AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರೀಕ್ಷೆಗಳನ್ನು ಪಕ್ಕಕ್ಕಿಟ್ಟು ಪ್ರಯತ್ನಿಸಿದರೆ ಗೆಲುವು ನಿಮ್ಮದೇ: ಒಲಿಂಪಿಕ್ಸ್ ಕ್ರೀಡಾಪಟುಗಳನ್ನು ಹುರಿದುಂಬಿಸಿದ ಮೋದಿ

ಜುಲೈ 17 ರಂದು ಭಾರತದ ಮೊದಲ ಬ್ಯಾಚ್ ಆಟಗಾರರು ಟೋಕಿಯೋಗೆ ತೆರಳಲಿದ್ದಾರೆ. ಜುಲೈ 23 ರಿಂದ ಕ್ರೀಡಾಕೂಟದ ಮಹಾ ಕುಂಭ ಪ್ರಾರಂಭವಾಗಲಿದೆ. ಭಾರತ ಒಟ್ಟು 18 ವಿಭಾಗದಲ್ಲಿ ಸ್ಪರ್ಧಿಸಲಿದೆ. ಇದಕ್ಕಾಗಿ 126 ಕ್ರೀಡಾಪಟುಗಳು ಜಪಾನ್ ರಾಜಧಾನಿ ಟೋಕಿಯೋ ಗೆ ತೆರಳಿದ್ದಾರೆ.

ನಿರೀಕ್ಷೆಗಳನ್ನು ಪಕ್ಕಕ್ಕಿಟ್ಟು ಪ್ರಯತ್ನಿಸಿದರೆ ಗೆಲುವು ನಿಮ್ಮದೇ: ಒಲಿಂಪಿಕ್ಸ್ ಕ್ರೀಡಾಪಟುಗಳನ್ನು ಹುರಿದುಂಬಿಸಿದ ಮೋದಿ
ನರೇಂದ್ರ ಮೋದಿ
TV9 Web
| Edited By: |

Updated on:Jul 13, 2021 | 5:47 PM

Share

ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆಯಲಿರುವ ಬಹುನಿರೀಕ್ಷಿತ ಒಲಿಂಪಿಕ್ಸ್ (Olympics) ಕ್ರೀಡಾಕೂಟಕ್ಕೆ ಭಾರತೀಯ ಆಟಗಾರರ ಸಜ್ಜಾಗಿದ್ದಾರೆ. ಇವರಿಗೆ ಸ್ಪೂರ್ತಿ ತುಂಬಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿಡಿಯೋ ಕಾನ್ಫರೆನ್ಸ್ ಮೂಲಕ ಮಹತ್ವದ ಸಂವಾದ ನಡೆಸುತ್ತಿದ್ದಾರೆ. ಆರಂಭದಲ್ಲಿ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮೋದಿ ಅವರು ಕ್ರೀಡಾಪಟುಗಳಿಗೆ ಹುರಿದುಂಬಿಸುತ್ತಿರುವ ಕಾರ್ಯವನ್ನು ಶ್ಲಾಘಿಸಿದರು. ಕ್ರೀಡಾಪಟುಗಳಿಗೆ ವಿಶೇಷವಾಗಿ ಸಂದೇಶ ನೀಡಿರುವ ಠಾಕೂರ್ ನೀವು ಟೋಕಿಯೋಗೆ ಹೋದ ನಂತರ ದೇಶಕ್ಕೋಸ್ಕರ ಪದಕವನ್ನು ತಂದುಕೊಡುವ ಬಗ್ಗೆ ಮಾತ್ರ ಯೋಚನೆ ಮಾಡಿ ಎಂದು ಹೇಳಿದರು.

“ನನಗೆ ಉತ್ತಮವಾದ ಮಾರ್ಗದರ್ಶಕರು ಸಿಕ್ಕಿದ್ದಾರೆ. ಅವರು ನನಗೆ ತುಂಬಾನೆ ಸಹಾಯ ಮಾಡಿದರು. ನನ್ನ ಗುರಿ ದೇಶಕ್ಕೆ ಪದಕ ತಂದುಕೊಡಬೇಕೆಂದು. ಅದರಲ್ಲಿ ಯಶಸ್ಸು ಸಾಧಿಸುತ್ತೇನೆ” ಎಂದು ಕ್ರೀಡಾಪಟು ದೀಪಿಕಾ ಕುಮಾರಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಧನ್ಯವಾದ, ನಿಮ್ಮ ಗುರಿಯನ್ನ ನೀವು ಯಾವತ್ತು ಕೈಬಿಡಬೇಡಿ. ಟೋಕಿಯೋ ಒಲಿಂಪಿಕ್​ನಲ್ಲಿ ಗೆದ್ದು ಬನ್ನಿ ಎಂದು ಹಾರೈಸಿದರು.

ಇನ್ನೂ ನೀರಜ್ ಚೋಪ್ರಾ ಜೊತೆ ಮಾತನಾಡಿದ ಮೋದಿ, ನೀವು ನಿರೀಕ್ಷೆಗಳನ್ನು ಪಕ್ಕಕ್ಕಿಟ್ಟು ಕಣಕ್ಕಿಳಿಯಿರಿ, ಶೇ. 100 ರಷ್ಟು ಪ್ರಯತ್ನ ಪಟ್ಟರೆ ಗೆಲುವು ಖಂಡಿಯಾ ಸಿಗುತ್ತದೆ. ಒಳ್ಳೆಯದಾಗಲಿ ಎಂದು ಹಾರೈಸಿದರು. ಖ್ಯಾತ ಬಾಕ್ಸಿಂಗ್ ತಾರೆ ಮೇರಿ ಕೊಮ್ ಜೊತೆ ಮಾತನಾಡಿದ ಮೋದಿ ನೀವು ಚಾಂಪಿಯನ್, ದೇಶಕ್ಕೋಸ್ಕರ ಪದಕವನ್ನು ಗೆದ್ದು ತನ್ನಿ ಎಂದು ಶುಭಕೋರಿದರು.

