ಹಾಸನ: ಮೂಲ ಯೋಜನೆಗೆ ವಿರುದ್ಧವಾಗಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಯತ್ನ; ಹೆಚ್ ಡಿ ರೇವಣ್ಣ ಆಕ್ರೋಶ

ಹಾಸನ: ಮೂಲ ಯೋಜನೆಗೆ ವಿರುದ್ಧವಾಗಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಯತ್ನ; ಹೆಚ್ ಡಿ ರೇವಣ್ಣ ಆಕ್ರೋಶ
ಹೆಚ್.ಡಿ.ರೇವಣ್ಣ (ಸಂಗ್ರಹ ಚಿತ್ರ)

ಈ ಬಗ್ಗೆ 20 ನೆ ತಾರಿಖಿನೊಳಗೆ ಸೂಕ್ತ ನಿರ್ಣಯ ಕೈಗೊಳ್ಳದಿದ್ದರೆ 22 ಕ್ಕೆ ಧರಣಿ ನಡೆಸುತ್ತೇವೆ. ವಿಮಾನ ನಿಲ್ದಾಣಕ್ಕಾಗಿ ದೇವೇಗೌಡರ ನೇತೃತ್ವದಲ್ಲಿ ಹೋರಾಟ ಮಾಡುತ್ತೇವೆ ಎಂದು ರೇವಣ್ಣ ಹೇಳಿದ್ದಾರೆ.

TV9kannada Web Team

| Edited By: ganapathi bhat

Jul 14, 2021 | 3:57 PM

ಹಾಸನ: ನಗರದಲ್ಲಿ ಮೂಲ ಯೋಜನೆಗೆ ವಿರುದ್ಧವಾಗಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಯತ್ನ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಹೆಚ್.ಡಿ. ರೇವಣ್ಣ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಹೆಚ್.ಡಿ. ದೇವೇಗೌಡರು ಮುಖ್ಯಮಂತ್ರಿ ಹಾಗೂ ಸಚಿವರಿಗೆ ಪತ್ರ ಬರೆದಿದ್ದಾರೆ. ಗಾಲ್ಫ್​ ಕ್ಲಬ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವ ಯೋಜನೆ ಇತ್ತು. ಯಾವುದೇ ಕಾರಣಕ್ಕೂ ಏರ್​ಪೋರ್ಟ್​ಗೆ ಮೀಸಲಾದ ಭೂಮಿ ಡಿನೋಟಿಫೈ ಬೇಡ ಎಂದು ರೇವಣ್ಣ ತಿಳಿಸಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಎಲ್ಲಾ ಶಾಸಕರು ಪತ್ರ ಬರೆದಿದ್ದೇವೆ. ಜುಲೈ 20ರೊಳಗೆ ಸೂಕ್ತ ನಿರ್ಣಯ ಕೈಗೊಳ್ಳದಿದ್ದರೆ ಧರಣಿ ನಡೆಸುತ್ತೇವೆ. ಜುಲೈ 22ರಂದು ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಧರಣಿ ಮಾಡುತ್ತೇವೆ. ಹಾಸನ ಸಂಸದ, ಜಿಲ್ಲೆಯ ಶಾಸಕರು ಪ್ರತಿಭಟನೆ ಮಾಡುತ್ತೇವೆ. ಎಲ್ಲಿ ಧರಣಿ ನಡೆಸಬೇಕೆಂದು ಇನ್ನೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ರೇವಣ್ಣ ಹೇಳಿದ್ದಾರೆ.

960 ಎಕರೆ ಪ್ರದೇಶದಲ್ಲಿ ಏರ್​ಪೋರ್ಟ್​ ಯೋಜನೆಯಿತ್ತು. 960 ಎಕರೆ ಪೈಕಿ 560 ಎಕರೆ ಪ್ರದೇಶದಲ್ಲಿ ಮಾತ್ರ ಯೋಜನೆ ಕೈಗೊಳ್ಳಲಾಗುತ್ತಿದೆ. ರಾಜಕೀಯ ದುರುದ್ದೇಶದಿಂದ ಯೋಜನೆ ತಡೆ ಹಿಡಿಯಲಾಗಿದೆ. ಮೂಲ ಯೋಜನೆಯಂತೆ ವಿಮಾನ ನಿಲ್ದಾಣ​ ನಿರ್ಮಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆಗ್ರಹಿಸಿದ್ದಾರೆ.

ಈ ಬಗ್ಗೆ 20 ನೆ ತಾರಿಖಿನೊಳಗೆ ಸೂಕ್ತ ನಿರ್ಣಯ ಕೈಗೊಳ್ಳದಿದ್ದರೆ 22 ಕ್ಕೆ ಧರಣಿ ನಡೆಸುತ್ತೇವೆ. ವಿಮಾನ ನಿಲ್ದಾಣಕ್ಕಾಗಿ ದೇವೇಗೌಡರ ನೇತೃತ್ವದಲ್ಲಿ ಹೋರಾಟ ಮಾಡುತ್ತೇವೆ ಎಂದು ರೇವಣ್ಣ ಹೇಳಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಜಾಗ ಉಳಿಸಲು 4 ಸಾವಿರ ಗಿಡ ನೆಟ್ಟು ಪೋಷಣೆ; ಹಾಸನದ ವ್ಯಕ್ತಿಯ ಪರಿಸರ ಪ್ರೇಮಕ್ಕೆ ಮೆಚ್ಚಿದ ಜನತೆ

ವೇದಿಕೆ ಮೇಲೆ ಕೂರುವ ವಿಚಾರಕ್ಕೆ ಬಿಜೆಪಿ- ಜೆಡಿಎಸ್ ಶಾಸಕರ ಜಟಾಪಟಿ; ಹಾಸನದಲ್ಲಿ ಸಚಿವರ ಮುಂದೆ ಮಾತಿನ ಚಕಮಕಿ

Follow us on

Related Stories

Most Read Stories

Click on your DTH Provider to Add TV9 Kannada