AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tokyo Olympics: ಕರ್ನಾಟಕದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ; 10 ಲಕ್ಷ ರೂ. ನಗದು ನೀಡಿ ಗೌರವಿಸಿದ ಬಿ ಎಸ್ ಯಡಿಯೂರಪ್ಪ

ಟೋಕಿಯೋ ಒಲಿಂಪಿಕ್ಸ್​ಗೆ ರಾಜ್ಯದಿಂದ ಆಯ್ಕೆಯಾದ ಕ್ರೀಡಾಪಟುಗಳಿಗೆ ನಗದು ಪ್ರೋತ್ಸಾಹ ನೀಡಲಾಗಿದೆ. ಗೃಹಕಚೇರಿ ಕೃಷ್ಣಾದಲ್ಲಿ ನಗದು ಪ್ರೋತ್ಸಾಹ ಧನ ನೀಡಿ ಸಿಎಂ ಯಡಿಯೂರಪ್ಪ ಗೌರವಿಸಿದ್ದಾರೆ. ಕ್ರೀಡಾಪಟುಗಳು, ಅವರ ಕುಟುಂಬದವರಿಗೆ ಸಿಎಂ ಸನ್ಮಾನ ಮಾಡಿದ್ದಾರೆ.

Tokyo Olympics: ಕರ್ನಾಟಕದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ; 10 ಲಕ್ಷ ರೂ. ನಗದು ನೀಡಿ ಗೌರವಿಸಿದ ಬಿ ಎಸ್ ಯಡಿಯೂರಪ್ಪ
ಬಿ.ಎಸ್​. ಯಡಿಯೂರಪ್ಪ (ಸಂಗ್ರಹ ಚಿತ್ರ)
TV9 Web
| Edited By: |

Updated on:Jul 14, 2021 | 6:18 PM

Share

ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ ನೀಡಿ ಕರ್ನಾಟಕ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗೌರವ ಸಲ್ಲಿಸಿದ್ದಾರೆ. ಐವರು ಕ್ರೀಡಾಪಟುಗಳಿಗೆ ತಲಾ $10 ಲಕ್ಷ ನಗದು ಪ್ರೋತ್ಸಾಹ ಧನ ನೀಡಿ ಯಡಿಯೂರಪ್ಪ ಗೌರವಿಸಿದ್ದಾರೆ.

ಈಕ್ವೆಸ್ಟ್ರಿಯನ್ ಕ್ರೀಡಾಪಟು ಪೌವಾದ್ ಮಿರ್ಜಾ, ಹಾಕಿಪಟು ಎಸ್.ವಿ. ಸುನಿಲ್, ಈಜುಪಟು ಶ್ರೀಹರಿ ನಟರಾಜ್, ಟೆನಿಸ್ ಆಟಗಾರ ರೋಹನ್ ಬೋಪಣ್ಣ, ಗಾಲ್ಫ್ ಆಟಗಾರ್ತಿ ಆದಿತಿ ಅಶೋಕ್​ಗೆ ಸರ್ಕಾರದಿಂದ ಗೌರವ ಧನ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಕ್ರೀಡಾ ಸಚಿವ ಕೆ.ಸಿ. ನಾರಾಯಣ ಗೌಡ ಹಾಗೂ ಕೆಒಎ ಅಧ್ಯಕ್ಷ ಗೋವಿಂದ ರಾಜ್ ಭಾಗವಹಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್​ಗೆ ರಾಜ್ಯದಿಂದ ಆಯ್ಕೆಯಾದ ಕ್ರೀಡಾಪಟುಗಳಿಗೆ ನಗದು ಪ್ರೋತ್ಸಾಹ ನೀಡಲಾಗಿದೆ. ಗೃಹಕಚೇರಿ ಕೃಷ್ಣಾದಲ್ಲಿ ನಗದು ಪ್ರೋತ್ಸಾಹ ಧನ ನೀಡಿ ಸಿಎಂ ಯಡಿಯೂರಪ್ಪ ಗೌರವಿಸಿದ್ದಾರೆ. ಕ್ರೀಡಾಪಟುಗಳು, ಅವರ ಕುಟುಂಬದವರಿಗೆ ಸಿಎಂ ಸನ್ಮಾನ ಮಾಡಿದ್ದಾರೆ.

ಟೋಕಿಯೋಗೆ (Tokyo) ಹೊರಡಲು ಸಜ್ಜಾಗಿರುವ ಭಾರತದ ಪ್ರಮುಖ ಕ್ರೀಡಾಪಟುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಂಗಳವಾರ ಆತ್ಮೀಯ ಮಾತುಕತೆ ನಡೆಸಿದ್ದರು. ಜನರ ನಿರೀಕ್ಷೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಒಲಿಂಪಿಕ್ಸ್‌ ನಲ್ಲಿ ಅತ್ಯುತ್ತಮ ಪ್ರದರ್ಶನದ ಜೊತೆ ನಿಮ್ಮಲ್ಲಿರುವ ಶೇ. 100 ರಷ್ಟು ಪ್ರಯತ್ನ ನೀಡಿ ಎಂದು ಧೈರ್ಯ ತುಂಬಿದ್ದರು.

