ವೇದಿಕೆ ಮೇಲೆ ಕೂರುವ ವಿಚಾರಕ್ಕೆ ಬಿಜೆಪಿ- ಜೆಡಿಎಸ್ ಶಾಸಕರ ಜಟಾಪಟಿ; ಹಾಸನದಲ್ಲಿ ಸಚಿವರ ಮುಂದೆ ಮಾತಿನ ಚಕಮಕಿ

ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹಾಗೂ ಬಿಜೆಪಿ ಶಾಸಕ ಪ್ರೀತಂಗೌಡ ನಡುವೆ ಟಾಕ್ ಫೈಟ್ ನಡೆದಿದೆ. ಕಂದಾಯ ಸಚಿವ ಆರ್. ಅಶೋಕ್ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು.

ವೇದಿಕೆ ಮೇಲೆ ಕೂರುವ ವಿಚಾರಕ್ಕೆ ಬಿಜೆಪಿ- ಜೆಡಿಎಸ್ ಶಾಸಕರ ಜಟಾಪಟಿ; ಹಾಸನದಲ್ಲಿ ಸಚಿವರ ಮುಂದೆ ಮಾತಿನ ಚಕಮಕಿ
ಸಾಂಕೇತಿಕ ಚಿತ್ರ
Follow us
TV9 Web
| Updated By: ganapathi bhat

Updated on: Jun 30, 2021 | 4:36 PM

ಹಾಸನ: ವೇದಿಕೆ ಮೇಲೆ ಕೂರುವ ವಿಚಾರಕ್ಕೆ ಹಾಸನ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶಾಸಕರ ಮಾತಿನ ಚಕಮಕಿ ಏರ್ಪಟ್ಟ ಘಟನೆ ನಡೆದಿದೆ. ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹಾಗೂ ಬಿಜೆಪಿ ಶಾಸಕ ಪ್ರೀತಂಗೌಡ ನಡುವೆ ಟಾಕ್ ಫೈಟ್ ನಡೆದಿದೆ. ಕಂದಾಯ ಸಚಿವ ಆರ್. ಅಶೋಕ್ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಕೊವಿಡ್ ನಿರ್ವಹಣೆ ಸಂಬಂಧ ಹಾಸನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಭೆ ನಡೆಯುತ್ತಿತ್ತು.

ಸಭೆಯಲ್ಲಿ ವೇದಿಕೆ ಮೇಲೆ ಸಚಿವರಾದ ಆರ್. ಅಶೋಕ್ ಕೂಡ ಇದ್ದರು. ಗೋಪಾಲಯ್ಯ, ಡಿಸಿ, ಎಸ್‌ಪಿ, ಜಿಲ್ಲಾ ಪಂಚಾಯಿತಿ ಸಿಇಒ ಕೂಡ ವೇದಿಕೆ ಹಂಚಿಕೊಂಡಿದ್ದರು. ಈ ವೇಳೆ ಶಾಸಕರು ವೇದಿಕೆ ಮೇಲೆ ಕುಳಿತುಕೊಳ್ಳಬೇಕು. ಮುಂದಿನ ಸಭೆಯಿಂದ ಕುಳಿತುಕೊಳ್ಳಬೇಕು ಎಂದು ಆರ್. ಅಶೋಕ್ ಸೂಚಿಸಿದ್ದಾರೆ. ಇದಕ್ಕೆ ವ್ಯವಸ್ಥೆ ಮಾಡುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ವೇಳೆ ಅಸಮಾಧಾನ ಹೊರಹಾಕಿದ ಶಿವಲಿಂಗೇಗೌಡ, ಎಲ್ಲ ಜಿಲ್ಲೆಯಲ್ಲೂ ಶಾಸಕರು ವೇದಿಕೆ ಮೇಲೆ ಇರುತ್ತಾರೆ. ಆದ್ರೆ ಹಾಸನ ಜಿಲ್ಲೆಯಲ್ಲಿ ಮಾತ್ರ ಈ ರೀತಿ ಮಾಡುತ್ತಾರೆ. ನಮ್ಮನ್ನು ಕೆಳಗೆ ಕೂರಿಸಲು ಹೇಳಿದ್ದು ಪ್ರೀತಂಗೌಡ ಎಂದು ಹೇಳಿದ್ದಾರೆ. ಶಿವಲಿಂಗೇಗೌಡ ಹೇಳಿಕೆಗೆ ಪ್ರೀತಂಗೌಡ ಪ್ರತಿಕ್ರಿಯೆ ನೀಡಿದ್ದಾರೆ. ರೇವಣ್ಣ ಸಚಿವರಾಗಿದ್ದಾಗ ಹೇಗೆ ನಡೆದಿತ್ತೋ ಹಾಗೆಯೇ ಈಗಲೂ ಇದೆ. ಈಗಲೂ ಅದನ್ನೇ ಮುಂದುವರಿಸಿದ್ದೇವೆ ಎಂದು ಪ್ರೀತಂಗೌಡ ಹೇಳಿದ್ದಾರೆ.

