Tokyo 2020: ಒಲಿಂಪಿಕ್ಸ್ನಲ್ಲಿ ಭಾಗವಹಿಸಲಿರುವ ಭಾರತೀಯ ಕ್ರೀಡಾಪಟುಗಳ ಜೊತೆ ಇಂದು ಮೋದಿ ಸಂವಾದ
ಜುಲೈ 17 ರಂದು ಭಾರತದ ಮೊದಲ ಬ್ಯಾಚ್ ಆಟಗಾರರು ಟೋಕಿಯೋಗೆ ತೆರಳಲಿದ್ದಾರೆ. ಜುಲೈ 23 ರಿಂದ ಕ್ರೀಡಾಕೂಟದ ಮಹಾ ಕುಂಭ ಪ್ರಾರಂಭವಾಗಲಿದೆ.
ಪ್ರತಿಷ್ಠಿತ ಟೋಕಿಯೋ ಒಲಿಂಪಿಕ್ಸ್ (Tokyo Olympics) ಕ್ರೀಡಾಕೂಟಕ್ಕೆ ಭಾರತ ಸಜ್ಜಾಗಿದೆ. ಕೊರೋನಾ ಕಾಲದ ನಡುವೆಯೂ ಭಾರತೀಯ ಕ್ರೀಡಾಪಟುಗಳು ಒಲಿಂಪಿಕ್ಸ್ ಕೂಟಕ್ಕೆ ತಯಾರಿ ನಡೆಸಿದ್ದಾರೆ. ಈ ಕ್ರೀಡಾಪಟುಗಳಿಗೆ ಸ್ಪೂರ್ತಿ ತುಂಬಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಜುಲೈ 13 ಇಂದು ಸಂಜೆ 5 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಹತ್ವದ ಸಂವಾದ ನಡೆಸಲಿದ್ದಾರೆ.
“ಇಂದು ಸಂಜೆ 5 ಗಂಟೆಗೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಆಡಲಿರುವ ಭಾರತದ ಕ್ರೀಡಾಪಟುಗಳ ಜೊತೆ ಮಾತನಾಡಲಿದ್ದೇನೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ಜೀವನದ ಕಥೆ ಇರುತ್ತದೆ. ಅವರು ಹಂಚಿಕೊಳ್ಳುವ ಲೈಫ್ ಸ್ಟೋರಿ ರೋಚಕವಾಗಿರುವುದು ಖಂಡಿತಾ” ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
At 5 PM this evening, I look forward to interacting with our athletes who would be representing India at @Tokyo2020. Each of them has an inspiring life journey and I am sure what they would share would interest you all. Do watch the interaction. #Cheer4India
— Narendra Modi (@narendramodi) July 13, 2021
ಈ ಸಂವಹನ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳನ್ನು ಪ್ರೇರಿಪಿಸುವ ಪ್ರಯತ್ನವಾಗಿದೆ ಎಂದು ಮೋದಿ ಹೇಳಿದ್ದಾರೆ. ಇತ್ತೀಚೆಗೆ ಮನ್‌ಕಿ ಬಾತ್ ಕಾರ್ಯಕ್ರಮದಲ್ಲೂ ಕ್ರೀಡಾಪಟುಗಳ ಸ್ಪೂರ್ತಿದಾಯದ ಪಯಣದ ಬಗ್ಗೆ ಚರ್ಚಿಸಿದ್ದರು. ಟೋಕಿಯೋ ಒಲಿಂಪಿಕ್ಸ್ ಟೂರ್ನಿಗೆ ಭಾರತದ ಸಿದ್ಧತೆ ಕುರಿತು ಮೋದಿ ಪರಿಶೀಲನೆ ನಡೆಸಿದ್ದಾರೆ.
ಜುಲೈ 17 ರಂದು ಭಾರತದ ಮೊದಲ ಬ್ಯಾಚ್ ಆಟಗಾರರು ಟೋಕಿಯೋಗೆ ತೆರಳಲಿದ್ದಾರೆ. ಜುಲೈ 23 ರಿಂದ ಕ್ರೀಡಾಕೂಟದ ಮಹಾ ಕುಂಭ ಪ್ರಾರಂಭವಾಗಲಿದೆ. ಭಾರತ ಒಟ್ಟು 18 ವಿಭಾಗದಲ್ಲಿ ಸ್ಪರ್ಧಿಸಲಿದೆ. ಇದಕ್ಕಾಗಿ 126 ಕ್ರೀಡಾಪಟುಗಳು ಜಪಾನ್ ರಾಜಧಾನಿ ಟೋಕಿಯೋ ಗೆ ತೆರಳಿದ್ದಾರೆ. ಈ ಹಿಂದಿನ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಹೋಲಿಸಿದರೆ ಈ ಬಾರಿ ಗರಿಷ್ಠ ಕ್ರೀಡಾಪಟುಗಳನ್ನು ಭಾರತ ಟೋಕಿಯೋ ಒಲಿಂಪಿಕ್ಸ್‌ಗೆ ಕಳುಹಿಸುತ್ತಿದೆ ಎಂಬುದು ಖುಷಿಯ ವಿಚಾರ.
ಇನ್ನೂ ಈ ಬಾರಿ ಭಾರತ ಇದೇ ಮೊದಲ ಬಾರಿಗೆ ಫೆನ್ಸರ್ ಕ್ರೀಡೆಯಲ್ಲಿ ಸ್ಪರ್ಧಿಸುತ್ತಿದೆ. ಭಾರತದ ಭವಾನಿ ದೇವಿ ಫೆನ್ಸರ್ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಸೈಲರ್ ವಿಭಾಗದಲ್ಲಿ ನೇತ್ರಾ ಕುಮಾರ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಭಾರತದ ಮೊದಲ ಮಹಿಳೆ ಆಗಿದ್ದಾರೆ.
IPL 2022 Auction: ಬಹುದೊಡ್ಡ ಹರಾಜಿಗೂ ಮುನ್ನ RCB ಈ 4 ಆಟಗಾರರನ್ನು ತನ್ನಲ್ಲೇ ಉಳಿಸಿಕೊಳ್ಳಬೇಕಂತೆ!
ನನಗೆ ಬೌಲಿಂಗ್ ಮಾಡಲು ಕಷ್ಟ ಎನಿಸಿದ್ದು ಈ ಸ್ಟಾರ್ ಬೌಲರ್ಗೆ ಎಂದ ಅಖ್ತರ್
(Tokyo 2020 PM Narendra Modi to interact with Olympics-bound Indian contingent on July 13)