Sourav Ganguly Biopic: ಬಯೋಪಿಕ್​ಗೆ ​ಅನುಮತಿ ನೀಡಿದ ಸೌರವ್​ ಗಂಗೂಲಿ; ದಾದಾ ಪಾತ್ರಕ್ಕೆ ರಣಬೀರ್​ ಕಪೂರ್​?

Sourav Ganguly: ಬಾಲಿವುಡ್​ನ ದೊಡ್ಡ ಪ್ರೊಡಕ್ಷನ್​ ಕಂಪನಿಯೊಂದು ಸೌರವ್​ ಗಂಗೂಲಿಯವರ ಬಯೋಪಿಕ್​ ಮಾಡಲು ಮುಂದೆ ಬಂದಿದೆ. 200ರಿಂದ 250 ಕೋಟಿ ರೂ. ಬಜೆಟ್​ನಲ್ಲಿ ಈ ಚಿತ್ರ ಮೂಡಿಬರಲಿದೆ.

Sourav Ganguly Biopic: ಬಯೋಪಿಕ್​ಗೆ ​ಅನುಮತಿ ನೀಡಿದ ಸೌರವ್​ ಗಂಗೂಲಿ; ದಾದಾ ಪಾತ್ರಕ್ಕೆ ರಣಬೀರ್​ ಕಪೂರ್​?
ಸೌರವ್​ ಗಂಗೂಲಿ, ರಣಬೀರ್​ ಕಪೂರ್​
Follow us
TV9 Web
| Updated By: ಮದನ್​ ಕುಮಾರ್​

Updated on: Jul 13, 2021 | 4:43 PM

ಸಿನಿಮಾ ಮತ್ತು ಕ್ರೀಡೆಗೆ ಹತ್ತಿರದ ನಂಟು. ಕ್ರೀಡಾ ಜಗತ್ತಿನಲ್ಲಿ ಸಾಧನೆ ಮಾಡಿದ ಅನೇಕರ ಜೀವನದ ಕತೆಗಳು ಸಿನಿಮಾ ಆಗಿವೆ. ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಸೌರವ್​ ಗಂಗೂಲಿ ಅವರ ಬಯೋಪಿಕ್ ಮಾಡಲು ಈಗ ಸಿದ್ಧತೆ ನಡೆಯುತ್ತಿದೆ. ಬಹಳ ದಿನಗಳಿಂದ ಈ ಬಗ್ಗೆ ಸುದ್ದಿ ಹರಿದಾಡುತ್ತಿತ್ತು. ಆದೀಗ ಅಧಿಕೃತ ಆಗಿದೆ. ಸ್ವತಃ ಸೌರವ್​ ಗಂಗೂಲಿ ಅವರೇ ತಮ್ಮ ಬಯೋಪಿಕ್​ಗೆ ಅನುಮತಿ ನೀಡಿರುವುದನ್ನು ಖಚಿತಪಡಿಸಿದ್ದಾರೆ. ಅವರ ಪಾತ್ರದಲ್ಲಿ ರಣಬೀರ್​ ಕಪೂರ್​ ನಟಿಸುವ ಸಾಧ್ಯತೆ ದಟ್ಟವಾಗಿದೆ.

‘ಹೌದು, ನನ್ನ ಬಯೋಪಿಕ್​ ಮಾಡಲು ನಾನು ಅನುಮತಿ ನೀಡಿದ್ದೇನೆ. ಈ ಸಿನಿಮಾ ಹಿಂದಿಯಲ್ಲಿ ಮೂಡಿಬರಲಿದೆ. ನಿರ್ದೇಶಕರು ಯಾರು ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಎಲ್ಲವೂ ಅಂತಿಮವಾಗಲು ಇನ್ನೂ ಕೆಲವು ದಿನಗಳ ಸಮಯ ಬೇಕಾಗಲಿದೆ’ ಎಂದು ಗಂಗೂಲಿ ಹೇಳಿದ್ದಾರೆ. ಈ ಬಯೋಪಿಕ್​ನಲ್ಲಿ ಗಂಗೂಲಿ ಅವರ ಆರಂಭದ ಜೀವನದಿಂದ ಹಿಡಿದು ಅವರು ಬಿಸಿಸಿಐ ಅಧ್ಯಕ್ಷರಾಗುವವರೆಗಿನ ಅನೇಕ ವಿವರಗಳು ಇರಲಿವೆ.

