AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟ ಸಿಂಬು ಕಾರು ಅಪಘಾತ; 70 ವರ್ಷದ ವ್ಯಕ್ತಿ ಸಾವು: ಆ್ಯಕ್ಸಿಡೆಂಟ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Simbu Car Accident: ಸಿಂಬು ಒಡೆತನದ ಕಾರು ಅಪಘಾತಕ್ಕೆ ಒಳಗಾಗಿ 70 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಸಿಂಬು ತಂದೆ ಟಿ. ರಾಜೇಂದರ್​ ಅವರ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ನಟ ಸಿಂಬು ಕಾರು ಅಪಘಾತ; 70 ವರ್ಷದ ವ್ಯಕ್ತಿ ಸಾವು: ಆ್ಯಕ್ಸಿಡೆಂಟ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸಿಂಬು ಕಾರು ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
Follow us
TV9 Web
| Updated By: ಮದನ್​ ಕುಮಾರ್​

Updated on:Mar 24, 2022 | 9:04 AM

ಸೆಲೆಬ್ರಿಟಿಗಳ ಕಾರು ಅಪಘಾತಕ್ಕೆ ಜನಸಾಮಾನ್ಯರು ಬಲಿ ಆದ ಘಟನೆಗಳು ಪದೇಪದೇ ಮರುಕಳಿಸುತ್ತಲೇ ಇವೆ. ಈಗ ಖ್ಯಾತ ಕಾಲಿವುಡ್​ ನಟ ಸಿಂಬು (Actor Simbu) ಅವರ ಕಾರು ಅಪಘಾತಕ್ಕೆ ಒಳಗಾಗಿದೆ. ಮಾ.18ರಂದು ಈ ಘಟನೆ ನೆಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಮಿಳು ಚಿತ್ರರಂಗದಲ್ಲಿ ಸಿಂಬು (Silambarasan) ಅವರು ತುಂಬ ಫೇಮಸ್​ ಆಗಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು ಕಳೆದ ವರ್ಷ ‘ಮಾನಾಡು’ ಸಿನಿಮಾದ ಯಶಸ್ಸಿನಿಂದ ಖುಷಿ ಆಗಿದ್ದರು. ಈಗ ಅವರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಸಿಂಬು ಹೆಸರಿನಲ್ಲಿ ನೋಂದಣಿ ಆಗಿರುವ ಕಾರು ಅಪಘಾತಕ್ಕೆ ಈಡಾಗಿದ್ದು, ಈ ಆ್ಯಕ್ಸಿಡೆಂಟ್​ನಲ್ಲಿ 70 ವರ್ಷದ ವ್ಯಕ್ತಿ ಮೃತರಾಗಿದ್ದಾರೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಘಟನೆಯ ವಿವರಗಳು ಹೊರಬರಲಾರಂಭಿಸಿವೆ. ಅಪಘಾತಕ್ಕೆ (Simbu Car Accident) ಸಂಬಂಧಿಸಿದಂತೆ ಕಾರು ಚಾಲಕನನ್ನು ಬಂಧಿಸಲಾಗಿದೆ. ಇನ್ನಷ್ಟು ವಿವರಗಳು ಬಹಿರಂಗ ಆಗಬೇಕಿದೆ. ನಿಧನರಾದ ವ್ಯಕ್ತಿಯನ್ನು ಮುನುಸ್ವಾಮಿ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮುನುಸ್ವಾಮಿ ಅವರು ಬೀದಿ ಬದಿಯಲ್ಲಿ ವಾಸಿಸುತ್ತಿದ್ದರು. ಅವರಿಗೆ 70 ವರ್ಷ ವಯಸ್ಸಾಗಿತ್ತು. ತೇನಂಪೇಟ್​ ಪ್ರದೇಶದ ಸುತ್ತಮುತ್ತ ಸಣ್ಣ-ಪುಟ್ಟ ಕೆಲಸಗಳನ್ನು ಮಾಡಿಕೊಂಡು ಅವರು ಜೀವನ ಸಾಗಿಸುತ್ತಿದ್ದರು. ಒಂದು ವಾರದ ಹಿಂದೆ ಚರಂಡಿ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದ ವೇಳೆ ಅವರ ಕಾಲಿಗೆ ಪೆಟ್ಟಾಗಿತ್ತು. ಆದ್ದರಿಂದ ಅವರಿಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ತೆವಳುತ್ತ ರಸ್ತೆ ದಾಟುತ್ತಿದ್ದ ಮುನುಸ್ವಾಮಿ ಮೇಲೆ ಸಿಂಬು ಒಡೆತನದ ಕಾರು ಹರಿದಿದೆ.

