ಗಂಡು ಎನ್ನುವ ಹಣೆಪಟ್ಟಿ, ಅತ್ಯಾಚಾರ ಆರೋಪ: ಅಥ್ಲೀಟ್​ ಪಿಂಕಿ ಕುರಿತು ಬಯೋಪಿಕ್​

ಪಿಂಕಿ ಪಶ್ಚಿಮ ಬಂಗಾಳದ ಪುರುಲಿಯಾ ಅವರು. ಅವರ ಜೀವನ ಆಧರಿಸಿ ಸಿದ್ಧಗೊಳ್ಳುತ್ತಿರುವ ಸಿನಿಮಾ ಅಥ್ಲೀಟ್​ಗಳಿಗೆ ಅರ್ಪಿಸಲಾಗುತ್ತಿದೆ. ಪ್ರಿಯಾಂಕಾ ಘಾಟಕ್​ ಅವರು ಈ ಚಿತ್ರಕ್ಕೆ ಸ್ಕ್ರಿಪ್ಟ್​ ಬರೆಯುತ್ತಿದ್ದಾರೆ.

ಗಂಡು ಎನ್ನುವ ಹಣೆಪಟ್ಟಿ, ಅತ್ಯಾಚಾರ ಆರೋಪ: ಅಥ್ಲೀಟ್​ ಪಿಂಕಿ ಕುರಿತು ಬಯೋಪಿಕ್​
ಪಿಂಕಿ ಪ್ರಾಮಾಣಿಕ್​
TV9kannada Web Team

| Edited By: Rajesh Duggumane

Jul 06, 2021 | 9:57 PM

ಭಾರತೀಯ ಅಥ್ಲೀಟ್​ ಪಿಂಕಿ ಪ್ರಾಮಾಣಿಕ್​ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದು ಮಾತ್ರವಲ್ಲ ವಿವಾದಕ್ಕೂ ಒಳಗಾಗಿದ್ದರು. ಪಿಂಕಿ ಹೆಣ್ಣಲ್ಲ ಗಂಡು, ಅವರು ಅತ್ಯಾಚಾರ ಮಾಡಿದ್ದಾರೆ ಎನ್ನುವ ಆರೋಪ ಅವರ ವಿರುದ್ಧ ಕೇಳಿ ಬಂದಿತ್ತು. ಈಗ ಇವರ ಜೀವನ ಆಧರಿಸಿ, ನಿರ್ಮಾಪಕ ಅಶೋಕ್​ ಪಂಡಿತ್​ ಬಯೋಪಿಕ್​ ಮಾಡುತ್ತಿದ್ದಾರೆ.

ಪಿಂಕಿ ಪಶ್ಚಿಮ ಬಂಗಾಳದ ಪುರುಲಿಯಾ ಅವರು. ಅವರ ಜೀವನ ಆಧರಿಸಿ ಸಿದ್ಧಗೊಳ್ಳುತ್ತಿರುವ ಸಿನಿಮಾ ಅಥ್ಲೀಟ್​ಗಳಿಗೆ ಅರ್ಪಿಸಲಾಗುತ್ತಿದೆ. ಪ್ರಿಯಾಂಕಾ ಘಾಟಕ್​ ಅವರು ಈ ಚಿತ್ರಕ್ಕೆ ಸ್ಕ್ರಿಪ್ಟ್​ ಬರೆಯುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅಶೋಕ್​, ‘ಪ್ರಿಯಾಂಕಾ ಅವರು ಪಿಂಕಿ ಬಗ್ಗೆ ಓದಿ ಸಿನಿಮಾ ಮಾಡುವ ಆಲೋಚನೆಯೊಂದಿಗೆ ಬಂದರು. ನಾವು 6-7 ತಿಂಗಳು ಈ ಬಗ್ಗೆ ಅಧ್ಯಯನ ಮಾಡಿದ್ದೇವೆ. ನಾವು ಈ ಬಗ್ಗೆ ಸಾಕಷ್ಟು ರಿಸರ್ಚ್​ ನಡೆಸಿದ್ದೇವೆ. ಈ ಕಥೆಯನ್ನು ಜಗತ್ತಿಗೆ ಹೇಳಬೇಕು ಎಂದು ನಮಗನ್ನಿಸುತ್ತಿದೆ. ನಾವು ಪಿಂಕಿ ಅವರ ಜತೆ ಸಂಪರ್ಕದಲ್ಲಿದ್ದೇವೆ. ಕೋಲ್ಕತ್ತಾದಲ್ಲಿ ಅವರನ್ನು ಭೇಟಿ ಮಾಡಿ ಸಿನಿಮಾ ಮಾಡೋಕೆ ಒಪ್ಪಿಗೆ ಪಡೆದಿದ್ದೇವೆ. ಚಿತ್ರದಲ್ಲಿ ನಟಿಸಲಿರುವ ಕಲಾವಿದರು ಹಾಗೂ ತಂತ್ರಜ್ಞರ ಬಗ್ಗೆ ಶೀಘ್ರವೇ ಘೋಷಣೆ ಮಾಡುತ್ತೇವೆ’ ಎಂದಿದ್ದಾರೆ.

‘ದೇಶದಲ್ಲಿರುವ ಎಲ್ಲಾ ಅಥ್ಲೀಟ್​ಗಳಿಗೆ ಈ ಸಿನಿಮಾ ಸಮರ್ಪಣೆ. ಅನೇಕ ಅಥ್ಲೀಟ್​ಗಳು ಸಣ್ಣ ಹಳ್ಳಿಗಳಿಂದ ಬಂದು ಸಾಧನೆ ಮಾಡಿದ್ದಾರೆ. ಈ ಸಿನಿಮಾ ನಿಜಕ್ಕೂ ಸ್ಫೂರ್ತಿದಾಯಕವಾಗಿರಲಿದೆ’ ಎಂದಿದ್ದಾರೆ ಅಶೋಕ್​.

ಪಿಂಕಿ ಹೆಣ್ಣಲ್ಲ ಗಂಡು. ಅವರು ಅತ್ಯಾಚಾರ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ವಿಚಾರದ ಬಗ್ಗೆ ಸಿನಿಮಾದಲ್ಲಿ ಮಾಹಿತಿ ಸೇರಿಸಲಾಗುತ್ತದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಅಶೋಕ್, ‘ನಾನು ಮಾಡುವ ಸಿನಿಮಾ ಯಾವಾಗಲೂ ವಿಷಯಾಧಾರಿತವಾಗಿರುತ್ತದೆ. ಪುರುಲಿಯಾ ಎಂಬ ಸಣ್ಣ ಪಟ್ಟಣದಿಂದ ಬಂದು ಪಿಂಕಿ ಪ್ರಶಸ್ತಿ ಗೆಲ್ಲುವ ಮಟ್ಟಕ್ಕೆ ಹೇಗೆ ತಲುಪುತ್ತಾರೆ ಮತ್ತು ಆ ಕನಸು ಹೇಗೆ ಚೂರುಚೂರಾಗುತ್ತದೆ ಎನ್ನುವುದನ್ನು ಹೇಳುತ್ತಿದ್ದೇವೆ’ ಎಂದಿದ್ದಾರೆ.

ಇದನ್ನೂ ಓದಿ: ಜುಲಾನ್ ಗೋಸ್ವಾಮಿ ಬಯೋಪಿಕ್​ನಲ್ಲಿ ಅನುಷ್ಕಾ ಶರ್ಮಾ; ಸಿನಿಮಾದ ಚಿತ್ರೀಕರಣ ಯಾವಾಗಿನಿಂದ ಆರಂಭ ಗೊತ್ತಾ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada