ಬರಗಾಲ ಎದುರಿಸಲು ತುಮಕೂರು ಜಿಲ್ಲಾಡಳಿತ ಸಿದ್ಧತೆ: ಕುಡಿಯುವ ನೀರು ಒದಗಿಸಲು 1 ಕೋಟಿ ರೂ. ಬಿಡುಗಡೆ
ತುಮಕೂರು ಜಿಲ್ಲೆಯಲ್ಲಿ ಬರಗಾಲ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಜಿಲ್ಲೆಗೆ ಕುಡಿಯುವ ನೀರು ಒದಗಿಸಲು 1 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2ನೇ ಕಂತಿನಲ್ಲಿ ಪ್ರತಿ ತಾಲೂಕಿಗೂ 25 ಲಕ್ಷ ರೂ. ಹಣ ಬಿಡುಗಡೆ ಮಾಡಿದ್ದೇವೆ. ಹೊಸ ಬೋರ್‌ವೆಲ್‌ಗಾಗಿ ಮಾತ್ರ ಹಣ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ತುಮಕೂರು, ಫೆಬ್ರವರಿ 29: ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ನೀರಿಗಾಗಿ ಆಹಾಕಾರ ಶುರುವಾಗಿದೆ. ಜಿಲ್ಲೆಯಲ್ಲಿ ಸುಮಾರು 300 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರಿಗಾಗಿ ಪರದಾಟ ನಡೆಸುವ ಪರಿಸ್ಥಿತಿ ಬಂದಿದೆ. ಇನ್ನೂ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಸುಮಾರು 50 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಬರ (drought) ಬಂದಿದೆ. ಜಿಲ್ಲೆಯಲ್ಲಿ ಈಗಾಗಲೇ ಸರ್ಕಾರ ಹತ್ತು ತಾಲೂಕಳನ್ನ ಬರಪೀಡಿತ ಪ್ರದೇಶ ಅಂತಾ ಘೋಷಣೆ ಮಾಡಿದೆ. ಕೆಲ ರೈತರಿಗೆ ಪರಿಹಾರ ಕೂಡ ಸರ್ಕಾರ ನೀಡಿದೆ. ಇದರ ಜೊತೆಗೆ ಸದ್ಯ 300 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯಲು ನೀರಿಗಾಗಿ ಪರದಾಟ ನಡೆಸುವ ಪರಿಸ್ಥಿತಿ ಬಂದಿದೆ. ಅದರಲ್ಲೂ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಸುಮಾರು 50 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯಲು ನೀರಿಲ್ಲ ಅಂತಾ ಶಾಸಕ ಸುರೇಶ್ ಗೌಡ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಜಿಲ್ಲಾಡಳಿತ ಕೇವಲ 15 ಲಕ್ಷ ರೂ. ಹಣ ನೀಡಿದ್ದು ಯಾವ ಹಳ್ಳಿಗೆ ಬೋರವೆಲ್ ಕೊರೆಸಲು ಸಾಧ್ಯವಾಗುತ್ತೆ ಎಂದು ಆಕ್ರೋಶ ಹೊರಹಾಕಿದ್ದರು. ಸರ್ಕಾರ ದಿವಾಳಿಯಾಗಿದ್ದು ಜನರು ಪರದಾಡುತ್ತಿದ್ದಾರೆ ಅಂತಾ ವಾಗ್ದಾಳಿ ನಡೆಸಿದ್ದಾರೆ.
ಈಗಾಗಲೇ ಜಿಲ್ಲಾಡಳಿತ ಕೂಡ ಬರಗಾಲ ಎದರಿಸಲು ಸಕಲ ಸಿದ್ದತೆ ಮಾಡಿಕೊಂಡಿದ್ದು ಎಲ್ಲಾ ತಾಲೂಕಿಗೆ 25 ಲಕ್ಷ ನೂತನ ಬೊರವೆಲ್ ಕೊರೆಸಲು ಒಟ್ಟು 1 ಕೋಟಿ ರೂ. ಬಿಡುಗಡೆ ಮಾಡಲಾಗಿದೆಯಂತೆ. ಇದರ ಜೊತೆಗೆ ಈಗಾಗಲೇ 47 ಬೋರ್ ವೆಲ್ ಗಳು ಕೊರೆಸಿದ್ದು ಇದರಲ್ಲಿ ಐದು ಪೇಲ್ ಆಗಿವೆಯಂತೆ. ಖಾಸಗಿ ಬೊರ್ ವೆಲ್ ನಿಂದ ಎಂಟು ಕಡೆಯಿಂದ ನೀರು ಪಡೆಯುತ್ತಿದ್ದು ಅವರಿಗೆ ತಿಂಗಳಿಗೆ ಹಣ ನಿಗದಿ ಮಾಡಲಾಗಿದೆ.
