AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡ ಸಿನಿರಂಗದಿಂದ ಬಣ್ಣದ ಬದುಕು ಆರಂಭಿಸಿ ಪರಭಾಷೆಯಲ್ಲಿ ಮಿಂಚಿದ ನಟಿಯರಿವರು

ಸ್ಯಾಂಡಲ್​ವುಡ್​ ಮೂಲಕ ಬಣ್ಣದ ಬದುಕು ಆರಂಭಿಸಿದ ಸಾಕಷ್ಟು ನಟಿಮಣಿಯರು ನಂತರ ಟಾಲಿವುಡ್​ ಹಾಗೂ ಬಾಲಿವುಡ್​ನಲ್ಲಿ ತಮ್ಮ ಅದೃಷ್ಟಪರೀಕ್ಷೆ ಮಾಡಿದ್ದಾರೆ. ಇವರಲ್ಲಿ, ಕೆಲವರು ಯಶಸ್ವಿಯಾದರೆ, ಇನ್ನೂ ಕೆಲವರು ಹೇಳ ಹೆಸರಿಲ್ಲದಂತೆ ಕಾಣೆಯಾಗಿದ್ದಾರೆ.

ಕನ್ನಡ ಸಿನಿರಂಗದಿಂದ ಬಣ್ಣದ ಬದುಕು ಆರಂಭಿಸಿ ಪರಭಾಷೆಯಲ್ಲಿ ಮಿಂಚಿದ ನಟಿಯರಿವರು
ಕನ್ನಡದಿಂದ ಬಣ್ಣದ ಬದುಕು ಆರಂಭಿಸಿ ಪರಭಾಷೆಯಲ್ಲಿ ಮಿಂಚಿದ ನಟಿಯರಿವರು
ರಾಜೇಶ್ ದುಗ್ಗುಮನೆ
| Edited By: |

Updated on:May 26, 2021 | 6:41 PM

Share

ಸ್ಯಾಂಡಲ್​ವುಡ್​ ಮೂಲಕ ಬಣ್ಣದ ಬದುಕು ಆರಂಭಿಸಿದ ಸಾಕಷ್ಟು ನಟಿಮಣಿಯರು ನಂತರ ಟಾಲಿವುಡ್​ ಹಾಗೂ ಬಾಲಿವುಡ್​ನಲ್ಲಿ ತಮ್ಮ ಅದೃಷ್ಟಪರೀಕ್ಷೆ ಮಾಡಿದ್ದಾರೆ. ಇವರಲ್ಲಿ, ಕೆಲವರು ಯಶಸ್ವಿಯಾದರೆ, ಇನ್ನೂ ಕೆಲವರು ಹೇಳ ಹೆಸರಿಲ್ಲದಂತೆ ಕಾಣೆಯಾಗಿದ್ದಾರೆ. ಹಾಗಾದರೆ, ಕನ್ನಡದಿಂದ ಬಣ್ಣದ ಬದುಕು ಆರಂಭಿಸಿ ಪರಭಾಷೆಯಲ್ಲಿ ಮಿಂಚಿದ ನಟಿಯರು ಯರ್ಯಾರು ಎಂಬುದಕ್ಕೆ ಇಲ್ಲಿದೆ ಮಾಹಿತಿ.