ಮೂಲಗಳ ಪ್ರಕಾರ ದೊಡ್ಡ ಪ್ರೊಡಕ್ಷನ್​ ಕಂಪನಿಯೊಂದು ಸೌರವ್​ ಗಂಗೂಲಿಯವರ ಬಯೋಪಿಕ್​ ಮಾಡಲು ಮುಂದೆ ಬಂದಿದೆ. 200ರಿಂದ 250 ಕೋಟಿ ರೂ. ಬಜೆಟ್​ನಲ್ಲಿ ಈ ಚಿತ್ರ ಮೂಡಿಬರಲಿದೆ. ಸ್ಕ್ರಿಪ್ಟ್​ ಕೆಲಸಗಳು ಜಾರಿಯಲ್ಲಿದ್ದು, ಗಂಗೂಲಿ ಜೊತೆ ಅನೇಕ ಮೀಟಿಂಗ್​ಗಳು ನಡೆದಿವೆ.

ಹಾಗಾದರೆ ಗಂಗೂಲಿ ಪಾತ್ರದಲ್ಲಿ ನಟಿಸುವ ಕಲಾವಿದರ ಯಾರು? ಸದ್ಯಕ್ಕೆ ಇದು ಹಾಟ್​ ಟಾಪಿಕ್ ಆಗಿದೆ. ತಮ್ಮ ಪಾತ್ರದಲ್ಲಿ ಬಾಲಿವುಡ್​ ನಟ ರಣಬೀರ್​ ಕಪೂರ್​ ಅವರು ನಟಿಸಿದರೆ ಸೂಕ್ತ ಎಂದು ಸ್ವತಃ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಇಬ್ಬರು ನಟರ ಹೆಸರುಗಳು ಹರಿದಾಡುತ್ತಿವೆ. ಅಂತಿಮವಾಗಿ ಯಾರು ಆಯ್ಕೆ ಆಗುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.

ಈ ಹಿಂದೆ ಎಂಎಸ್​ ಧೋನಿ ಜೀವನಾಧಾರಿತ ‘ಎಂಎಸ್​ ಧೋನಿ: ದಿ ಅನ್​ಟೋಲ್ಡ್​ ಸ್ಟೋರಿ’ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಮೊಹಮ್ಮದ್​ ಅಜರುದ್ದೀನ್ ಜೀವನಾಧಾರಿತ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ಗಳಿಸಿರಲಿಲ್ಲ. ಸಚಿನ್​ ಜೀವನದ ಕುರಿತು ‘ಸಚಿನ್​: ಎ ಬಿಲಿಯನ್​ ಡ್ರೀಮ್ಸ್​’ ಡಾಕ್ಯುಡ್ರಾಮಾ ಮೂಡಿಬಂದಿತ್ತು. 1983ರಲ್ಲಿ ಭಾರತ ತಂಡ ಕ್ರಿಕೆಟ್​ ವಿಶ್ವಕಪ್​ ಗೆದ್ದ ಘಟನೆಯನ್ನು ಆಧರಿಸಿ ‘83’ ಚಿತ್ರ ತಯಾರಾಗಿದೆ. ಲಾಕ್​ಡೌನ್​ ಕಾರಣದಿಂದ ಅದರ ಬಿಡುಗಡೆ ವಿಳಂಬ ಆಗುತ್ತಿದೆ.

ಇದನ್ನೂ ಓದಿ:

ಗಂಡು ಎನ್ನುವ ಹಣೆಪಟ್ಟಿ, ಅತ್ಯಾಚಾರ ಆರೋಪ: ಅಥ್ಲೀಟ್​ ಪಿಂಕಿ ಕುರಿತು ಬಯೋಪಿಕ್​

32 ವರ್ಷದ ಕೆರಿಯರ್​ನಲ್ಲಿ ಮೊಟ್ಟಮೊದಲ ಬಾರಿಗೆ ಬಯೋಪಿಕ್​ಗೆ ಸಹಿ ಹಾಕಿದ ಸಲ್ಮಾನ್​ ಖಾನ್​

ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