ತುಮಕೂರು: ನಾಪೇಡ್ ಕೇಂದ್ರದ ಮೂಲಕ ರೈತರ ಉಂಡೆ ಕೊಬ್ಬರಿ (coconut) ಖರೀದಿ ಮಾಡಲು ಸರ್ಕಾರ ಆದೇಶಿಸಿದ್ದು, ಆ ಮೂಲಕ ಕೊಬ್ಬರಿ ಬೆಳೆಗಾರರ ಬೆಂಬಲಕ್ಕೆ ಕೇಂದ್ರ ಸರ್ಕಾರ ನಿಂತಿದೆ. ಪ್ರತಿ ಕ್ವಿಂಟಾಲ್‌ಗೆ 11.750 ರೂ. ಬೆಂಬಲ ಬೆಲೆ ನೀಡಿ ಖರೀದಿಸಲು ಸರ್ಕಾರ ಮುಂದಾಗಿದೆ. ಕೊಬ್ಬರಿ ಬೆಲೆ 10 ಸಾವಿರ ರೂ. ಗೆ ಕುಸಿದಿದ್ದರಿಂದ ಬೆಂಬಲ ಬೆಲೆ ಘೋಷಿಸುವಂತೆ ರೈತರು ಒತ್ತಾಯಿಸಿದ್ದರು. ಬೆಂಬಲ ಬೆಲೆ ನೀಡಿ ನಾಫೆಡ್ ಮೂಲಕ ಕೊಬ್ಬರಿ ಖರೀದಿಸುವುದಾಗಿ ತಿಪಟೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ಕೊಟ್ಟಿದ್ದರು. 6 ತಿಂಗಳ ಕಾಲ 54,750 ಮೆಟ್ರಿಕ್ ಟನ್ ಕೊಬ್ಬರಿ ರೈತರಿಂದ ಖರೀದಿ ಮಾಡಲು ಸರ್ಕಾರ ಕ್ರಮಕೈಗೊಂಡಿದೆ.
ಕಳೆದ ವರ್ಷ ಕ್ವಿಂಟಲ್ಗೆ 18 ಸಾವಿರ ರೂ. ಇದ್ದ ಕೊಬ್ಬರಿ ಬೆಲೆ, ಇತ್ತೀಚೆಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆಗಿಂತ ತೀವ್ರ ಕುಸಿತ ಉಂಟಾಗಿ ತೆಂಗು ಬೆಳೆಗಾರರಲ್ಲಿ ತೀರ್ವ ಆತಂಕ ಉಂಟು ಮಾಡಿತ್ತು. ಇತ್ತೀಚೆಗೆ ಕ್ವಿಂಟಲ್ ಕೊಬ್ಬರಿ ಬೆಲೆ 18 ಸಾವಿರವರೆಗಿದ್ದು, ಬೆಳೆಗಾರರು ಒಂದು ರೀತಿಯಲ್ಲಿ ನೆಮ್ಮದಿ ಆಗಿದ್ದರು. ಆದರೆ ಕಳೆದ 4-5 ತಿಂಗಳಿಂದ ಕೊಬ್ಬರಿ ಬೆಲೆಯಲ್ಲಿ
ಇಳಿಮುಖವಾಗಿ 13 ಸಾವಿರ ರೂ. ಗೆ ಬಂದಿತ್ತು. ಮತ್ತೆ ಕೆಲ ಒಂದೆರಡು ತಿಂಗಳಿಂದ ಕೊಬ್ಬರಿ ಬೆಲೆ ಕುಸಿಯುತ್ತಲೇ ಬಂದಿದ್ದು, ಕನಿಷ್ಠ ದರ 10, 200ಕ್ಕೆ ಬಂದಿತ್ತು. ಇದು ವರ್ತಕರು ಹಾಗೂ ತೆಂಗು ಬೆಳೆಗಾರರಲ್ಲಿ ತೀವ್ರ ಆತಂಕಕ್ಕೂ ಕಾರಣವಾಗಿತ್ತು.
ಇದನ್ನೂ ಓದಿ: Wheat Price: ಗೋಧಿ ದರ ಭಾರೀ ಏರಿಕೆ, ನಿಯಂತ್ರಿಸಲು ಸರ್ಕಾರ ಸಾಹಸ
ಕೇಂದ್ರ ಸರ್ಕಾರ ಕೊಬ್ಬರಿ ಬೆಂಬಲ ಬೆಲೆಯನ್ನು 11 ಸಾವಿರಕ್ಕೆ ಈ ಹಿಂದೆ ನಿಗದಿಪಡಿಸಿತ್ತು. ಕಳೆದ ಕೆಲ ದಿನಗಳಿಂದ ಈ ಬೆಲೆಯನ್ನು 11, 750 ರೂ. ಏರಿಸಿದ್ದರೂ. ಆದರೆ ಇದು ಸರ್ಕಾರ ಆದೇಶವಾಗಿ ಇನ್ನು ಕಾರ್ಯರೂಪಕ್ಕೆ ಬಂದಿರಲಿಲ್ಲ. ಸದ್ಯ ಕೇಂದ್ರ ಸರ್ಕಾರ ಬೆಂಬಲ ಬೆಲೆಯನ್ನು ಘೋಷಿಸಿದ್ದು, ಇದು ತೆಂಗು ಬೆಳೆಗಾರರಿಗೆ ಖುಷಿ ತಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:56 pm, Fri, 27 January 23