ಸಾಲ ತೀರಿಸಲಾಗದೇ ಅಕ್ಕನ ಮಗಳನ್ನೇ ಮಾರಾಟ ಮಾಡಿದ ಚಿಕ್ಕಮ್ಮ! ತಾಯಿ ಸ್ವಪ್ರಜ್ಞೆಯಿಂದ ಬಾಲಕಿ ವಾಪಾಸ್
ಇತ್ತಿಚೆಗೆ ತುಮಕೂರು ಜಿಲ್ಲೆಯಲ್ಲಿ ಮಕ್ಕಳ ಮಾರಾಟ ಜಾಲ ಇರೋದು ಪತ್ತೆಯಾಗಿತ್ತು. ಅವರನ್ನು ಹಿಡಿದು ಪೊಲೀಸರು ಜೈಲಿಗೂ ಕಳುಹಿಸಿದ್ದರು. ಆ ಪ್ರಕರಣ ಮಾಸುವ ಮುನ್ನವೇ ಬಾಲಕಿಯನ್ನ ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಅದು ಕೂಡ ಸ್ವಂತ ಚಿಕ್ಕಮಳೆ ಸಾಲ ತೀರಿಸಲಾಗದೇ ಮಾರಾಟ ಮಾಡಿದ್ದು, ತನ್ನ ತಾಯಿಯ ಸ್ವಪ್ರಜ್ಞೆಯಿಂದ 11 ವರ್ಷದ ಬಾಲಕಿ ವಾಪಸ್ ಮನೆಗೆ ಹಿಂತಿರುಗಿದ್ದಾಳೆ. ಏನಿದು ಅಂತೀರಾ? ಈ ಸ್ಟೋರಿ ಓದಿ.
ತುಮಕೂರು, ಜು.12: ಕಲ್ಪತರು ನಾಡು ತುಮಕೂರು(Tumakuru) ಜಿಲ್ಲೆಯಲ್ಲಿ ಇತ್ತೀಚೆಗೆ ಹಣದಾಸೆಗೆ ಚಿಕ್ಕ ಮಕ್ಕಳನ್ನ ಕಿಡ್ನಾಪ್ ಮಾಡಿ ಮಾರಾಟ ಮಾಡುವ ಜಾಲವೊಂದನ್ನ ಪೊಲೀಸರು ಪತ್ತೆಹಚ್ಚಿ ಜೈಲಿಗೆ ಕಳುಹಿಸಿದ್ದರು. ಆ ಪ್ರಕರಣ ಆಗಿ ಕೆಲವೇ ದಿನಕ್ಕೆ ಸ್ವಂತ ಚಿಕ್ಕಮಳೆ ತನ್ನ ಸಾಲ ತೀರಿಸಲಾಗದೇ ಮನೆಗೆ ಬಂದಿದ್ದ 11 ವರ್ಷದ ಅಕ್ಕನ ಮಗಳನ್ನು ಮಾರಾಟ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಅಕ್ಕನ ಮಗಳನ್ನೇ ಮಾರಾಟ ಮಾಡಿದ ಚಿಕ್ಕಮ್ಮ
ಅಂದಹಾಗೇ ತುಮಕೂರಿನ ದಿಬ್ಬೂರು ನಿವಾಸಿಯಾದ ಚೌಡಮ್ಮ, ತನ್ನ ಮಗಳನ್ನ ಆಂಧ್ರ ಪ್ರದೇಶದ ಹಿಂದೂಪುರಕ್ಕೆ ತಂಗಿ ಸುಜಾತಳ ಮನೆಗೆ ಬಾಣಂತನಕ್ಕೆಂದು ಕಳಿಸಿದ್ದಳು. ಬಾಣಂತನ ಮುಗಿಸಿ ವಾಪಸ್ ಮಗಳು ಬರಲಿಲ್ಲ. ಹೀಗಾಗಿ ಚೌಡಮ್ಮ ಹಿಂದೂಪುರಕ್ಕೆ ಹೋದಾಗ ತನ್ನ ಮಗಳು ಇಲ್ಲದೆ ಇರುವುದು ತಿಳಿದಿದೆ. ಚೌಡಮ್ಮ, ಮಗಳ ಇಲ್ಲದನ್ನ ಕಂಡು ಗಾಬರಿಯಾಗಿದ್ದಾಳೆ. ಈ ವೇಳೆ ಸುಜಾತ ‘ನಾನು ಸಾಲ ಮಾಡಿಕೊಂಡಿದ್ದೆ ಸಾಲ ತೀರಿಸಲಾಗದೇ 35 ಸಾವಿರಕ್ಕೆ ಮಗಳನ್ನ ಜೀತಕ್ಕಾಗಿ ಮಾರಾಟ ಮಾಡಿರುವುದಾಗಿ ಹೇಳಿದ್ದಾಳೆ.
ಇದನ್ನೂ ಓದಿ:ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನ; ಇಬ್ಬರು ಮಕ್ಕಳು ಸಾವು, ತಾಯಿ ರಕ್ಷಣೆ
‘ಹಿಂದೂಪುರದ ಶ್ರೀರಾಮುಲು ಎಂಬ ವ್ಯಕ್ತಿ ಬಾತುಕೋಳಿ ಮೇಯಿಸಲು ಒತ್ತೆಯಾಳಾಗಿ ಇರಿಸಿಕೊಂಡಿದ್ದನಂತೆ. ಈ ವಿಚಾರ ತಿಳಿದ ಚೌಡಮ್ಮ, ಮಗಳನ್ನ ತನ್ನೊಂದಿಗೆ ಕಳಿಸುವಂತೆ ಬೇಡಿಕೊಂಡರೂ ಕೂಡ ಶ್ರೀ ರಾಮುಲು ಒಪ್ಪಿರಲಿಲ್ಲ. ಹಣ ನೀಡಿ ಬಾಲಕಿಯನ್ನ ಕರೆದುಕೊಂಡು ಹೋಗು ಎಂದು ಹೇಳಿದ್ದನಂತೆ. ಇನ್ನು ಚೌಡಮ್ಮ ವಾಪಸ್ ತುಮಕೂರಿಗೆ ಬಂದು ಮಗಳ ಸ್ಥಿತಿ ಬಗ್ಗೆ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾಳೆ. ಕೂಡಲೇ ಕಾರ್ಮಿಕ ಇಲಾಖೆ ಅಧಿಕಾರಿ ತೇಜಾವತಿ ಜಿಲ್ಲಾ ಎಸ್ಪಿ ಅಶೋಕ್ರವರಿಗೆ ಮಾಹಿತಿ ನೀಡಿ ಬಾಲಕಿಯನ್ನ ರಕ್ಷಿಸಿ ಕರೆತಂದಿದ್ದಾರೆ.
ಈ ಘಟನೆ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ. ಒಟ್ಟಾರೆ ಸಾಲಕ್ಕೆ ಹೆದರಿ ತನ್ನ ಅಕ್ಕನ ಮಗಳನ್ನೆ ಮಾರಾಟ ಮಾಡಿದ್ದ ಚಿಕ್ಕಮ್ಮ, ಇತ್ತ ಸ್ವಪ್ರಜ್ಞೆಯಿಂದ ತನ್ನ ಮಗಳನ್ನ ರಕ್ಷಣೆ ಮಾಡುವಲ್ಲಿ ತಾಯಿ ಯಶಸ್ವಿ ಆಗಿದ್ದಾಳೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