AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾವಿನಲ್ಲೂ ಒಂದಾದ ಹಾಸನ ದಂಪತಿ; ಪತ್ನಿ ಮೃತಪಟ್ಟು 15 ನಿಮಿಷದಲ್ಲಿ ಪತಿಗೆ ಹೃದಯಾಘಾತ

ಇಬ್ಬರಲ್ಲಿ ಯಾರಿಗೇ ಏನಾದರೂ ಆದರೆ ಸಹಿಸುವ ಶಕ್ತಿ ಗಂಡ- ಹೆಂಡತಿಗೆ ಇರಲ್ಲ. ಇದಕ್ಕೆ ಉದಾಹರಣೆಯಾಗಿ ಹಾಸನದಲ್ಲೊಂದು ಘಟನೆ ನಡೆದಿದೆ. ಮದುವೆಯಾದ ದಿನದಿಂದ ಒಟ್ಟಿಗೆ ಜೀವನ ಸಾಗಿಸುತ್ತಿದ್ದ ದಂಪತಿ ಸಾವಿನ ಪಯಣವನ್ನೂ ಒಟ್ಟಿಗೆ ಮುಂದುವರೆಸಿದ್ದಾರೆ.

ಸಾವಿನಲ್ಲೂ ಒಂದಾದ ಹಾಸನ ದಂಪತಿ; ಪತ್ನಿ ಮೃತಪಟ್ಟು 15 ನಿಮಿಷದಲ್ಲಿ ಪತಿಗೆ ಹೃದಯಾಘಾತ
ಸಾವಿನಲ್ಲಿ ಒಂದಾದ ದಂಪತಿ
TV9 Web
| Updated By: sandhya thejappa|

Updated on: Jun 30, 2021 | 12:30 PM

Share

ಹಾಸನ: ಗಂಡ ಹೆಂಡತಿ ಸಂಬಂಧಕ್ಕೆ ಅದರದೇ ಆದ ಅರ್ಥವಿದೆ. ಜಗಳವಾಡಬಹುದು, ಕಿತ್ತಾಡಬಹುದು. ಆದರೆ ಸುಖ, ದುಃಖವನ್ನು ಸಮಾನವಾಗಿ ಸ್ವೀಕರಿಸಿ ಜೀವನ ಸಾಗಿಸುತ್ತಾರೆ. ಇನ್ನೊಬ್ಬರಿಗೆ ಮಾದರಿಯಾಗುವಂತೆ ಬದುಕುತ್ತಾರೆ. ಇಬ್ಬರಲ್ಲಿ ಯಾರಿಗೇ ಏನಾದರೂ ಆದರೆ ಸಹಿಸುವ ಶಕ್ತಿ ಗಂಡ- ಹೆಂಡತಿಗೆ ಇರಲ್ಲ. ಇದಕ್ಕೆ ಉದಾಹರಣೆಯಾಗಿ ಹಾಸನದಲ್ಲೊಂದು ಘಟನೆ ನಡೆದಿದೆ. ಮದುವೆಯಾದ ದಿನದಿಂದ ಒಟ್ಟಿಗೆ ಜೀವನ ಸಾಗಿಸುತ್ತಿದ್ದ ದಂಪತಿ ಸಾವಿನ ಪಯಣವನ್ನೂ ಒಟ್ಟಿಗೆ ಮುಂದುವರೆಸಿದ್ದಾರೆ.

ಅನಾರೋಗ್ಯದಿಂದ ಪತ್ನಿ ಸಾವಿಗೀಡಾದ ಹದಿನೈದು ನಿಮಿಷಗಳ ಅಂತರದಲ್ಲಿ ಪತಿಯೂ ಮೃತಪಟ್ಟಿದ್ದು, ದಂಪತಿಗಳು ಸಾವಿನಲ್ಲೂ ಒಂದಾಗಿದ್ದಾರೆ. ಈ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಜಾವಗಲ್​ನಲ್ಲಿ ನಡೆದಿದೆ. ಇಲ್ಲಿನ ಅಮ್ಮನಹಳ್ಳಿ ಬಡಾವಣೆಯಲ್ಲಿ ಪತ್ನಿ ಜಯಮ್ಮ(50) ಹಾಗು ಜೆ.ಡಿ.ರಾಜೇಗೌಡ ಮೃತರು. ಸೋಮವಾರ ಬೆಳಿಗ್ಗೆ ಅನಾರೋಗ್ಯದಿಂದ ಗ್ರಾಮ ಪಂಚಾಯತಿ ಮಾಜಿ ಸದಸ್ಯೆ ಆಗಿರುವ ಜಯಮ್ಮ ಮೃತಪಟ್ಟಿದ್ದರು.

ಜಯಮ್ಮನವರ ಅಂತ್ಯಕ್ರಿಯೆಗೆ ಸಿದ್ಧತೆ ನಡೆಯುವಾಗಲೇ ಪತ್ನಿಯ ಸಾವಿನ ಸುದ್ದಿಯಿಂದ ಆಘಾತಗೊಂಡಿದ್ದ ರಾಜಣ್ಣ ಕೂಡ ಕುಸಿದುಬಿದ್ದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಸುಮಾರು 25 ವರ್ಷಗಳ ವೈವಾಹಿಕ ಜೀವನ ನಡೆಸಿದ್ದ ಈ ದಂಪತಿ ಸಾವಿನಲ್ಲಿಯೂ ಒಂದಾಗಿದ್ದಾರೆ. ತಮ್ಮ ಜೊತೆ ಜೊತೆಯ ಪಯಣವನ್ನು ಸಾವಿನಲ್ಲೂ ಮುಂದುವೆಸಿದ್ದಾರೆ.

ಇದನ್ನೂ ಓದಿ

Delta Plus variant: ಡೆಲ್ಟಾ ಪ್ಲಸ್ ರೂಪಾಂತರಿ ಅಪಾಯಕಾರಿಯೇ? ಹೊಸ ಕೊವಿಡ್ ರೂಪಾಂತರಿ ಬಗ್ಗೆ ತಜ್ಞರು ಹೇಳುವುದೇನು?

ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಬೇಕು; ಪರಿಹಾರದ ಮೊತ್ತವನ್ನು ಸರ್ಕಾರ ನಿರ್ಧರಿಸಲಿ – ಸುಪ್ರೀಂಕೋರ್ಟ್​

(husband had a heart attack within 15 minutes of his wife death in hassan)

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