Tulu Language: ತುಳು ಭಾಷೆಗೆ ಸೂಕ್ತ ಸ್ಥಾನಮಾನ; ಟ್ವಿಟರ್​ನಲ್ಲಿ ಜೋರಾಯ್ತು ತುಳು ಭಾಷಿಕರ ಹೋರಾಟ

ಈ ಹಿಂದೆಯೂ ತುಳುಭಾಷೆಯ ಸ್ಥಾನಮಾನಕ್ಕಾಗಿ ಟ್ವೀಟ್ ಅಭಿಯಾನ ಮಾಡಲಾಗಿತ್ತು. ಆದರೆ ಸರ್ಕಾರ ತುಳುವರ ಕೂಗಿಗೆ ಕಿವಿಯಾಗಿಲ್ಲ. ಕರಾವಳಿ ಭಾಗದ ರಾಜಕಾರಣಿಗಳು ಕೂಡ ಅಸಕ್ತಿ ತೋರಿರಲಿಲ್ಲ.

Tulu Language: ತುಳು ಭಾಷೆಗೆ ಸೂಕ್ತ ಸ್ಥಾನಮಾನ; ಟ್ವಿಟರ್​ನಲ್ಲಿ ಜೋರಾಯ್ತು ತುಳು ಭಾಷಿಕರ ಹೋರಾಟ
ತುಳುನಾಡು
Edited By:

Updated on: Jun 13, 2021 | 11:30 PM

ಉಡುಪಿ: ತುಳು ಭಾಷೆಗೆ ಸೂಕ್ತ ಸ್ಥಾನಮಾನ ಸಿಗಬೇಕು ಎನ್ನುವುದು ಬಹುಕಾಲದ ಕೂಗು. ಈ ಕುರಿತು ಆಯಾಕಾಲಘಟ್ಟದಲ್ಲಿ ನಾನಾ ಹೋರಾಟಗಳೂ ನಡೆದಿವೆ. ಇದೀಗ ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆಗೆ ಒತ್ತಾಯಿಸಿ ಕರಾವಳಿಯಲ್ಲಿ ಟ್ವಿಟರ್ ಅಭಿಯಾನ ಜೋರಾಗಿ ನಡೆಯುತ್ತಿದೆ. ತುಳು ಸಂಘಟನೆಗಳು ಮತ್ತು ತುಳು ಭಾಷಿಗರಿಂದ ಟ್ವಿಟರ್ ಅಭಿಯಾನ ಇಂದು ಬೆಳಗ್ಗಿನಿಂದಲೇ ಆರಂಭವಾಗಿದೆ. ಬೆಳಿಗ್ಗೆ ಆರಂಭವಾದ ಅಭಿಯಾನಕ್ಕೆ ಸಾವಿರಾರು ಟ್ವೀಟ್​ಗಳ ಬೆಂಬಲ ಹರಿದುಬರುತ್ತಿದೆ.

ತುಳು ಭಾಷೆಗೆ ಸಾಂವಿಧಾನಿಕ ಸ್ಥಾನಮಾನ ದೊರೆಯಬೇಕು. 8ನೇ ಪರಿಚ್ಛೇದಕ್ಕೆ ತುಳು ಸೇರಬೇಕು ಎಂಬ ಅಭಿಯಾನ ಸದ್ದು ಮಾಡುತ್ತಿದೆ. ಭಾರತದ ಟ್ವಿಟರ್ ಟ್ರೆಂಡಿಂಗ್ ನಲ್ಲಿ #TuluOfficialinKA_KLಗೆ 31ನೇ ಸ್ಥಾನವೂ ದೊರಕಿದೆ. ಬೆಳಿಗ್ಗಿನಿಂದ ಮಧ್ಯಾಹ್ನದವರೆ ಒಂದು ಲಕ್ಷಕ್ಕೂ ಅಧಿಕ ಟ್ವೀಟ್​ಗಳು ಈ ಸಂಬಂಧ ಹರಿದಾಡಿವೆ. ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ನೀಡಿ ಎಂದು ನಡೆಯುತ್ತಿರುವ ಭರ್ಜರಿ ಅಭಿಯಾನ ಇದಾಗಿದೆ.

ಈ ಹಿಂದೆಯೂ ತುಳುಭಾಷೆಯ ಸ್ಥಾನಮಾನಕ್ಕಾಗಿ ಟ್ವೀಟ್ ಅಭಿಯಾನ ಮಾಡಲಾಗಿತ್ತು. ಆದರೆ ಸರ್ಕಾರ ತುಳುವರ ಕೂಗಿಗೆ ಕಿವಿಯಾಗಿಲ್ಲ. ಕರಾವಳಿ ಭಾಗದ ರಾಜಕಾರಣಿಗಳು ಕೂಡ ಅಸಕ್ತಿ ತೋರಿರಲಿಲ್ಲ. ಹೀಗಾಗಿ ಇಂದು ಮತ್ತೆ ಜೈ ತುಳುನಾಡು ಸಂಘಟನೆ ನೇತೃತ್ವದಲ್ಲಿ ಶಕ್ತಿ ಪ್ರದರ್ಶನ ನಡೆಯುತ್ತಿದೆ. ಸಂಜೆಯವರೆಗೂ ನಡೆಯಲಿರುವ ಅಭಿಯಾನದಲ್ಲಿ ದೇಶ-ವಿದೇಶಗಳ ತುಳುವರು ಭಾಗಿಯಾಗಿದ್ದಾರೆ.

ಪ್ರಧಾನಿ,ಮುಖ್ಯಮಂತ್ರಿ ಸೇರಿದ ಜನಪ್ರನಿಧಿಗಳಿಗೂ ಟ್ವೀಟ್ ಟ್ಯಾಗ್ ಮಾಡಿ ಒತ್ತಾಯ ಮಾಡಲಾಗುತ್ತಿದೆ. ಕರಾವಳಿಗರು ಹಿಂದೆಂದಿಗಿಂತಲೂ ಹೆಚ್ಚು ಸಕ್ರಿಯವಾಗಿ ಭಾಗವಹಿಸಿ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ರಾಜಕೀಯ ರಂಗ, ಸಿನಿಮಾ ರಂಗ, ವಿವಿಧ ಸಂಘಟನೆಗಳು, ಜನಸಾಮಾನ್ಯರು ಸಹಿತ ಹಲವಾರು ಮಂದಿ ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಕನ್ನಡ ಸಿನಿರಂಗದಿಂದ ಬಣ್ಣದ ಬದುಕು ಆರಂಭಿಸಿ ಪರಭಾಷೆಯಲ್ಲಿ ಮಿಂಚಿದ ನಟಿಯರಿವರು

Published On - 5:16 pm, Sun, 13 June 21