ಈ ವೇಳೆ ಪ್ರಮಖ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು (PV Sindhu) ಜೊತೆ ಮೋದಿ ತುಂಬಾನೆ ಆತ್ಮೀಯವಾಗಿ ಮಾತನಾಡಿದರು. ಪಿವಿ ಸಿಂಧುಗೆ ಐಸ್​ಕ್ರೀಂ ಎಂದರೆ ತುಂಬಾ ಇಷ್ಟ ಎಂದು ತಿಳಿದ ಪ್ರಧಾನಿ ಅವರು, ತಾವು ಈ ಒಲಂಪಿಕ್ಸ್​ ಕ್ರೀಡೆ ಮುಗಿದ ಬಳಿಕ ಒಟ್ಟಿಗೆ ಐಸ್​ಕ್ರೀಂ ತಿನ್ನೋಣ ಎಂದು ನಗುತ್ತಾ ಹೇಳಿದ್ದರು. ಒಲಂಪಿಕ್ಸ್​ ಸಿದ್ಧತೆಯಲ್ಲಿರುವ ಬ್ಯಾಡ್ಮಿಂಟನ್​ ತಾರೆ ಸಿಂಧು ಡಯಟ್​ ದೃಷ್ಟಿಯಿಂದ ಐಸ್​ ಕ್ರೀಂ ತಿನ್ನುವುದನ್ನು ಸದ್ಯಕ್ಕೆ ತ್ಯಜಿಸಿರುವುದಾಗಿ ತಿಳಿಸಿದರು. ಇದನ್ನು ಕೇಳಿದ ಪ್ರಧಾನಿಗಳು ಟೋಕಿಯಾದಿಂದ ಮರಳಿದ ಬಳಿಕ ಭೇಟಿಯಾದಾಗ ಒಟ್ಟಿಗೆ ಐಸ್​ಕ್ರೀಂ ಸವಿಯೋಣ ಎಂದಿದ್ದರು.

ಪ್ರಧಾನಿ ಮೋದಿಯವರೊಂದಿಗೆ ಪಿವಿ ಸಿಂಧು ಒಲಂಪಿಕ್ಸ್​ ಸಿದ್ಧತೆ ಕುರಿತು ಹಾಗೂ ಭಾರತಕ್ಕೆ ಪದಕ ತರುವ ಕುರಿತು ವಿಶ್ವಾಸ ವ್ಯಕ್ತಪಡಿಸಿದ್ದರು. ಇದೇ ಸಂದರ್ಭ ಕುಸ್ತಿಪಟು ವಿನೇಶ್ ಪೋಗಟ್ ಜೊತೆಗೂ ಕೆಲ ಸಮಯ ಮಾತನಾಡಿದ್ದರು. ನಿಮ್ಮ ಬಯೋಪಿಕ್ ಶೀಘ್ರದಲ್ಲೇ ‌ನಿರೀಕ್ಷಿಸಬಹುದೇ ಎಂದು ವಿನೇಶ್‌ ಪೋಗಟ್ ಬಳಿ ಪಿಎಂ‌ ಕೇಳಿದ್ದು ವಿಶೇಷವಾಗಿತ್ತು. ಅಂತೆಯೆ ಪೋಗಟ್ ಕುಟುಂಬದ ಸದಸ್ಯರೊಂದಿಗೂ ಮಾತನಾಡಿದ್ದರು. ‘ನಿಮ್ಮ ಹೆಣ್ಣುಮಕ್ಕಳಿಗೆ ಯಾವ ಬೀಸುಕಲ್ಲಿನಲ್ಲಿ ಸಿದ್ಧವಾದ ಹಿಟ್ಟಿನ ಆಹಾರ ನೀಡುತ್ತೀರಿ‘ ಎಂದು ಕೇಳಿದ್ದರು. ಕುಸ್ತಿಕ್ರೀಡೆಗೆ ತಮ್ಮ ಕುಟುಂಬದ ಹುಡುಗಿಯರ ಕೊಡುಗೆ ಅಪಾರ ಎಂದು ಶ್ಲಾಘಿಸಿದ್ದರು.

ಇದನ್ನೂ ಓದಿ: Tokyo Olympics: ನನ್ನ ಬೆಂಬಲ ಈ ಬಾರಿ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲ್ಲಿರುವ ಭಾರತದ ಹಾಕಿ ತಂಡಕ್ಕೆ: ಪಾಕ್ ಮಾಜಿ ಆಟಗಾರ

ನಿರೀಕ್ಷೆಗಳನ್ನು ಪಕ್ಕಕ್ಕಿಟ್ಟು ಪ್ರಯತ್ನಿಸಿದರೆ ಗೆಲುವು ನಿಮ್ಮದೇ: ಒಲಿಂಪಿಕ್ಸ್ ಕ್ರೀಡಾಪಟುಗಳನ್ನು ಹುರಿದುಂಬಿಸಿದ ಮೋದಿ

Published On - 5:59 pm, Wed, 14 July 21

‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರ ದಂಡು
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರ ದಂಡು
ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!