ಸಿಎಂ ಬಂದಾಗ ರೇವಣ್ಣ ಪಕ್ಕದಲ್ಲಿಯೇ ಕುಳಿತುಕೊಂಡಿದ್ದರು. ಆಗ ಏಕೆ ಸುಮ್ಮನಿದ್ರಿ ಎಂದು ಶಿವಲಿಂಗೇಗೌಡ ಮರುಪ್ರಶ್ನೆ ಹಾಕಿದ್ದಾರೆ. ಮುಂದೆ ಈ ರೀತಿ ಆಗುವುದು ಬೇಡ ರೇವಣ್ಣರನ್ನು ಕರೆಯಿರಿ. ವೇದಿಕೆಯ ಮೇಲೆ ಹೆಚ್.ಡಿ.ರೇವಣ್ಣರನ್ನು ಕರೆಯಿರಿ ಎಂದು ಶಿವಲಿಂಗೇಗೌಡ ಹೇಳಿದ್ದಾರೆ. ಶಿವಲಿಂಗೇಗೌಡ ಹೇಳಿದಂತೆ ರೇವಣ್ಣರನ್ನ ಆರ್. ಅಶೋಕ್ ವೇದಿಕೆ ಮೇಲೆ ಕರೆದಿದ್ದಾರೆ.

ಆದರೆ ವೇದಿಕೆ ಮೇಲೆ ಹೋಗಲು ರೇವಣ್ಣ ನಿರಾಕರಿಸಿದ್ದಾರೆ. ಈ ವೇಳೆ ಮತ್ತೆ ಬಿಜೆಪಿ ಶಾಸಕ ಪ್ರೀತಂಗೌಡ ತಿರುಗೇಟು ನೀಡಿದ್ದಾರೆ. ನೀವು ವಿರೋಧಪಕ್ಷದಲ್ಲಿ ಕುಳಿತಾಗ ನಿಯಮ‌ ಹೇಳಬೇಡಿ. ಈಗ ನಾವು ಹೇಳೋದನ್ನ ಮಾಡಿ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಸಾವಿನಲ್ಲೂ ಒಂದಾದ ಹಾಸನ ದಂಪತಿ; ಪತ್ನಿ ಮೃತಪಟ್ಟು 15 ನಿಮಿಷದಲ್ಲಿ ಪತಿಗೆ ಹೃದಯಾಘಾತ

MRPL: ಎಂಆರ್​ಪಿಎಲ್​ನಲ್ಲಿ ಕನ್ನಡಿಗರಿಗಿಲ್ಲ ಕೆಲಸ: ಮಂಗಳೂರಿನಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪ್ರತಿಭಟಿಸಿ ಎಚ್ಚರಿಕೆ