ತುಮಕೂರು ಜಿಲ್ಲಾಧಿಕಾರಿ ಆಪ್ತ ಸಹಾಯಕ 15 ವರ್ಷಗಳ ಬಳಿಕ ಎತ್ತಂಗಡಿ: ಅನೇಕ ಡಿಸಿಗಳು ಬದಲಾಗಿದ್ದರೂ ಇವರು ಬದಲಾಗಿರಲಿಲ್ಲ
ರಾಜ್ಯದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇಂದು ಇರುವ ಅಧಿಕಾರಿಗಳು ನಾಳೆ ಆ ಸ್ಥಾನದಲ್ಲಿ ಇರುವುದಿಲ್ಲ. ಆಯಾ ಪಕ್ಷಗಳು ತಮಗೆ ಬೇಕಾದ ಅಧಿಕಾರಿಗಳನ್ನು ಇಟ್ಟುಕೊಂಡು ಬೇಡವಾದವರನ್ನು ವರ್ಗಾವಣೆ ಮಾಡುತ್ತಿದ್ದರು. ತುಮಕೂರಿನ ಅನೇಕ ಡಿಸಿಗಳು ಬದಲಾಗಿದ್ದರೂ ಆದರೆ ಅವರ ಆಪ್ತ ಸಹಾಯಕ ಮಾತ್ರ ವರ್ಗಾವಣೆ ಆಗಿರಲಿಲ್ಲ. ಕಳೆದ 15 ವರ್ಷಗಳಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಠಿಕಾಣಿ ಹೂಡಿದ್ದರು. ಇದೀಗ ಹಲವು ಆರೋಪಗಳು ಬಂದ ನಂತರ ಎತ್ತಂಗಡಿ ಮಾಡಲಾಗಿದೆ.
ತುಮಕೂರು, ಫೆಬ್ರವರಿ 29: ರಾಜ್ಯದಲ್ಲಿ ವರ್ಗಾವಣೆ (transfer) ದಂಧೆ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇಂದು ಇರುವ ಅಧಿಕಾರಿಗಳು ನಾಳೆ ಆ ಸ್ಥಾನದಲ್ಲಿ ಇರುವುದಿಲ್ಲ. ಆಯಾ ಪಕ್ಷಗಳು ತಮಗೆ ಬೇಕಾದ ಅಧಿಕಾರಿಗಳನ್ನು ಇಟ್ಟುಕೊಂಡು ಬೇಡವಾದವರನ್ನು ವರ್ಗಾವಣೆ ಮಾಡುತ್ತಿದ್ದರು. ತುಮಕೂರಿನ ಅನೇಕ ಡಿಸಿಗಳು ಬದಲಾಗಿದ್ದರೂ ಆದರೆ ಅವರ ಆಪ್ತ ಸಹಾಯಕ ಮಾತ್ರ ವರ್ಗಾವಣೆ ಆಗಿರಲಿಲ್ಲ. ಕಳೆದ 15 ವರ್ಷಗಳಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಠಿಕಾಣಿ ಹೂಡಿದ್ದರು. ಒಂದೇ ಜಾಗದಲ್ಲಿ ಠಿಕಾಣಿ ಹೂಡಿ ಅಧಿಕಾರ ದುರುಪಯೋಗ ಪಡಿಸಿಕೊಂಡ ಆರೋಪ ಹಿನ್ನೆಲೆ ತುಮಕೂರು ಜಿಲ್ಲಾಧಿಕಾರಿ ಆಪ್ತ ಸಹಾಯಕನನ್ನು ಎತ್ತಂಗಡಿ ಮಾಡಲಾಗಿದೆ.
ಹೇರಂಭಾ ಎಸ್.ಜಿ ಎಂಬುವವರನ್ನು ವರ್ಗಾವಣೆಗೊಳಿಸಿ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಆದೇಶ ಹೊರಡಿಸಿದ್ದಾರೆ. ಹೇರಂಭಾ ಕಳೆದ 15 ವರ್ಷಗಳಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಠಿಕಾಣಿ ಹೂಡಿದ್ದರು. ಹೇರಂಭಾರನ್ನು ವರ್ಗಾವಣೆಗೊಳಿಸುವಂತೆ ಆಗ್ರಹಿಸಲಾಗಿತ್ತು. ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯಿಂದ ಕಳೆದ ನಾಲ್ಕು ದಿನದಿಂದ ನಿರಂತರ ಧರಣಿ ನಡೆಸಲಾಗಿತ್ತು.
