ನನಗೆ ಬೌಲಿಂಗ್ ಮಾಡಲು ಕಷ್ಟ ಎನಿಸಿದ್ದು ಈ ಸ್ಟಾರ್ ಬೌಲರ್​ಗೆ ಎಂದ ಅಖ್ತರ್

ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯೊಬ್ಬರು ನೀವು ಬೌಲಿಂಗ್ ಮಾಡಲು ಅತ್ಯಂತ ಕಷ್ಟ ಪಟ್ಟ ಬ್ಯಾಟ್ಸ್​ಮನ್ ಯಾರು ಎಂದು ಕೇಳಿದ್ದರು. ಹೆಚ್ಚಿನವರು ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ ಅಥವಾ ರಿಕಿ ಪಾಂಟಿಂಗ್ ಹೆಸರನ್ನು ಗ್ರಹಿಸಿದ್ದರು. ಆದರೆ,

ನನಗೆ ಬೌಲಿಂಗ್ ಮಾಡಲು ಕಷ್ಟ ಎನಿಸಿದ್ದು ಈ ಸ್ಟಾರ್ ಬೌಲರ್​ಗೆ ಎಂದ ಅಖ್ತರ್
Shoaib Akhtar
Follow us
TV9 Web
| Updated By: Vinay Bhat

Updated on: Jul 13, 2021 | 11:58 AM

ಪಾಕಿಸ್ತಾನ (Pakistan) ಕ್ರಿಕೆಟ್‌ ಕಂಡ ಶ್ರೇಷ್ಠ ವೇಗಿಗಳಲ್ಲಿ ಶೋಯೆಬ್‌ ಅಖ್ತರ್ (Shoaib Akhtar) ಪ್ರಮುಖರು. 90ರ ದಶಕದಲ್ಲಿ ಬ್ಯಾಟ್ಸ್​ಮನ್​ಗಳು ಇವರ ಬೌಲಿಂಗ್ ಕಂಡರೆ ಒಂದು ಕ್ಷಣ ಯೋಚಿಸುತ್ತಿದ್ದರು. ತಮ್ಮ ವೇಗದ ಬೌಲಿಂಗ್‌ನಿಂದ ವಿಶ್ವದ ಯಾವುದೇ ಬ್ಯಾಟ್ಸ್‌ಮನ್‌ಗಳನ್ನು ಕೆಡವಬಲ್ಲ ಸಾಮರ್ಥ್ಯ ಅವರಲ್ಲಿತ್ತು. ಲೈನ್‌ ಅಂಡ್‌ ಲೆನ್ತ್‌ ಮೂಲಕ ಅಖ್ತರ್ ಬೌನ್ಸರ್‌ ಹಾಕಿದರೆ ಬ್ಯಾಟ್ಸ್​ಮನ್ ಭಯ ಪಡುತ್ತಿದ್ದಿದ್ದು ಸುಳ್ಳಲ್ಲ. ಇಂತಹ ಅಪಾಯಕಾರಿ ಬೌಲರ್​ಗೂ ಬೌಲಿಂಗ್ ಮಾಡಲು ಕಷ್ಟ ಎನಿಸಿದ್ದು ಓರ್ವ ಬೌಲರ್​ಗಂತೆ.

ಹೌದು, ಈ ಬಗ್ಗೆ ವಿಶೇಷ ಮಾಹಿತಿ ಹಂಚಿಕೊಂಡಿರುವ ಶೋಯೆಬ್, ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ನನಗೆ ಬೌಲಿಂಗ್ ಮಾಡಲು ಕಷ್ಟ ಎನಿಸಿದ್ದು ಶ್ರೀಲಂಕಾ ತಂಡ ಲೆಜೆಂಡ್ ಸ್ಪಿನ್ನರ್ ಮುತ್ತಯ್ಯ ಮುರಳೀಧರ್ ಅವರಿಗೆ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯೊಬ್ಬರು ನೀವು ಬೌಲಿಂಗ್ ಮಾಡಲು ಅತ್ಯಂತ ಕಷ್ಟ ಪಟ್ಟ ಬ್ಯಾಟ್ಸ್​ಮನ್ ಯಾರು ಎಂದು ಕೇಳಿದ್ದರು. ಹೆಚ್ಚಿನವರು ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ ಅಥವಾ ರಿಕಿ ಪಾಂಟಿಂಗ್ ಹೆಸರನ್ನು ಗ್ರಹಿಸಿದ್ದರು. ಆದರೆ, ಈ ಪ್ರಶ್ನೆಗೆ ಅಖ್ತರ್ ನೀಡಿದ ಉತ್ತರ ಅಭಿಮಾನಿಗಳಲ್ಲಿ ಅಚ್ಚರಿಗೆ ಕಾರಣವಾಯಿತು.

“ನಾನು ಬೌಲಿಂಗ್ ಮಾಡಿದ ಕಷ್ಟಪಟ್ಟ ಬ್ಯಾಟ್ಸ್​ಮನ್​ ಎಂದರೆ ಅದು ಮುತ್ತಯ್ಯ ಮುರಳೀಧರನ್. ನಿಜ ನಾನು ತಮಾಷೆ ಮಾಡುತ್ತಿಲ್ಲ. ಮುತರಳೀಧರನ್‌ ಅವರನ್ನು ಔಟ್ ಮಾಡಲು ಹಲವು ಬೌನ್ಸರ್‌ಗಳನ್ನು ಹಾಕಿದೆ. ಆದರೆ ಆ ವೇಳೆ ಅವರು ದಯವಿಟ್ಟು ಬೌನ್ಸರ್‌ಗಳನ್ನು ಹಾಕಬೇಡಿ, ನನಗೆ ಚೆಂಡು ಬಿದ್ದರೆ ನಾನು ಖಂಡಿತಾ ಸಾಯುತ್ತೇನೆ. ನನ್ನ ಹಾದಿಯಲ್ಲಿ ಬೌನ್ಸರ್‌ಗಳನ್ನು ಹಾಕಬೇಡಿ. ಪಿಚ್ ಬಾಲ್ ಹಾಕಿದರೆ ನಾನೇ ನಿನಗೆ ಕ್ಯಾಚ್ ನೀಡುತ್ತೇನೆಂದು ಹೇಳಿದ್ದರು” ಎಂದು ತಿಳಿಸಿದ್ದಾರೆ.

ಶೋಯೆಬ್‌ ಅಖ್ತರ್‌ ತಮ್ಮ ವೃತ್ತಿ ಜೀವನದಲ್ಲಿ 46 ಟೆಸ್ಟ್ ಪಂದ್ಯಗಳಾಡಿದ್ದು, 178 ವಿಕೆಟ್‌ಗಳನ್ನು ಪಡೆದಿದ್ದಾರೆ ಹಾಗೂ 163 ಏಕದಿನ ಪಂದ್ಯಗಳಿಂದ 247 ವಿಕೆಟ್‌ಗಳನ್ನು ಕಿತ್ತಿದ್ದಾರೆ. 15 ಟಿ-20 ಪಂದ್ಯಗಳಿಂದ 19 ವಿಕೆಟ್‌ಗಳನ್ನು ಸೇರಿಸಿಕೊಂಡಿದ್ದಾರೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