ಪಿವಿ ಸಿಂದು ಜೊತೆ ಅಭ್ಯಾಸ ಹೇಗೆ ನಡೆಯುತ್ತಿದೆ ಎಂದು ಮೋದಿ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದೆ ಸಿಂದು, ಮೊದಲಿಗೆ ಅಭ್ಯಾಸಕ್ಕೆ ಅನುವು ಮಾಡಿಕೊಟ್ಟ ಸರ್ಕಾರಕ್ಕೆ ಧನ್ಯವಾದ ತಿಳಿಸಿದರು. ಫಿಟ್ ಆಗಿರಬೇಕಿರುವುದರಿಂದ ಐಸ್ ಕ್ರೀಂ ತಿನ್ನುವುದನ್ನು ನಿಲ್ಲಿಸಿರುವ ಎಂದರು. ಇದಕ್ಕೆ ತಮಾಷೆಯಾಗಿ ಮಾತನಾಡಿದ ಪ್ರಧಾನಿ ಈ ಒಲಿಂಪಿಕ್​ನಲ್ಲಿ ನೀವು ಅದ್ಭುತವಾಗಿ ಆಟವಾಡುತ್ತೀರಿ ಎಂಬ ನಂಬಿಕೆ ನಮಗಿದೆ. ಬಳಿಕ ನಾವು ಐಸ್​ಕ್ರೀಂ ತಿನ್ನೋಣ ಎಂದರು.

ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಭಾರತೀಯ ಆಟಗಾರರ ಜೊತೆ ಮೋದಿ ನಡೆಸುತ್ತಿರುವ ಸಂವಾದದ ಲೈವ್ ಇಲ್ಲಿದೆ:

ಈ ಕಾರ್ಯಕ್ರಮದಲ್ಲಿ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್, ಕೇಂದ್ರ ರಾಜ್ಯ ಯುವ ವ್ಯವಹಾರ ಮತ್ತು ಕ್ರೀಡೆ  ನಿಸಿತ್ ಪ್ರಮಾಣಿಕ್ ಮತ್ತು ಕಾನೂನು ಸಚಿವ  ಕಿರೆನ್ ರಿಜಿಜು ಪಾಲ್ಗೊಂಡಿದ್ದಾರೆ.

ಜುಲೈ 17 ರಂದು ಭಾರತದ ಮೊದಲ ಬ್ಯಾಚ್ ಆಟಗಾರರು ಟೋಕಿಯೋಗೆ ತೆರಳಲಿದ್ದಾರೆ. ಜುಲೈ 23 ರಿಂದ ಕ್ರೀಡಾಕೂಟದ ಮಹಾ ಕುಂಭ ಪ್ರಾರಂಭವಾಗಲಿದೆ. ಆಗಸ್ಟ್ 8ಕ್ಕೆ ತೆರೆಬೀಳಲಿದೆ. ಭಾರತ ಒಟ್ಟು 18 ವಿಭಾಗದಲ್ಲಿ ಸ್ಪರ್ಧಿಸಲಿದೆ. ಇದಕ್ಕಾಗಿ 126 ಕ್ರೀಡಾಪಟುಗಳು ಜಪಾನ್ ರಾಜಧಾನಿ ಟೋಕಿಯೋ ಗೆ ತೆರಳಿದ್ದಾರೆ.

ಭಾರತ ಇದೇ ಮೊದಲ ಬಾರಿಗೆ ಫೆನ್ಸರ್ ಕ್ರೀಡೆಯಲ್ಲಿ ಸ್ಪರ್ಧಿಸುತ್ತಿದೆ. ಭಾರತದ ಭವಾನಿ ದೇವಿ ಫೆನ್ಸರ್ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಸೈಲರ್ ವಿಭಾಗದಲ್ಲಿ ನೇತ್ರಾ ಕುಮಾರ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಭಾರತದ ಮೊದಲ ಮಹಿಳೆ ಆಗಿದ್ದಾರೆ. ಇನ್ನು ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಭಾರತದ ಮೊದಲ ಈಜುಗಾರರಾದ ಸಜನ್ ಪ್ರಕಾಶ್ ಮತ್ತು ಶ್ರೀಹರಿ ನಟರಾಜ್ ಕೂಡ ಈ ಬಾರಿಯ ಒಲಿಂಪಿಕ್ಸ್ ಕೂಟದ ವಿಶೇಷತೆ ಹಾಗೂ ಹೆಗ್ಗಳಿಕೆಯಾಗಿದೆ.

Sourav Ganguly Biopic: ಬಯೋಪಿಕ್​ಗೆ ​ಅನುಮತಿ ನೀಡಿದ ಸೌರವ್​ ಗಂಗೂಲಿ; ದಾದಾ ಪಾತ್ರಕ್ಕೆ ರಣಬೀರ್​ ಕಪೂರ್​?

IPL 2022 Auction: ಬಹುದೊಡ್ಡ ಹರಾಜಿಗೂ ಮುನ್ನ RCB ಈ 4 ಆಟಗಾರರನ್ನು ತನ್ನಲ್ಲೇ ಉಳಿಸಿಕೊಳ್ಳಬೇಕಂತೆ!

(PM Narendra Modi interacting with Indian athletes going to Tokyo Olympics live)

Published On - 5:33 pm, Tue, 13 July 21

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