ಅಪಘಾತ ನಡೆದ ಕೂಡಲೇ ಕಾರಿನಲ್ಲಿ ಇದ್ದವರು ಪರಾರಿ ಆಗಿದ್ದಾರೆ. ಸ್ಥಳೀಯರು ಮುನುಸ್ವಾಮಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಕಾರಿ ಆಗದೇ ಅವರು ಮೃತಪಟ್ಟರು ಎಂಬುದು ತಿಳಿದುಬಂದಿದೆ. ಸಿಂಬು ತಂದೆ ಟಿ. ರಾಜೇಂದ್ರ ಅವರ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಚಾಲಕನ ಹೆಸರು ಸೆಲ್ವಂ ಎಂದು ತಿಳಿದುಬಂದಿದೆ. ಆ ಕಾರು ಎಲ್ಲಿಂದ ಬರುತ್ತಿತ್ತು? ಕಾರಿನಲ್ಲಿ ಯಾರೆಲ್ಲ ಇದ್ದರು? ಸಿಂಬು ಹೆಸರಿನಲ್ಲಿ ರಿಜಿಸ್ಟರ್​ ಆಗಿರುವ ಈ ಕಾರಿನಲ್ಲಿ ಸಿಂಬು ಪ್ರಯಾಣ ಮಾಡುತ್ತಿರಲಿಲ್ಲವಾ ಎಂಬಿತ್ಯಾದಿ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

ನಟ ಸಿಂಬು ಹಿನ್ನೆಲೆ:

ಬಾಲನಟನಾಗಿಯೇ ಚಿತ್ರರಂಗಕ್ಕೆ ಸಿಂಬು ಕಾಲಿಟ್ಟರು. ಸಿನಿಮಾ ಕ್ಷೇತ್ರದಲ್ಲಿ ಅವರು ಹಲವು ಏಳು-ಬೀಳುಗಳನ್ನು ಕಂಡಿದ್ದಾರೆ. 1980ರ ದಶಕದಿಂದಲೂ ಅವರು ಬಣ್ಣದ ಲೋಕದ ನಂಟು ಹೊಂದಿದ್ದಾರೆ. ನಿರ್ದೇಶಕನಾಗಿ, ಚಿತ್ರಕಥೆ ಬರಹಗಾರನಾಗಿ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. 20ರ ಪ್ರಾಯಕ್ಕೂ ಮುನ್ನವೇ ಅವರು ಹೀರೋ ಆದರು. 21ನೇ ವಯಸ್ಸಿಗೆ ‘ಮನ್ಮಥಂ’ ಚಿತ್ರದ ಸ್ಕ್ರಿಪ್ಟ್​ ಬರೆದು, ನಿರ್ದೇಶನ ವಿಭಾಗದ ಮೇಲ್ವಿಚಾರಣೆ ನೋಡಿಕೊಂಡರು. ಆ ಚಿತ್ರ ಸೂಪರ್​ ಹಿಟ್​ ಆಯಿತು. ನಟನಾಗಿ ಅವರ ವೃತ್ತಿಜೀವನಕ್ಕೆ ದೊಡ್ಡ ಯಶಸ್ಸು ತಂದುಕೊಟ್ಟಿತು. ಕೈತುಂಬ ಆಫರ್​ ಇಟ್ಟುಕೊಂಡು, ಬಹುಬೇಡಿಕೆಯ ನಟನಾಗಿ ಅವರು ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ:

 ಶೀಘ್ರವೇ ಸಿಂಬು-ನಿಧಿ ಅಗರ್​ವಾಲ್​ ಮದುವೆ? ಹೊರ ಬಿತ್ತು ಹೊಸ ಸುದ್ದಿ

‘ಮಾನಾಡು’ ನಟ ಸಿಂಬುಗೆ ಗೌರವ ಡಾಕ್ಟರೇಟ್​; ಚಿತ್ರರಂಗದಲ್ಲಿ ಈ ಕಲಾವಿದನ ಸಾಧನೆ ಏನು?

Published On - 9:02 am, Thu, 24 March 22

ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ
ತಿರಂಗಾ ಯಾತ್ರೆಯಲ್ಲಿ ಮಾಜಿ ಯೋಧರ ಕೈಹಿಡಿದು ಹೆಜ್ಜೆಹಾಕಿದ ನಾಯಕರು
ತಿರಂಗಾ ಯಾತ್ರೆಯಲ್ಲಿ ಮಾಜಿ ಯೋಧರ ಕೈಹಿಡಿದು ಹೆಜ್ಜೆಹಾಕಿದ ನಾಯಕರು