ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಎಸ್ಐಟಿ ವಿಚಾರಣೆ ವೇಳೆ ಸಂತ್ರಸ್ಥೆ ಕಣ್ಣೀರು..! ಇಂದು ಸ್ಥಳ ಮಹಜರು ಸಾಧ್ಯತೆ

ಜಡ್ಜ್​ ಮುಂದೆ ಧೈರ್ಯವಾಗಿ ಮಾತಾನಾಡಿದ್ದ ಸಂತ್ರಸ್ಥೆ ಎಸ್ಐಟಿ ವಿಚಾರಣೆ ವೇಳೆ ಕಣ್ಣೀರು ಸುರಿಸಿದ್ದಾಳೆ. ಮೊದಲ ದಿನ ಹೇಳಿಕೆ ದಾಖಲಿಸುವಲ್ಲಿ ಇದ್ದ ಆಸಕ್ತಿ ಎರಡನೇ ದಿನ ಹಾಜರಾದ ವೇಳೆ ಇರಲಿಲ್ಲ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಎಸ್ಐಟಿ ವಿಚಾರಣೆ ವೇಳೆ ಸಂತ್ರಸ್ಥೆ ಕಣ್ಣೀರು..! ಇಂದು ಸ್ಥಳ ಮಹಜರು ಸಾಧ್ಯತೆ
ಸಂತ್ರಸ್ತೆ (ಎಡ); ರಮೇಶ್​ ಜಾರಕಿಹೊಳಿ (ಬಲ)
Follow us
ಪೃಥ್ವಿಶಂಕರ
|

Updated on:Apr 01, 2021 | 12:38 PM

ಬೆಂಗಳೂರು: ಇಡೀ ರಾಜ್ಯ, ರಾಜಕಾರಣದಲ್ಲಿ ತಲ್ಲಣ ಮೂಡಿಸಿರುವ ರಮೇಶ್ ಜಾರಕಿಹೊಳಿ ಸಿಡಿ ಕೇಸ್​ಗೆ ದೊಡ್ಡ ತಿರುವು ಸಿಕ್ಕಿದೆ. 28 ದಿನಗಳ ಬಳಿಕ ಸಿಡಿ ಲೇಡಿ ಕೋರ್ಟ್‌ ಮುಂದೆ ಹಾಜರಾಗಿ ಜಡ್ಜ್ ಎದುರಲ್ಲೇ ತನ್ನ ಹೇಳಿಕೆ ದಾಖಲಿಸೋ ಮೂಲಕ ತನ್ನ ಅಜ್ಞಾತ ಆಟಕ್ಕೆ ತೆರೆ ಎಳೆದಿದ್ದಾರೆ. ಈ ಮೂಲಕ ರಮೇಶ್‌ ಜಾರಕಿಹೊಳಿ ಸಿಡಿ ಕೇಸ್‌ ಕ್ಲೈಮ್ಯಾಕ್ಸ್‌ ಹಂತಕ್ಕೆ ತಲುಪಿದೆ. ಸಿಡಿ ಲೇಡಿ ಕೊಟ್ಟ ಹೇಳಿಕೆಗಳಿಂದ ರಮೇಶ್​ರ ರಾಜಕಾರಣಕ್ಕೆ ಭಾರಿ ಹೊಡೆತ ಬೀಳಲಿದೆ ಎಂಬುವುದು ಸದ್ಯದ ಸತ್ಯದ ಮಾತು. ಮಾರ್ಚ್ 30 ರಂದು ಜಡ್ಜ್ ಮುಂದೆ ಹಾಜರಾಗಿದ್ದ ಯುವತಿ, ರಮೇಶ್ ಜಾರಕಿಹೊಳಿ ಒಟ್ಟು 2 ಬಾರಿ ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ರು ಎಂದು ಹೇಳಿದ್ದಾರೆ.

