ತುಮಕೂರು: ಜಿಲ್ಲೆಯಲ್ಲಿ ಭೀಕರ ಅಪಘಾತ (Accident) ನಡೆದರೂ ಜನರು ಮಾತ್ರ ನಿರ್ಲಕ್ಷ್ಯ ತೋರುತ್ತಿದ್ದಾರೆ. ಖಾಸಗಿ ಬಸ್ ಅಪಘಾತದಲ್ಲಿ ಈ ಹಿಂದೆ ಸುಮಾರು 6 ಜನ ಮೃತಪಟ್ಟಿದ್ದಾರೆ. ಒಂದು ಬಸ್ನಲ್ಲಿ 130ಕ್ಕೂ ಹೆಚ್ಚು ಜನರನ್ನು ಕೂರಿಸಿಕೊಂಡು ಪ್ರಯಾಣ ಮಾಡಿದ್ದಕ್ಕೆ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಹೀಗಿದ್ದೂ, ಆಟೋ (Auto) ಚಾಲಕರು ಪಾವಗಡದಲ್ಲಿ ವಿದ್ಯಾರ್ಥಿಗಳನ್ನ ತುಂಬಿಕೊಂಡ ಚಲಾಯಿಸುತ್ತಿದ್ದಾರೆ. ಟಾಪ್ ಮೇಲೆಯೂ ವಿದ್ಯಾರ್ಥಿಗಳನ್ನ ಕೂರಿಸಿಕೊಂಡಿದ್ದು, ಅಧಿಕಾರಿಗಳು ಎಚ್ಚರ ವಹಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ಈಜಲು ಹೋಗಿದ್ದ ಯುವಕ ನೀರು ಪಾಲು:
ಕಾರವಾರ: ಸ್ನೇಹಿತರೊಂದಿಗೆ ಈಜಲು ಹೋಗಿದ್ದ ಯುವಕ ನೀರು ಪಾಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಧರ್ಮ ನದಿಯ ಮಳಗಿ ಜಲಾಶಯದಲ್ಲಿ ನಡೆದಿದೆ. ಭಟ್ಕಳ ತಾಲೂಕಿನ ಶಿರಾಲಿ ಗ್ರಾಮದ ವಿನಾಯಕ (25) ಮೃತ ಯುವಕ. ಯುವಕ ಸ್ನೇಹಿತರೊಂದಿಗೆ ಶಿರಸಿ ಮಾರಿಕಾಂಬಾ ಜಾತ್ರೆಗೆ ಬಂದಿದ್ದ. ಜಾತ್ರೆ ಮುಗಿದ ಬಳಿಕ ತನ್ನ 6 ಸ್ನೇಹಿತರೊಂದಿಗೆ ಮಳಗಿ ಜಲಾಶಕ್ಕೆ ಬಂದಿದ್ದಾನೆ. ಜಲಾಶಯದಲ್ಲಿ ಈಜಲು ಹೋಗಿದ್ದಾಗ ದುರಂತ ನಡೆದಿದೆ. ಸ್ಥಳಕ್ಕೆ ಈಜು ತಜ್ಞರು, ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ನದಿಗೆ ಈಜಲು ಹೋದ ಯುವಕ ಮೃತ:
ಇನ್ನು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಬಳಿ ಸ್ನೇಹಿತರ ಜೊತೆ ವೇದಾವತಿ ನದಿಗೆ ಈಜಲು ಹೋದ ಯುವಕ ಸಾವನ್ನಪ್ಪಿದ್ದಾನೆ. ಕಾರಟಗಿ ಮೂಲದ ನಾಗಲಿಂಗ( 23) ಮೃತ ದುರ್ದೈವಿ. ನಾಗಲಿಂಗ ರೈಸ್ ಮಿಲ್‌ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ನಿನ್ನೆ ಮಧ್ಯಾಹ್ನ ಇಬ್ಬರು ಸ್ನೇಹಿತರೊಂದಿಗೆ ವೇದಾವತಿಗೆ ಈಜಲು ಹೋಗಿದ್ದ. ಈಜು ಬಾರದೆ ನದಿಯಲ್ಲಿ ಮುಳುಗಿ ಸಾವನಪ್ಪಿರುವ ಶಂಕೆ ಮೂಡಿದೆ.
ಇದನ್ನೂ ಓದಿ
IPL 2022: ಐಪಿಎಲ್ನಲ್ಲಿ ಸಿಕ್ಕಿಲ್ಲ ಅವಕಾಶ: ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಈತ ಮಾಡಿದ್ದೇನು ನೋಡಿ
Published On - 11:30 am, Thu, 24 March 22