ತುಮಕೂರು: ಲಂಚಕ್ಕೆ ಬೇಡಿಕೆ ಇಟ್ಟ ಪಿಎಸ್​ಐ ಹಾಗೂ ಪೇದೆ ಅಮಾನತು

| Updated By: shivaprasad.hs

Updated on: Jul 16, 2021 | 11:36 AM

Tumakuru: ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಹಿನ್ನೆಲೆಯಲ್ಲಿ ತುಮಕೂರು ನಗರ ಪೊಲಿಸ್ ಠಾಣೆಯ ಈರ್ವರು ಪೊಲಿಸರನ್ನು ಅಮಾನತುಗೊಳಿಸಲಾಗಿದೆ.

ತುಮಕೂರು: ಲಂಚಕ್ಕೆ ಬೇಡಿಕೆ ಇಟ್ಟ ಪಿಎಸ್​ಐ ಹಾಗೂ ಪೇದೆ ಅಮಾನತು
ಪಿಎಸ್​ಐ ಮಂಜುನಾಥ್
Follow us on

ತುಮಕೂರು: ಆರೋಪಿ ಬಿಡುಗಡೆಗೆ ಲಂಚಕ್ಕೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ತುಮಕೂರು ನಗರ ಠಾಣೆಯ ಪಿಎಸ್​ಐ ಹಾಗೂ ಕಾನ್ಸ್ಟೇಬಲ್ ಅನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಠಾಣೆಯ ಪಿಎಸ್​ಐಯಾಗಿದ್ದ ಮಂಜುನಾಥ್ ಹಾಗೂ ಕಾನ್ಸ್ಟೇಬಲ್ ರಂಗನಾಥ್ ಅವರನ್ನು ಅಮಾನತುಗೊಳಿಸಲಾಗಿದೆ.

ರಿಯಲ್ ಎಸ್ಟೇಟ್ ಕೇಸ್ ಒಂದರಲ್ಲಿ ಆರೋಪಿಗೆ ಹೈಕೋರ್ಟ್​ನಲ್ಲಿ ಜಾಮೀನು ದೊರೆತಿತ್ತು. ಆದರೆ ಆತನ ಬಿಡುಗಡೆ ಪ್ರಕ್ರಿಯೆಗೆ ಈರ್ವರು ಲಂಚ ಕೇಳಿದ ಆರೋಪ ಬಂದಿದೆ. ಈ ಹಿನ್ನೆಲೆಯಲ್ಲಿ ತುಮಕೂರು ಎಸ್​ಪಿ ರಾಹುಲ್ ಕುಮಾರ್ ಅವರಿಗೆ ದೂರು ನೀಡಲಾಗಿತ್ತು. ತನಿಖೆ ನಡೆಸಿದ ಅವರು ಮಂಜುನಾಥ್ ಹಾಗೂ ರಂಗನಾಥ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಕ್ರಿಮಿನಲ್​ಗೆ ಕೇಕ್ ತಿನ್ನಿಸಿದ ಮುಂಬೈ ಪೊಲೀಸ್ ಇನ್ಸ್​ಪೆಕ್ಟರ್​​; ವಿಡಿಯೋದಲ್ಲಿ ದೃಶ್ಯ ಸೆರೆ, ತನಿಖೆಗೆ ಆದೇಶ

ಇದನ್ನೂ ಓದಿ: ಮಾಸ್ಕ್​ ಧರಿಸಲು ಹೇಳಿದ KSRTC ಬಸ್ ಕಂಡಕ್ಟರ್​ಗೆ ಹಿಗ್ಗಾಮುಗ್ಗಾ ಥಳಿಸಿ ಹಲ್ಲು ಮುರಿದ ಯುವಕರು

ಇದನ್ನೂ ಓದಿ: ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಕಂಡವರ ಕಾರುಗಳ ಗಾಜು ಪುಡಿ ಪುಡಿ

(Tumakuru City station PSI and Constable suspended for asking bribe)

Published On - 11:33 am, Fri, 16 July 21