ಎಸ್ಐಟಿ ವಿಚಾರಣೆ ವೇಳೆ ಸಂತ್ರಸ್ಥೆ ಕಣ್ಣೀರು..! ಆದರೆ ಜಡ್ಜ್​ ಮುಂದೆ ಧೈರ್ಯವಾಗಿ ಮಾತಾನಾಡಿದ್ದ ಸಂತ್ರಸ್ಥೆ ಎಸ್ಐಟಿ ವಿಚಾರಣೆ ವೇಳೆ ಕಣ್ಣೀರು ಸುರಿಸಿದ್ದಾಳೆ. ಮೊದಲ ದಿನ ಹೇಳಿಕೆ ದಾಖಲಿಸುವಲ್ಲಿ ಇದ್ದ ಆಸಕ್ತಿ ಎರಡನೇ ದಿನ ಹಾಜರಾದ ವೇಳೆ ಇರಲಿಲ್ಲ. ಮೆಡಿಕಲ್ ಟೆಸ್ಟ್ ಆದ ಬಳಿಕ ಸಂತ್ರಸ್ಥೆ ಮಾನಸಿಕವಾಗಿ ಕೊಂಚ ಡಿಸ್ಟರ್ಬ್ ಆದಂತೆ ಕಂಡು ಬಂದಿದೆ. ವಿಚಾರಣೆ ವೇಳೆ ಮರುಪ್ರಶ್ನೆಗಳನ್ನ ಕೇಳದೆ ಐಓ ಎಸಿಪಿ‌ ಕವಿತಾ ಸಂತ್ರಸ್ಥೆಗೆ ಆತ್ಮವಿಶ್ವಾಸ ತುಂಬಿದ್ದಾರೆ. ವಿಚಾರಣೆ ವೇಳೆ ಮಧ್ಯೆ ಮಧ್ಯೆ ನೀರನ್ನು ನೀಡಿ ಸಂತೈಸಿ, ಸಮಯ ಕೊಟ್ಟು ಹೇಳಿಕೆ ದಾಖಲಿಸಲು ಸಲಹೆ ನೀಡಿದ್ದಾರೆ.

ವಕೀಲರ ಪಕ್ಕದಲ್ಲೇ ಕುಳಿತು ಹೇಳಿಕೆ ದಾಖಲಿಸಿದ ಸಂತ್ರಸ್ಥೆ ರಮೇಶ್ ಜಾರಕಿ ಹೊಳಿ ಮೊದಲ ಬಾರಿ, ಆ ನಂತರ ಸಂಪರ್ಕ ಮಾಡಿದ್ದು ಯಾವಾಗ…? ಎಲ್ಲಿ..? ಹಾಗೂ ರಮೇಶ್ ಜಾರಕಿಹೊಳಿ ನೀಡಿದ್ದ ಗಿಫ್ಟ್ ಗಳ ಕುರಿತು ಸಂತ್ರಸ್ಥೆ ಹೇಳಿಕೆ ದಾಖಲಿಸಿದ್ದಾಳೆ. ಬಳಿಕ ಸಿಡಿ ವೈರಲ್ ಆಗಿರುವ ಆಡಿಯೋ ಮತ್ತು ವಿಡಿಯೋದಲ್ಲಿರುವುದು ತಾನೇ, ತನ್ನದೇ ಧ್ವನಿ ಅಂತ ಹೇಳಿಕೆ ನೀಡಲಾಗಿದೆ. ಈ ಸಂಬಂದ ಸಂತ್ರಸ್ಥೆ ವಾಯ್ಸ್ ಸ್ಯಾಂಪಲ್ ರೆಕಾರ್ಡ್ ಮಾಡಿರುವ ಎಸ್ಐಟಿ, ಸಂತ್ರಸ್ಥೆಯ ವಾಯ್ಸ್ ರೆಕಾರ್ಡ್ ಮಾಡಿ ಮಾದರಿ ಸಂಗ್ರಹಿಸಿ ಎಫ್ಎಸ್ ಎಲ್ ಗೆ ಕಳುಹಿಸಿದ್ದಾರೆ. ಇದುವರೆಗೂ ಕೇವಲ ಕಬ್ಬನ್ ಪಾರ್ಕ್ ಠಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತ್ರ ವಿಚಾರಣೆ ನಡೆಸಲಾಗುತ್ತಿದೆ.

ಸಂತ್ರಸ್ಥೆ ಬಳಿ ಸಿಆರ್ ಪಿಸಿ 161 ರಡಿ ಹೇಳಿಕೆ ದಾಖಲಿಸಿಕೊಳ್ಳುತ್ತಿರುವ ಎಸ್ಐಟಿ ಇನ್ನೂ ಮರುಪ್ರಶ್ನೆಗಳನ್ನಿಡದೇ ಸದ್ಯದವರೆಗೂ ಆಕೆ ಹೇಳಿಕೆಯನ್ನು ಮಾತ್ರ ದಾಖಲು ಮಾಡಿಕೊಳ್ತಿರುವ ಎಸ್ಐಟಿ, ವಿವಿಧ ಕೇಸ್​ಗಳಿಗೆ ಪ್ರತ್ಯೇಕ ತನಿಖಾಧಿಕಾರಿಗಳಿಂದ ವಿಚಾರಣೆ ನಡೆಸಿ ಹೇಳಿಕೆ ದಾಖಲು ಮಾಡಿಕೊಳ್ಳಲಾಗುತ್ತಿದೆ. ಏಪ್ರಿಲ್ 2 ರಂದು ವಿಚಾರಣೆಗೆ ಐಓ ಎಸಿಪಿ ನಾಗರಾಜ್ ಮುಂದೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಸಂತ್ರಸ್ಥೆ ಪೋಷಕರು ಎಪಿಎಂಸಿ ಠಾಣೆಯಲ್ಲಿ ನೀಡಿದ್ದ ಕಿಡ್ನಾಪ್ ಪ್ರಕರಣ ಸಂಬಂಧ ವಿಚಾರಣೆ ನಡೆಸಿ ಹೇಳಿಕೆ ಪಡೆಯಲು ನೋಟೀಸ್ ಜಾರಿ ಮಾಡಲಾಗಿದೆ.

