ಬಾಕಿ ಹಣ ಕೊಡೋವರೆಗೂ ಬರಲ್ಲ -ಸೋಂಕಿತರ ಶಿಫ್ಟ್​ ಮಾಡಲು ಆ್ಯಂಬುಲೆನ್ಸ್​ ಚಾಲಕರು ನಕಾರ

| Updated By: ಸಾಧು ಶ್ರೀನಾಥ್​

Updated on: Mar 19, 2021 | 5:02 PM

ರಾಜ್ಯದಲ್ಲಿ ಎರಡನೇ ಬಾರಿಗೆ ಕೊರೊನಾ ಮಹಾಮಾರಿಯ ಕರಿಛಾಯೆ ಆವರಿಸುವ ಭೀತಿಯ ಹಿನ್ನೆಲೆಯಲ್ಲಿ ಈ ಹಿಂದೆ ಬಂದ್​ ಮಾಡಲಾಗಿದ್ದ ಕೊವಿಡ್​ ಕೇರ್​ ಸೆಂಟರ್​ಗಳನ್ನು ಪುನರಾರಂಭಗೊಳಿಸಲು ಚಿಂತನೆ ನಡೆಸಲಾಗಿದೆ. ಆದರೆ, ಸೋಂಕಿತರನ್ನ ಈ ಸೆಂಟರ್​ಗಳಿಗೆ ಸ್ಥಳಾಂತರ ಮಾಡಲು ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಏಕೆಂದರೆ, ಈ ಬಾರಿ ಸೋಂಕಿತರನ್ನು ಕೊವಿಡ್​ ಸೆಂಟರ್​ಗಳಿಗೆ ಶಿಫ್ಟ್​ ಮಾಡಲು ಆ್ಯಂಬುಲೆನ್ಸ್​ ಹಾಗೂ ಟಿಟಿ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ.

ಬಾಕಿ ಹಣ ಕೊಡೋವರೆಗೂ ಬರಲ್ಲ -ಸೋಂಕಿತರ  ಶಿಫ್ಟ್​ ಮಾಡಲು ಆ್ಯಂಬುಲೆನ್ಸ್​ ಚಾಲಕರು ನಕಾರ
ಖಾಸಗಿ ಟಿಟಿ ಆಂಬುಲೆನ್ಸ್​ಗಳು (ಸಂಗ್ರಹ ಚಿತ್ರ)
Follow us on

ಬೆಂಗಳೂರು: ರಾಜ್ಯದಲ್ಲಿ ಎರಡನೇ ಬಾರಿಗೆ ಕೊರೊನಾ ಮಹಾಮಾರಿಯ ಕರಿಛಾಯೆ ಆವರಿಸುವ ಭೀತಿ ಹಿನ್ನೆಲೆಯಲ್ಲಿ ಈ ಹಿಂದೆ ಬಂದ್​ ಮಾಡಲಾಗಿದ್ದ ಕೊವಿಡ್​ ಕೇರ್​ ಸೆಂಟರ್​ಗಳನ್ನು ಪುನರಾರಂಭಗೊಳಿಸಲು ಚಿಂತನೆ ನಡೆಸಲಾಗಿದೆ. ಆದರೆ, ಸೋಂಕಿತರನ್ನ ಈ ಸೆಂಟರ್​ಗಳಿಗೆ ಸ್ಥಳಾಂತರ ಮಾಡಲು ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಏಕೆಂದರೆ, ಈ ಬಾರಿ ಸೋಂಕಿತರನ್ನು ಕೊವಿಡ್​ ಸೆಂಟರ್​ಗಳಿಗೆ ಶಿಫ್ಟ್​ ಮಾಡಲು ಆ್ಯಂಬುಲೆನ್ಸ್​ ಹಾಗೂ ಟಿಟಿ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ.