ರೇಖಾ: ಭಾರತೀಯ ಚಿತ್ರರಂಗ ಕಂಡ ಅದ್ಭುತ ನಟಿಯರ ಪೈಕಿ ರೇಖಾ ಮುಂಚೂಣಿಯಲ್ಲಿದ್ದಾರೆ. ಆರಂಭದ ದಿನಗಳಲ್ಲಿ ಭಾನುರೇಖಾ ಗಣೇಶನ್​ ಆಗಿದ್ದ ಅವರು, ನಂತರ ರೇಖಾ ಆಗಿ ಬಾಲಿವುಡ್​ನಲ್ಲಿ ಗುರುತಿಸಿಕೊಂಡರು. ಇವರಿಗೆ ಸಾಕಷ್ಟು ನ್ಯಾಷನಲ್​ ಅವಾರ್ಡ್​ಗಳು ಬಂದಿವೆ. ಇವರು 180ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ರೇಖಾ ಸಿನಿಮಾ ಬದುಕು ಆರಂಭಿಸಿದ್ದು ಕನ್ನಡ ಸಿನಿಮಾ ಮೂಲಕ. 1969ರಲ್ಲಿ ತೆರೆಕಂಡ ‘ಆಪರೇನ್​ ಜಾಕ್​ಪಾಟ್​ನಲ್ಲಿ ಸಿ.ಐ.ಡಿ 999’ ಚಿತ್ರದಲ್ಲಿ ರಾಜ್​​ಕುಮಾರ್​ಗೆ ಜತೆಯಾಗಿ ರೇಖಾ ಕಾಣಿಸಿಕೊಂಡಿದ್ದರು.

 ದೀಪಿಕಾ ಪಡುಕೋಣೆ: ದೀಪಿಕಾ ಪಡುಕೋಣೆ ಬಾಲಿವುಡ್​ನ ಬಹುಬೇಡಿಕೆಯ ನಟಿ. ಅವರ ನಟನೆಯ ಸಾಕಷ್ಟು ಚಿತ್ರಗಳು ಬಾಲಿವುಡ್​ ಬಾಕ್ಸ್​ ಆಫೀಸ್​ನಲ್ಲಿ ಕಮಾಲ್​ ಮಾಡಿವೆ. ಇವರು ಕನ್ನಡದ ‘ಐಶ್ವರ್ಯ‘ ಸಿನಿಮಾದಲ್ಲಿ ಉಪೇಂದ್ರಗೆ ಜತೆಯಾಗಿ ನಟಿಸಿದ್ದರು. ಇದು ಅವರ ಸಿನಿಬದುಕಿನ ಮೊದಲ ಸಿನಿಮಾ. 2006ರಲ್ಲಿ ತೆರೆಗೆ ಬಂದ ಈ ಚಿತ್ರಕ್ಕೆ ಇಂದ್ರಜಿತ್​ ಲಂಕೇಶ್​​​ ಆ್ಯಕ್ಷನ್​ ಕಟ್​ ಹೇಳಿದ್ದರು.

ರಶ್ಮಿಕಾ ಮಂದಣ್ಣ: 2016ರಲ್ಲಿ ತೆರೆಕಂಡ ಕಿರಿಕ್​ ಪಾರ್ಟಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟವರು ನಟಿ ರಶ್ಮಿಕಾ ಮಂದಣ್ಣ. ನಂತರ ಅವರು ಟಾಲಿವುಡ್​ಗೆ ಕಾಲಿಟ್ಟರು. ಅಲ್ಲಿ ಸ್ಟಾರ್​ ನಟರ ಜತೆ ತೆರೆ ಹಂಚಿಕೊಂಡ ನಂತರ ಕಾಲಿವುಡ್​ಗೆ ಪಯಣ ಬೆಳೆಸಿದರು. ನಂತರ ನೇರವಾಗಿ ಅವರು ಕಾಲಿಟ್ಟಿದ್ದು ಬಾಲಿವುಡ್​ಗೆ. ಸದ್ಯ ಹಿಂದಿಯಲ್ಲಿ ಎರಡು ಚಿತ್ರಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