ಇಂದು ಪ್ರಕರಣ ಸಂಬಂದ ಕೃತ್ಯ ನಡೆದ ಸ್ಥಳದ ಸ್ಪಾಟ್ ಮಹಜರು ಪ್ರಕ್ರಿಯೆ. ತನಿಖಾಧಿಕಾರಿ ಎಸಿಪಿ ಕವಿತಾ ನೇತೃತ್ವದ ತಂಡದಿಂದ ಸಂತ್ರಸ್ಥೆ ಸಮಕ್ಷಮದಲ್ಲಿ ಸ್ಥಳ ಮಹಜರು ಮಾಡಲಾಗುತ್ತದೆ. ಆರ್ ಟಿ ನಗರದಲ್ಲಿರುವ ಸಂತ್ರಸ್ಥೆ ಮನೆ ಸರ್ಚ್ ಮಾಡಿ ಮಹಜರು ಪ್ರಕ್ರಿಯೆ ನಡೆಸಲಿದ್ದಾರೆ. ಸಂತ್ರಸ್ಥೆ ವಿಡಿಯೋ ಕಾಲ್ ಮಾಡಿದ್ದ ಆರ್ ಟಿ ನಗರದ ಮನೆ ಮಹಜರು ಮಾಡಲಾಗುತ್ತದೆ.

ಮಂತ್ರಿ ಗ್ರೀನ್ಸ್ ಅಪಾರ್ಟ್ಮೆಂಟ್ ಪ್ಲಾಟ್ ನಲ್ಲಿ ಸಂತ್ರಸ್ಥೆಗೆ ಎರಡು ಬಾರಿ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಮಲ್ಲೇಶ್ವರಂ ಮಂತ್ರಿ ಗ್ರೀನ್ಸ್ ಅಪಾರ್ಟ್ಮೆಂಟ್ ಕೃತ್ಯ ನಡೆದ ಫ್ಲಾಟ್ ಮಹಜರು ಮಾಡಲಾಗುತ್ತದೆ. ಈ ವೇಳೆ ಲೈವ್ ಎವಿಡೆನ್ಸ್ ಮೆಟಿರಿಯಲ್ ಎವಿಡೆನ್ಸ್, ಡಿಜಿಟಲ್ ಎವಿಡೆನ್ಸ್ ಗಳನ್ನು ಸಂಗ್ರಹಿಸಲಾಗುತ್ತದೆ. ಡಿಜಿಟಲ್ ಎವಿಡೆನ್ಸ್ ಎಂದರೆ, ಸಂತ್ರಸ್ಥೆ ಕೃತ್ಯ ನಡೆದಿದ್ದಾಗಿ ಹೇಳಿಕೆ ನೀಡಿದ ದಿನ ಮೊಬೈಲ್ ಲೋಕೆಷನ್ ಟ್ರೇಸ್, ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಮಾಡಲಾಗುತ್ತದೆ. ಡಿವಿಆರ್ ವಶಕ್ಕೆ ಪಡೆದು ಸಿಸಿಟಿವಿ ದೃಶ್ಯಾವಳಿ ಎವಿಡೆನ್ಸ್ ಆಗಿ ಸಂಗ್ರಹಿಸಲಾಗುತ್ತದೆ.

ಮೆಟಿರಿಯಲ್ ಎವಿಡೆನ್ಸ್ ಎಸ್ಐಟಿ ಕೃತ್ಯ ನಡೆದ ಸ್ಥಳದಲ್ಲಿ ಕೂದಲು, ಬಟ್ಟೆಗಳನ್ನ ಸಂಗ್ರಹಿಸಲಿದೆ. ಕೃತ್ಯ ನಡೆದ ದಿನ ಸಂತ್ರಸ್ಥೆ ಮತ್ತು ಆಕೆ ಆರೋಪಿಸ್ತಿರುವ ರಮೇಶ್ ಜಾರಕಿ ಹೊಳಿ ಅಪಾರ್ಟ್ಮೆಂಟ್ ಬಂದಿದ್ದನ್ನು ನೋಡಿರುವ ವ್ಯಕ್ತಿಗಳ ಹೇಳಿಕೆಯನ್ನು ಪಡೆಯಲಾಗುತ್ತದೆ.

Published On - 9:08 am, Thu, 1 April 21