾಶ ನೀಡಿ ಯಾವಾಗ ಕರೆಯುತ್ತಾರೋ ಆಗ ಹೋಗುತ್ತೇವೆ ಎಂದು ಯುವತಿ ತಂದೆ ಹೇಳಿದರು.

ಇದನ್ನೂ ಓದಿ:ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಎಸ್ಐಟಿ ವಿಚಾರಣೆ ವೇಳೆ ಸಂತ್ರಸ್ಥೆ ಕಣ್ಣೀರು..! ಇಂದು ಸ್ಥಳ ಮಹಜರು ಸಾಧ್ಯತೆ

Published On - 9:46 am, Thu, 1 April 21