ಜೆ. ಜಯಲಲಿತಾ: ಸಿನಿಮಾ ಹಾಗೂ ರಾಜಕೀಯ ಎರಡಲ್ಲೂ ಮಿಂಚಿದವರು ಜೆ.ಜಯಲಲಿತಾ. ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ ನಂತರ ಅವರು ರಾಜಕೀಯದತ್ತ ಹೊರಳಿದರು. ಅವರ ಕುರಿತು ತಲೈವಿ ಹೆಸರಿನಲ್ಲಿ ಬಯೋಪಿಕ್ ಕೂಡ ಸಿದ್ಧಗೊಂಡಿದ್ದು, ರಿಲೀಸ್​ಗೆ ರೆಡಿ ಇದೆ. ಕನ್ನಡದ ‘ಶ್ರೀ ಶೈಲ ಮಹಾತ್ಮೆ’ ಸಿನಿಮಾದಲ್ಲಿ ಜಯಲಲಿತಾ ಬಾಲ ಕಲಾವಿದೆಯಾಗಿ ನಟಿಸಿದ್ದರು. ರಾಜ್​ಕುಮಾರ್​ ನಟನೆಯ ಈ ಸಿನಿಮಾ 1961ರಲ್ಲಿ ರಿಲೀಸ್​ ಆಗಿತ್ತು.

ಸೌಂದರ್ಯಾ:  ಸೌಂದರ್ಯಾ ದಕ್ಷಿಣ ಭಾರತದ ಖ್ಯಾತ ನಟಿ ಎನಿಸಿಕೊಂಡಿದ್ದರು. 1992ರಲ್ಲಿ ತೆರೆಗೆ ಬಂದ ‘ಗಂಧರ್ವ’ ಸಿನಿಮಾದಲ್ಲಿ ಲೀಡ್​ ರೋಲ್​ ಮಾಡುವ ಮೂಲಕ ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ನಂತರ ಅವರು ಟಾಲಿವುಡ್​​​ನಲ್ಲಿ ಸಾಕಷ್ಟು ಹೆಸರು ಮಾಡಿದರು.

 ರಾಕುಲ್​ ಪ್ರೀತ್ ಸಿಂಗ್​: ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ಹೆಸರು ಮಾಡಿರುವ ರಾಕುಲ್​ ಪ್ರೀತ್​ ಸಿಂಗ್​ ಬಣ್ಣದ ಬದುಕು ಆರಂಭಿಸಿದ್ದು ಸ್ಯಾಂಡಲ್​ವುಡ್​ನಿಂದ. 2009ರಲ್ಲಿ ರಿಲೀಸ್​ ಆದ ‘ಗಿಲ್ಲಿ’ ಚಿತ್ರದಲ್ಲಿ ರಾಕುಲ್​ ಹೀರೋಯಿನ್​ ಆಗಿದ್ದರು. ಇದು ಅವರ ಮೊದಲ ಸಿನಿಮಾ.

ನಿತ್ಯಾ ಮೆನನ್: ದಕ್ಷಿಣ ಭಾರತದಲ್ಲಿ ನಿತ್ಯಾ ಮೆನನ್​ ಬಹುಬೇಡಿಕೆ ಹೊಂದಿದ್ದರು. ಇವರು ಹೆಚ್ಚಾಗಿ ನಟಿಸಿದ್ದು ಮಲಯಾಳಂ ಚಿತ್ರರಂಗದಲ್ಲಿ ಆದರೆ, ಇವರ ಮೊದಲ ಸಿನಿಮಾ ಕನ್ನಡದ್ದು. 17ನೇ ವಯಸ್ಸಿಗೆ ಸಿನಿ ಬದುಕು ಆರಂಭಿಸಿದ್ದು 7ಓ’ಕ್ಲಾಕ್​ ಚಿತ್ರದ ಮೂಲಕ.

ಇದನ್ನೂ ಓದಿ: ವಿವಾಹಿತ ಮಹಿಳೆಯ ಜತೆ ಪ್ರೀತಿಯಲ್ಲಿ ಬಿದ್ದ ರಾಜಮೌಳಿ; ಯಾವ ಸಿನಿಮಾಕ್ಕೂ ಕಮ್ಮಿ ಇಲ್ಲ ಈ ನಿರ್ದೇಶಕನ ಪ್ರೇಮಕಥೆ

Published On - 3:04 pm, Wed, 26 May 21