ಹೆಚ್​​ಎಲ್​ಆರ್​ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1 ಗಂಟೆಗೆ ದೆಹಲಿ ಕಡೆಗೆ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಪ್ರಯಾಣ

ಇಂದು ಸಂಜೆ ಪ್ರಧಾನಿ ಮೋದಿ ಭೇಟಿ ಮಾಡಿ, ಮೇಕೆದಾಟು ವಿಚಾರ ಚರ್ಚೆ ಮಾಡುತ್ತೇನೆ ಹಾಗೂ ಶನಿವಾರ ವಾಪಸ್ ಬೆಂಗಳೂರಿಗೆ ಬರುವುದಾಗಿ ನಿನ್ನೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಹೇಳಿದ್ದರು. ಆದರೆ ಈಗ ಬಂದ ಮಾಹಿತಿ ಪ್ರಕಾರ ಸೋಮವಾರ ಗೃಹಕಚೇರಿ ಕೃಷ್ಣಾದಲ್ಲಿ ನಿಗದಿಯಾಗಿದ್ದ ಜಲಜೀವನ್ ಮಿಷನ್ ಕುರಿತ ಸಭೆಯನ್ನು ಸಿಎಂ ರದ್ದು ಮಾಡಿದ್ದಾರೆ.

ಹೆಚ್​​ಎಲ್​ಆರ್​ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1 ಗಂಟೆಗೆ ದೆಹಲಿ ಕಡೆಗೆ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಪ್ರಯಾಣ
ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ಇಂದು ಮಧ್ಯಾಹ್ನ 1 ಗಂಟೆಗೆ ದೆಹಲಿಗೆ ತೆರಳಲಿದ್ದಾರೆ. ಹೆಚ್​​ಎಲ್​ಆರ್​ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ಸಿಎಂ ಬಿಎಸ್‌ವೈ ಪ್ರಯಾಣ ಬೆಳೆಸಲಿದ್ದು, ಅವರ ಜತೆಗೆ 8 ಜನರು ಪ್ರಯಾಣ ಮಾಡಲಿದ್ದಾರೆ. ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ, ಸಂಸದ ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಲೆಹರ್ ಸಿಂಗ್, ಮುಖ್ಯಮಂತ್ರಿ ಸ್ಪೆಷಲ್ ಆಫೀಸರ್ ಗಿರೀಶ್ ಹೊಸೂರ್ ಸೇರಿ ಒಟ್ಟು 8 ಜನ ದೆಹಲಿಗೆ ತೆರಳಲಿದ್ದಾರೆ.

ಇಂದು ಸಂಜೆ ಪ್ರಧಾನಿ ಮೋದಿ ಭೇಟಿ ಮಾಡಿ, ಮೇಕೆದಾಟು ವಿಚಾರ ಚರ್ಚೆ ಮಾಡುತ್ತೇನೆ ಹಾಗೂ ಶನಿವಾರ ವಾಪಸ್ ಬೆಂಗಳೂರಿಗೆ ಬರುವುದಾಗಿ ನಿನ್ನೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಹೇಳಿದ್ದರು. ಈಗ ಬಂದ ಮಾಹಿತಿ ಪ್ರಕಾರ ಸೋಮವಾರ ಗೃಹಕಚೇರಿ ಕೃಷ್ಣಾದಲ್ಲಿ ನಿಗದಿಯಾಗಿದ್ದ ಜಲಜೀವನ್ ಮಿಷನ್ ಕುರಿತ ಸಭೆಯನ್ನು ಸಿಎಂ ರದ್ದು ಮಾಡಿದ್ದಾರೆ. ಆದರೆ ಇನ್ನೂ ಕೂಡ ದೆಹಲಿ ಭೇಟಿ ಕುರಿತು ಅಧಿಕೃತ ಪ್ರವಾಸ ಪಟ್ಟಿಯನ್ನು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಬಿಡುಗಡೆ ಮಾಡಿಲ್ಲ.

ಮೇಕೆದಾಟು ಯೋಜನೆಗೆ ಆಗ್ರಹಿಸಿ ಮೇಕೆದಾಟುವಿನಿಂದ ವಿಧಾನಸೌಧದವರೆಗೆ ಪಾದಯಾತ್ರೆ
ಮೇಕೆದಾಟು ಡ್ಯಾಂ ಯೋಜನೆಗಾಗಿ ಮೇಕೆದಾಟುನಿಂದ ಬೆಂಗಳೂರಿನ ವಿಧಾನಸೌಧದವರೆಗೆ ಅಗಸ್ಟ್ 3ರಿಂದ 7 ರವರೆಗೆ ಪಾದಯಾತ್ರೆ ನಡೆಸುವುದಾಗಿ ರಾಜ್ಯ ಮೇಕೆದಾಟು ಹೋರಾಟ ಸಮಿತಿ ಘೋಷಿಸಿದೆ. ಐದು ದಿನಗಳ ಪಾದಯಾತ್ರೆಯಲ್ಲಿ ಸಾವಿರಾರು ರೈತರು ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದು, ಹೋರಾಟ ಸಮಿತಿ ಪಾದಯಾತ್ರೆಯನ್ನು ಆಯೋಜಿಸಲಿದೆ. ಕರ್ನಾಟಕ ರಾಜ್ಯ ಮೇಕೆದಾಟು ಹೋರಾಟ ಸಂಘದ ಪ್ರಮುಖರಾದ ಸಂಪತ್ ಕುಮಾರ್, ಜಿ ಜಿ ಹಳ್ಳಿ ನಾರಾಯಣಸ್ವಾಮಿ ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ನೀಡಿದ್ದಾರೆ.

ಈ ಎಲ್ಲದರ ಬೆನ್ನಲ್ಲೇ ಮೇಕೆದಾಟು ಯೋಜನೆಗೆ ಈಗಾಗಲೇ ತಮಿಳುನಾಡು ವಿರೋಧ ನಾಳೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್​ರನ್ನು ಭೇಟಿಯಾಗಲಿರುವ ತಮಿಳುನಾಡು ನಿಯೋಗ ನಿರ್ಧರಿಸಿದೆ.

ಇದನ್ನೂ ಓದಿ:
Mekedatu Project: ನಾಳೆ ದೆಹಲಿ ವಿಮಾನ ಏರಲಿರುವ ಸಿಎಂ ಯಡಿಯೂರಪ್ಪ; ಪ್ರಧಾನಿ ಮೋದಿ ಜತೆ ಮೇಕೆದಾಟು ಯೋಜನೆ ಕುರಿತು ಚರ್ಚೆ ಸಾಧ್ಯತೆ

Tokyo Olympics: ಕರ್ನಾಟಕದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ; 10 ಲಕ್ಷ ರೂ. ನಗದು ನೀಡಿ ಗೌರವಿಸಿದ ಬಿ ಎಸ್ ಯಡಿಯೂರಪ್ಪ

Read Full Article

Click on your DTH Provider to Add TV9 Kannada