ಇದನ್ನೂ ಓದಿ: ಹಾವೇರಿ ಮೈಲಾರಲಿಂಗನ ಜಾತ್ರೆ: ಭದ್ರಾ ಡ್ಯಾಂನಿಂದ ತುಂಗಭದ್ರ ಹೊಳೆಗೆ ಹರಿದ ನೀರು, ನದಿ ಪಾತ್ರದ ಜನರಿಗೆ ಎಚ್ಚರಿಕೆ
ಐದು ಕಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ಅಗತ್ಯ ಬಿದ್ದರೆ ಹೆಚ್ಚು ನೀಡಲು ಸೂಚಿಸಲಾಗಿದೆ. ಜೂನ್ವರೆಗೂ ಕೂಡ ಸುಮಾರು 557 ಕಡೆ ನೀರಿನ ಸಮಸ್ಯೆ ಬರಬಹುದು ಅಂತಾ ಮುಂಜಾಗ್ರತಾ ಕ್ರಮವಾಗಿ ನೀರಿನ ಸಮಸ್ಯೆ ನಿವಾರಿಸಲು ಸಜ್ಜಾಗಿದೆ. ರಾಸುಗಳಿಗೆ ಮೇವು ಕೂಡ ವಿತರಣೆ ಮಾಡಲಾಗುತ್ತಿದ್ದು ಮೇವು ಬೆಳೆಯುವ ರೈತರಿಗೆ ಹಣ ನಿಗದಿಪಡಿಸಲಾಗಿದೆ. ಅಲ್ಲದೇ ಒಟ್ಟು 13 ಕೋಟಿ 83 ಲಕ್ಷ ರೂ. ಹಣ ಜೊತೆಗೆ ಆಯಾ ತಹಶಿಲ್ದಾರ್ ಖಾತೆಯಲ್ಲಿ ಎಸ್ಡಿಆರ್ಎಫ್ ಫಂಡ್ನಲ್ಲಿ 36 ಕೋಟಿ ರೂ. ಹಣ ಇದ್ದು ಕುಡಿಯುವ ನೀರಿನ ಸಲುವಾಗಿ ಖರ್ಚು ಮಾಡಲು ಸೂಚಿಸಲಾಗಿದೆ ಎನ್ನಲಾಗಿದೆ.
ರಾಜ್ಯ ಸರ್ಕಾರದ ಬಳಿ ಹಣ ಇಲ್ಲ: ಸರ್ಕಾರ ದಿವಾಳಿಯಾಗಿದೆ: ಸುರೇಶ್ ಗೌಡ ಆರೋಪ
ಶಾಸಕ ಸುರೇಶ್ ಗೌಡ ಪ್ರತಿಕ್ರಿಯೆ ನೀಡಿದ್ದು, ರಾಜ್ಯ ಸರ್ಕಾರದ ಬಳಿ ಹಣ ಇಲ್ಲ, ಸರ್ಕಾರ ದಿವಾಳಿಯಾಗಿದೆ. ಬರಪರಿಹಾರ ಬೋರ್ ವೆಲ್ ಗಳಿಗೆ ಹಣ ನೀಡಲು ಆಗುತ್ತಿಲ್ಲ. ಕುಡಿಯುವ ನೀರಿಗೆ ಹಣ ಇಲ್ಲ. ಒಂದು ತಾಲೂಕಿಗೆ ಡಿಸಿಯವರು 15 ಲಕ್ಷ ರೂ. ಕೊಟ್ಟಿದ್ದಾರೆ. ಹಳೆ ಬೊರವೆಲ್ಗೆ ಡ್ರೀಲ್ ಮಾಡಲು ಹಣ ಕೊಟ್ಟಿದ್ದಾರೆ. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಸುಮಾರು 50 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉದ್ಬವಿಸಿದೆ. ಒಂದು ರೂಪಾಯಿ ಹಣ ಕೊಟ್ಟಿಲ್ಲ. ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ ಅಂದರೆ ಏನು ಮಾಡುವುದು ಎಂದು ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ವಾಟರ್ ಟ್ಯಾಂಕರ್ ಮಾಫಿಯಾ ಕಡಿವಾಣಕ್ಕೆ ಮುಂದಾದ ಬಿಬಿಎಂಪಿ: ಮಾ.7ರೊಳಗೆ ವಾಟರ್ ಟ್ಯಾಂಕರ್ ನೋಂದಣಿ ಕಡ್ಡಾಯ
ದಿನದಿಂದ ದಿನಕ್ಕೆ ಕುಡಿಯುವ ನೀರಿನ ಪರಿಸ್ಥಿತಿ ಬಿಗಾಡಿಸುತ್ತಿದ್ದು, ಜಿಲ್ಲಾಡಳಿತ ಕೊರತೆ ನಿಗಿಸಲು ತಯಾರಿ ಮಾಡಿಕೊಂಡಿದೆ. ಆದರೆ ಕೆಲವೆಡೆ ಗ್ರಾಮದಿಂದ ಬಾವಿ ಕೆರೆಗಳಿಗೆ ಹೋಗಿ ನೀರು ತರುವ ಪರಿಸ್ಥಿತಿ ಬಂದಿದ್ದು ಜಿಲ್ಲಾಡಳಿತ ಸಮರ್ಪಕವಾಗಿ ನಿಭಾಯಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:12 pm, Thu, 29 February 24