ತುಮಕೂರು: ಸ್ಮಾಟ್ ಸಿಟಿ ನಿರ್ಮಾಣ ಕಾರ್ಯದಲ್ಲಿನ ನ್ಯೂನ್ಯತೆಗಳ ಬಗ್ಗೆ ಇದೀಗ ತುಮಕೂರು ಜಿಲ್ಲಾ ಉಸ್ತುವಾರಿ ಕಾಯ೯ದಶಿ೯ ಶಾಲಿನಿ ರಜನೀಶ್ ಎಚ್ಚೆತ್ತಿದ್ದಾರೆ. ಇಂಜಿನಿಯರ್ ಕೆಲಸಕ್ಕೆ ಹಿರಿಯ ಅಧಿಕಾರಿ ಶಾಲಿನಿ ರಜನೀಶ್ ಅಸಮಾಧಾನ ವ್ಯಕ್ತಪಡಿಸಿದ್ದು, ತುಮಕೂರು ಸ್ಮಾಟ್ ಸಿಟಿ ಕಳಪೆ ಕಾಮಗಾರಿ ಪತ್ತೆಗೆ ತಂಡ ರಚಿಸಿದ್ದಾರೆ.
ನಾಲ್ವರು ಸದಸ್ಯರ ಸ್ವತಂತ್ರ್ಯ ಅನುಷ್ಠಾನ ಮೌಲ್ಯಮಾಪನ ಮತ್ತು ಯೋಜನಾ ತಂಡ ರಚನೆ ಮಾಡಿದ್ದು, ಗುಣಮಟ್ಟ ಕಾಮಗಾರಿಗಳ ವಿವರಕ್ಕೆ ಸೂಚನೆ ನೀಡಿದ್ದಾರೆ. ಡಿಸೆಂಬರ್ 16ಕ್ಕೆ ವರದಿ ನೀಡುವಂತೆ ತಂಡದ ಅಧ್ಯಕ್ಷ ಜೈಪ್ರಕಾಶ್ಗೆ ಆದೇಶಿಸಿದ್ದಾರೆ.
ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ ಕಂಡು ಮಾಜಿ ಸಚಿವ ಸೊಗಡು ಶಿವಣ್ಣ ಸಿಡಿದೆದ್ದಿದ್ದರು. ಅಶೋಕ ರಸ್ತೆಯ ಚರ್ಚ್ ಸರ್ಕಲ್ ಬಳಿಯಿರುವ ಡಕ್ಟಿಂಗ್ ಲೈನ್ ಸ್ಪೇಸರ್ಸ್ ಕೆಡವಿ ಆಕ್ರೋಶ ವ್ಯಕ್ತಪಡಿಸಿದ್ದರು ಸ್ಮಾರ್ಟ್ ಸಿಟಿ ಅಧ್ಯಕ್ಷೆ ಶಾಲಿನಿ ರಜನೀಶ್ ಇದರ ಬಗ್ಗೆ ಕಾಳಜಿ ವಹಿಸಿಲ್ಲ ಎಂದು ಗರಂ ಆಗಿದ್ದರು. ಈ ಬಗ್ಗೆ ಟಿವಿ9 ವಿಸ್ತೃತ ವರದಿ ಪ್ರಸಾರ ಮಾಡಿತ್ತು.