ಅಂದ ಹಾಗೆ, ಕಳೆದ ಬಾರಿ ಸೋಂಕಿತರನ್ನ ಕೊವಿಡ್-19 ಕೇರ್​ ಸೆಂಟರ್​ಗಳಿಗೆ ಶಿಫ್ಟ್​ ಮಾಡಲು ಖಾಸಗಿ ಟಿಟಿ ಮತ್ತು ಆ್ಯಂಬುಲೆನ್ಸ್​ಗಳ ಸಹಾಯ ಪಡೆಯಲಾಗಿತ್ತು. ಸರ್ಕಾರಿ ಌಂಬುಲೆನ್ಸ್​ಗಳ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಖಾಸಗಿ ಟಿಟಿ ಮತ್ತು ಆ್ಯಂಬುಲೆನ್ಸ್ ಹಾಗೂ ಚಾಲಕರ ಸಹಾಯವನ್ನ ಪಡೆದಿತ್ತು. ಅಂತೆಯೇ, ಹಿಂದಿನಂತೆ ಈ ಬಾರಿಯೂ ಸಿದ್ಧತೆ ಮಾಡಿಕೊಳ್ಳಲು ಬಿಬಿಎಂಪಿ ಸೂಚನೆ ನೀಡಿದೆ.

ಖಾಸಗಿ ಟಿಟಿ ವಾಹನ

ಆದರೆ ಆ್ಯಂಬುಲೆನ್ಸ್​ ಹಾಗೂ ಟಿಟಿ ಚಾಲಕರ ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಕಾರಣ ಪಾಲಿಕೆ ಕಳೆದ ವರ್ಷದ ಬಾಕಿ ಹಣವನ್ನು ಇನ್ನೂ ಕೊಟ್ಟಿಲ್ಲವಂತೆ. ಹಾಗಾಗಿ, ಬಾಕಿ ಹಣ ನೀಡೋವರೆಗೂ ನಾವು ಬರಲ್ಲ ಎಂದು ಚಾಲಕರು ಪಟ್ಟು ಹಿಡಿದಿದ್ದಾರೆ. ಆದ್ದರಿಂದ, ಈ ಬಾರಿ ಸೋಂಕಿತರ ಸ್ಥಳಾಂತರಕ್ಕೆ ಸಮಸ್ಯೆ ಎದುರಾಗಬಹುದು. ಪಾಲಿಕೆ ಈ ನಿಟ್ಟಿನಲ್ಲಿ ಕೂಡಲೇ ಕ್ರಮ ಜರುಗಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಇತ್ತ, ಕೊರೊನಾ ಸೋಂಕು ತಡೆಗೆ ಹೊಸ ಮಾರ್ಗಸೂಚಿ ವಿಚಾರವಾಗಿ ಬಿಬಿಎಂಪಿಯಿಂದ ಪತ್ರ ಬಂದಿದೆ. ಈ ಕುರಿತು ಮುಖ್ಯಮಂತ್ರಿ ಜೊತೆಗೆ ಚರ್ಚೆ ಮಾಡುತ್ತೇನೆ. ಬೆಂಗಳೂರಿನಲ್ಲಿ ಏನು ಕ್ರಮಗಳನ್ನ ತೆಗೆದುಕೊಳ್ಳಬೇಕು. ಇತರೆ ಭಾಗಗಳಲ್ಲಿ ಏನು ಕ್ರಮ ತಗೋಬೇಕೆಂದು ಚರ್ಚೆ ಮಾಡುತ್ತೇವೆ. ಯಾವ ಕ್ರಮ ಕೈಗೊಳ್ಳಬೇಕೆಂದು ಚರ್ಚಿಸಿ ಪ್ರಕಟಿಸ್ತೇನೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಈ ಮಧ್ಯೆ ಹೇಳಿದ್ದಾರೆ.

ಇದನ್ನೂ ಓದಿ: ಮಾಸ್ಕ್​ ಧರಿಸದ ದಂಪತಿಗೆ ದಂಡ, ನನ್ನ ಹೆಂಡತಿಯನ್ನು ತಡೆದಿದ್ದು ಯಾಕೆಂದ ಗಂಡ! ವಿಡಿಯೋ ವೈರಲ್