ಹೇರಂಭಾ ಹಲವು ವರ್ಷಗಳಿಂದ ಒಂದೇ ಕಡೆ ಠಿಕಾಣಿ ಹೂಡಿದ್ದ. ಸದ್ಯ ಹೇರಂಭಾ ಅವರನ್ನ ಗುಬ್ಬಿಯ ತಾಲೂಕು ಕಚೇರಿಗೆ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ. ಹೇರಂಭಾ ಸೇರಿದಂತೆ ಮೂವರು ಸಿಬ್ಬಂದಿಗಳ ವರ್ಗಾವಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಪ್ರಥಮ ದರ್ಜೆ ಸಹಾಯಕ ಶಶಿಧರ ಕೆ.ಎನ್, ದ್ವಿತೀಯ ದರ್ಜೆ ಸಹಾಯಕಿ ಸುಮಿತ್ರಾ ಸಿ.ಆರ್ ವರ್ಗಾವಣೆಗೊಳಿಸಲಾಗಿದೆ.
ಶಿಕ್ಷಕರ ವರ್ಗಾವಣೆ: ರಾಯಚೂರಿನಲ್ಲಿ ಶಿಕ್ಷಕರಿಲ್ಲದೇ ಮಕ್ಕಳ ಪರದಾಟ
ರಾಯಚೂರು: ಜಿಲ್ಲೆಯಲ್ಲಿ ಅನೇಕ ಶಿಕ್ಷಕರು ವರ್ಗಾವಣೆಗೊಳುತ್ತಿದ್ದಾರೆ. ಇದರಿಂದ ಜಿಲ್ಲೆಯ ಸರ್ಕಾರಿ ಶಾಲೆ ಮಕ್ಕಳು ಶಿಕ್ಷಕರಿಲ್ಲದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಜಿಲ್ಲೆಯ ಒಟ್ಟು 2224 ಶಾಲೆಗಳಲ್ಲಿ 4000 ಕ್ಕೂ ಹೆಚ್ಚು ಶಿಕ್ಷಕರು ಮಾತ್ರ ಇದ್ದಾರೆ. ಶಿಕ್ಷಕರು ವರ್ಗಾವಣೆಗೊಂಡು ಹೋಗುತ್ತಿರುವುದರಿಂದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲದಂತಾಗಿದೆ. ಹೀಗಾಗಿ ಬಡ ಮಕ್ಕಳು ಶಾಲೆಗೆ ಗೈರಾಗಿ ಪೋಷಕರ ಜೊತೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಈ ಸಮಸ್ಯೆ ಸಂಚಲನಕ್ಕೆ ಕಾರಣವಾಗ್ತಿದ್ದಂತೆಯೇ ವರ್ಗಾವಣೆಗೊಂಡ ಶಿಕ್ಷಕರನ್ನ ಬಿಡುಗಡೆ ಮಾಡೋ ಪ್ರಕ್ರಿಯೆಗೆ ತಾತ್ಕಾಲಿಕ ತಡೆಹಿಡಿದು ಆದೇಶ ಹೊರಡಿಸಲಾಗಿತ್ತು.
ಇದನ್ನೂ ಓದಿ: ನಾಳೆ ಅವಳಿ ನಗರಕ್ಕೆ ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಭೇಟಿ: ಧಾರವಾಡ, ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ಭಾಗಿ
ಜಿಲ್ಲೆಯ ಬಿಇಓಗಳು, ಡಿಡಿಪಿಐ ಸೇರಿ ಶಿಕ್ಷಕರಿಂದ ಹಣ ಪಡೆದು ಹಿಂದಿನ ದಿನಾಂಕಗಳನ್ನ ನಮೂದಿಸಿ ಶಿಕ್ಷಕರನ್ನ ವರ್ಗಾವಣೆ ಮಾಡ್ತಿದ್ದಾರೆ ಅಂತ ಎಸ್ಎಫ್ಯ ಸಂಘಟನೆ ಆರೋಪಿಸಿತ್ತು. ಈ ಬಗ್ಗೆ ತನಿಖೆ ನಡೆಸಬೇಕು. ಶಿಕ್ಷಕರ ಕೊರತೆಯಿಂದ ಈ ಭಾಗದ ಮಕ್ಕಳು ಶೈಕ್ಷಣಿಕ ವರ್ಷದಲ್ಲಿ ಗುಣಮಟ್ಟದ ಶಿಕ್ಷಣವಿಲ್ಲದೇ ಪರದಾಡುವಂತಾಗಿದೆ ಅಂತ ಆರೋಪಿಸಿದ್ದರು.
