ತುಮಕೂರು: ಸಾಲ ತೀರಿಸಲಾಗದೆ ಮಗಳನ್ನೇ ಮಾರಾಟ ಮಾಡಿದ ಚಿಕ್ಕಮ್ಮ

| Updated By: ವಿವೇಕ ಬಿರಾದಾರ

Updated on: Jul 12, 2024 | 9:49 AM

ಆಂಧ್ರ ಪ್ರದೇಶದ ಹಿಂದೂಪುರದಲ್ಲಿ ವಾಸವಾಗಿದ್ದ ಸುಜಾತಾ ಎಂಬುವರನ್ನು ಸಾಲ ತೀರಿಸಲಾಗದೆ ಮಗಳನ್ನು 35 ಸಾವಿರ ರೂ.ಗೆ ಶ್ರೀರಾಮುಲು ಎಂಬುವರಿಗೆ ಮಾರಾಟ ಮಾಡಿದ್ದಾರೆ. ಬಾಲಕಿ ತುಮಕೂರು ನಗರದ ದಿಬ್ಬೂರು ನಿವಾಸಿಯಾಗಿದ್ದಾಳೆ. ಬಾಲಕಿ ಸದ್ಯ ಬಾಲ‌ ಮಂದಿರದಲ್ಲಿ ಇದ್ದಾಳೆ.

ತುಮಕೂರು: ಸಾಲ ತೀರಿಸಲಾಗದೆ ಮಗಳನ್ನೇ ಮಾರಾಟ ಮಾಡಿದ ಚಿಕ್ಕಮ್ಮ
ತುಮಕೂರು ನಗರ ಪೊಲೀಸ್​ ಠಾಣೆ
Follow us on

ತುಮಕೂರು, ಜುಲೈ 12: ಸಾಲ ತೀರಿಸಲಾಗದೆ ಚಿಕ್ಕಮ್ಮ ಮಗಳನ್ನು ಮಾರಾಟ ಮಾಡಿದ್ದಾಳೆ. ಆಂಧ್ರ ಪ್ರದೇಶದ (Andra Pradesh) ಹಿಂದೂಪುರದಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿ ತಾಯಿ ಚೌಡಮ್ಮ ತುಮಕೂರು (Tumakur) ನಗರದ ದಿಬ್ಬೂರದಲ್ಲಿ ವಾಸಿಸುತ್ತಿದ್ದಾಳೆ. ಚೌಡಮ್ಮ ತನ್ನ ಮಗಳನ್ನು ತಂಗಿ ಸುಜಾತಾ ವಾಸವಿದ್ದ ಹಿಂದೂಪುರದ ಮನೆಗೆ ಕಳುಹಿಸಿದ್ದಳು. ಹಿಂದೂಪುರ ಚೌಡಮ್ಮ ಮತ್ತು ಸುಜಾತಾರ ತವರು ಮನೆಯಾಗಿದೆ. ಸುಜಾತಾ ಹಿಂದೂಪುರದಲ್ಲಿ ಶೀರಾಮುಲು ಎಂಬುವರ ಬಳಿ ಸಾಲ ಮಾಡಿದ್ದಳು.

ಈ ಸಾಲ ತೀರಿಸಲಾಗದೆ ಚಿಕ್ಕಮ್ಮ ಸುಜಾತಾ ಬಾಲಕಿಯನ್ನು ಶ್ರೀರಾಮುಲುಗೆ 35 ಸಾವಿರ ರೂ.ಗೆ ಮಾರಾಟ ಮಾಡಿದ್ದಳು. ಶ್ರೀರಾಮುಲು ಬಾಲಕಿಯನ್ನು ಬಾತುಕೋಳಿ ಮೇಯಿಸಲು ಇರಿಸಿಕೊಂಡಿದ್ದನು. ಬಾಲಕಿ ಕರೆತರಲು ಚೌಡಮ್ಮ ಹಿಂದೂಪುರಕ್ಕೆ ಹೋದಾಗ ವಿಷಯ ತಿಳಿದಿದೆ. ಬಳಿಕ, ಚೌಡಮ್ಮ ತನ್ನ ಪುತ್ರಿಯನ್ನು ಕಳಿಸಿಕೊಡುವಂತೆ ಶ್ರೀರಾಮುಲು ಬಳಿ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಗೃಹ ಸಚಿವರ ತವರು ಕ್ಷೇತ್ರ ತುಮಕೂರಿನಲ್ಲೇ ಮಕ್ಕಳ ಮಾರಾಟ ಜಾಲ ಪತ್ತೆ: 6 ಜನರ ಬಂಧನ

ಈ ವೇಳೆ ಶ್ರೀರಾಮುಲು ಬಾಲಕಿಯನ್ನು ಖರೀದಿಸಿದ್ದು, ಸಾಲದ ಹಣ ಕೊಟ್ಟು ಕರೆದೊಯ್ಯುವಂತೆ ಹೇಳಿದ್ದಾರೆ. ನಂತರ ಬಾಲಕಿಯ ತಾಯಿ ಚೌಡಮ್ಮ ತುಮಕೂರಿಗೆ ಬಂದು, ಮಗಳ ಸ್ಥಿತಿಯ ಬಗ್ಗೆ ಕಾರ್ಮಿಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧರಿಸಿ ಕಾರ್ಮಿಕ ಅಧಿಕಾರಿಗಳು ಪೊಲೀಸರಿ ವಿಷಯ ತಿಳಿಸಿದ್ದಾರೆ. ಕೂಡಲೆ ತುಮಕೂರು ಪೊಲೀಸರು ಹಿಂದೂಪುರಕ್ಕೆ ಹೋಗಿ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಸದ್ಯ ಬಾಲಕಿಯನ್ನು ಜಿಲ್ಲಾ ಬಾಲ‌ ಮಂದಿರದಲ್ಲಿ ಇರಿಸಲಾಗಿದೆ. ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿಯಾಗಿರುವ ಆರೋಪಿಗಳಿಗಾಗಿ ಪೊಲೀಸರಿಂದ ಶೋಧ ಕಾರ್ಯ ನಡೆಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