ರಾಜ್ಯದ ಎಲ್ಲ ಕೆರೆಗಳ ಸರ್ವೆ ನಡೆಸಿ, ಒತ್ತುವರಿಯಾಗಿದ್ದರೆ ತೆರವುಗೊಳಿಸಿ: ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹೈಕೋರ್ಟ್ ನಿರ್ದೇಶನ

Lakes in Karnataka: ಕೆರೆಗಳು ನಮ್ಮ ಪರಿಸರದ ಒಂದು ಪ್ರಮುಖ ಭಾಗ . ಕೆರೆ ಪುನರುಜ್ಜೀವನ ಗೊಳಿಸದಿದ್ದರೆ ಈ ಹಕ್ಕು ಹರಣವಾದಂತೆ . ಹಾಗಾಗಿ ಕೆರೆಗಳನ್ನು ರಕ್ಷಿಸುವುದೂ ಎಲ್ಲರ ಕರ್ತವ್ಯ ಎಂದು ಚೀಫ್​ ಜಸ್ಟೀಸ್​ ಎ.ಎಸ್. ಒಕಾ ಮತ್ತು  ಜಸ್ಟೀಸ್ ಎಂ. ನಾಗಪ್ರಸನ್ನ ಅವರ ನ್ಯಾಯಪೀಠ ಇಂದು ಆದೇಶ ಹೊರಡಿಸಿದೆ.

ರಾಜ್ಯದ ಎಲ್ಲ ಕೆರೆಗಳ ಸರ್ವೆ ನಡೆಸಿ, ಒತ್ತುವರಿಯಾಗಿದ್ದರೆ ತೆರವುಗೊಳಿಸಿ: ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹೈಕೋರ್ಟ್ ನಿರ್ದೇಶನ
ರಾಜ್ಯದ ಎಲ್ಲ ಕೆರೆಗಳ ಸರ್ವೆ ನಡೆಸಿ, ಒತ್ತುವರಿಯಾಗಿದ್ದರೆ ತೆರವುಗೊಳಿಸಿ: ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹೈಕೋರ್ಟ್ ನಿರ್ದೇಶನ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jul 14, 2021 | 5:16 PM

ಬೆಂಗಳೂರು: ರಾಜ್ಯದ ಎಲ್ಲಾ ಕೆರೆಗಳು ಮತ್ತು ಬಫರ್ ಝೋನ್ ಗಳ ಸರ್ವೆ ನಡೆಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಹೈಕೋರ್ಟ್ ನಿರ್ದೇಶನ ನೀಡಿದೆ.  ಇದೇ ವೇಳೆ, ಕರ್ನಾಟಕ ಕೆರೆ ಸಂರಕ್ಷಣಾ ಪ್ರಾಧಿಕಾರಕ್ಕೂ ನೋಟಿಸ್ ಜಾರಿ ಮಾಡಿದೆ.

ಕೆರೆ ಸುತ್ತ 30 ಮೀಟರ್ ಬಫರ್ ಝೋನ್ ನಿಗದಿಪಡಿಸಲಾಗಿದೆ. ರಾಜ್ಯಗಳ ಕೆರೆಗಳ ರಕ್ಷಣೆ ಸರ್ಕಾರದ ಹೊಣೆ. ಭೂ ಕಂದಾಯ ಕಾಯ್ದೆ 104 ಅಡಿ ಕ್ರಮ ಕೈಗೊಳ್ಳಬೇಕು. ಕೆರೆಗಳ ಒತ್ತುವರಿಯಾಗಿದ್ದರೆ ತೆರವುಗೊಳಿಸಬೇಕು. ಬಫರ್ ಝೋನ್ ನಲ್ಲಿನ ನಿರ್ಮಾಣಗಳನ್ನು ತೆರವುಗೊಳಿಸಬೇಕು ಎಂದು ಆದೇಶಿಸಿರುವ ಕರ್ನಾಟಕ ಹೈಕೋರ್ಟ್​, ಈ ಬಗ್ಗೆ ನಿರ್ದೇಶನ ನೀಡಲು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ. (identify the boundary and buffer zone of each lake)

ಅಕ್ರಮ ನಿರ್ಮಾಣಗಳ ತೆರವಿಗೆ ಪಾಲಿಕೆಗಳಿಗೂ ನಿರ್ದೇಶನ:

survey the boundary and buffer zone of lakes in Karnataka if encroached clear it orders high court 2

ಅಕ್ರಮ ನಿರ್ಮಾಣಗಳ ತೆರವಿಗೆ ಪಾಲಿಕೆಗಳಿಗೂ ನಿರ್ದೇಶನ

ಭೂ ಕಂದಾಯ ಕಾಯ್ದೆಯಡಿ (Karnataka Land Revenue Act 1964) ನಿರ್ದೇಶನಕ್ಕೆ ಆದೇಶಿಸಿರುವ ಕರ್ನಾಟಕ ಹೈಕೋರ್ಟ್, ಅಕ್ರಮ ನಿರ್ಮಾಣಗಳ ತೆರವಿಗೆ ಪಾಲಿಕೆಗಳಿಗೂ ನಿರ್ದೇಶನ ನೀಡಿದೆ. ಮಾಲಿನ್ಯ ರಹಿತ ವಾತಾವರಣದಲ್ಲಿ ಬದುಕುವುದು ಹಕ್ಕು. ಕೆರೆಗಳು ನಮ್ಮ ಪರಿಸರದ ಒಂದು ಪ್ರಮುಖ ಭಾಗ . ಕೆರೆ ಪುನರುಜ್ಜೀವನ ಗೊಳಿಸದಿದ್ದರೆ ಈ ಹಕ್ಕು ಹರಣವಾದಂತೆ . ಹಾಗಾಗಿ ಕೆರೆಗಳನ್ನು ರಕ್ಷಿಸುವುದೂ ಎಲ್ಲರ ಕರ್ತವ್ಯ ಎಂದು ಚೀಫ್​ ಜಸ್ಟೀಸ್​ ಎ.ಎಸ್. ಒಕಾ ಮತ್ತು  ಜಸ್ಟೀಸ್ ಎಂ. ನಾಗಪ್ರಸನ್ನ ಅವರ ನ್ಯಾಯಪೀಠ ಇಂದು ಆದೇಶ ಹೊರಡಿಸಿದೆ. ಅಳಿವಿನಂಚಿನಲ್ಲಿದ್ದ ಕೆರೆಗೆ ಗ್ರಾಮಸ್ಥರಿಂದಲೇ ಕಾಯಕಲ್ಪ; ಸತತ 24 ದಿನಗಳಿಂದ ಕೆರೆಯಲ್ಲಿದ್ದ ಜಾಲಿಮರ ತೆರವು

(survey the boundary and buffer zone of lakes in Karnataka if encroached clear it orders high court to state government and deputy commissioner)

Published On - 5:16 pm, Wed, 14 July 21