ಜಿಲ್ಲೆಯ 1 ರಿಂದ 10 ವರೆಗಿನ 2224 ಶಾಲೆಗಳಲ್ಲಿ 4 ಲಕ್ಷಕ್ಕೂ ಅಧಿಕ ಮಕ್ಕಳು ವಿದ್ಯಾಭ್ಯಾಸ ಮಾಡ್ತಿದ್ದಾರೆ. 2224 ಶಾಲೆಗಳ ಪೈಕಿ 10896 ಶಿಕ್ಷಕರ ಅವಶ್ಯಕತೆಯಿದೆ. ಆದರೆ ಜಿಲ್ಲೆಯಲ್ಲಿ ಬರೀ 6935 ಶಿಕ್ಷಕರ ಮೂಲಕ ಕಾರ್ಯನಿರ್ವಹಿಸಲಾಗುತ್ತಿದೆ. ಈ ಮಧ್ಯೆ ವರ್ಗಾವಣೆ ಶುರುವಾಗಿದ್ದರಿಂದ 6935 ಪೈಕಿ 2000 ಕ್ಕೂ ಹಚ್ಚು ಶಿಕ್ಷಕರ ವರ್ಗಾವಣೆಯಾಗಿದ್ದು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲದಂತಾಗಿದೆ.
ಇದನ್ನೂ ಓದಿ: ತುಮಕೂರು: ಪ್ರತಿಭಟನೆ ವೇಳೆ ಡಿವೈಎಸ್ಪಿ ಮೇಲೆ ಹಲ್ಲೆ, ಬಿಜೆಪಿ ಕಾರ್ಯಕರ್ತ ಅರೆಸ್ಟ್
ದೇವದುರ್ಗ-82, ಮಾನ್ವಿ-26,ಲಿಂಗಸೂಗೂರು-29 ರಾಯಚೂರು-09, ಸಿಂಧನೂರಿನ 14 ಶಾಲೆ ಸೇರಿ ಜಿಲ್ಲೆಯಾದ್ಯಂತ ಒಟ್ಟು 100 ಕ್ಕು ಹೆಚ್ಚು ಶಾಲೆಗಳಲ್ಲಿ ಖಾಯಂ ಶಿಕ್ಷಕರೇ ಇಲ್ಲದೇ ಶೂನ್ಯ ಶಿಕ್ಷಕರ ಸಂಖ್ಯೆ ಹೊಂದಿವೆ. ಇದು ಆತಂಕಕ್ಕೆ ಕಾರಣವಾಗಿದೆ. ಅತಿಥಿ ಶಿಕ್ಷಕರು ಶಾಲೆಗೆ ಬಂದರೆ ಮಾತ್ರ ಮಕ್ಕಳಿಗೆ ಪಾಠ, ಅತಿಥಿ ಶಿಕ್ಷಕರು ಕೈಕೊಟ್ಟರೇ ಆ ದಿನ ಇಡೀ ಶಾಲೆಗೆ ರಜೆ ಅನ್ನೊವಂತ ಸ್ಥಿತಿ ನಿರ್ಮಾಣವಾಗಿದೆ.
ಶಿಕ್ಷಕರ ಕೊರತೆಯಿಂದ ಮಕ್ಕಳಿಗೆ ಸಮಸ್ಯೆ ಆಗುತ್ತಿರುವ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಒಪ್ಪಿಕೊಂಡಿದ್ದಾರೆ. ಹಿಂದಿನ ಸರ್ಕಾರದ ಕ್ರಮದಿಂದ ಹೀಗಾಗಿದೆ. ಒಂದು ತಿಂಗಳ ಹಿಂದೆ ಆಗಿದ್ದಿದು. ಕೆಲ ಶಿಕ್ಷಕರಿಗೆ ರಿಲೀವಿಂಗ್ ಕೊಡಲೇ ಬೇಕಿತ್ತು ಇಲ್ದಿದ್ರೆ ಸಮಸ್ಯೆ ಆಗ್ತಿತ್ತು. ಇತ್ತ ಹಣ ಪಡೆದು ಅಧಿಕಾರಿಗಳು ಶಿಕ್ಷಕರನ್ನ ಬಿಡುಗಡೆಗೊಳಿಸುತ್ತಿದ್ದರು. ಸೂಕ್ತ ಕ್ರಮಕೈಗೊಳ್ಳಲಾಗುತ್ತೆ. ನಮ್ಮ ಸರ್ಕಾರದಲ್ಲಿ ಈ ವ್ಯವಸ್ಥೆ ಇಲ್ಲ ಅಂತ ಸ್ಪಷ್ಟಪಡಿಸಿದ್ದರು.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:51 pm, Thu, 29 February 24