ಕಣ್ತಪ್ಪಿಸಿ 6 ಕಡೆ ಬಾಲ್ಯ ವಿವಾಹ ಯತ್ನ, ಇಲಾಖೆ ದಾಳಿಯಿಂದ ಮಕ್ಕಳೆಲ್ಲ ಬಚಾವ್
ತುಮಕೂರು: ಲಾಕ್ಡೌನ್ ವೇಳೆಯಲ್ಲೂ ದುರುಳರು ಮಕ್ಕಳ ಮೇಲಿನ ದೌರ್ಜನ್ಯ ನಡೆಸಿರೋದು ಬೆಳಕಿಗೆ ಬಂದಿದೆ. ತುಮಕೂರು ಜಿಲ್ಲೆಯಲ್ಲಿ 12 ಮಕ್ಕಳ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ. ಇನ್ನು ವಿಷಯ ತಿಳಿದ ತಕ್ಷಣ ಅಧಿಕಾರಿಗಳು ಪೊಲೀಸರ ಸಹಕಾರದಿಂದ ದುರುಳರ ಹೆಡೆಮುರಿಕಟ್ಟಿದ್ದಾರೆ. ಅಲ್ಲದೆ ಮಕ್ಕಳನ್ನು ದೌರ್ಜನ್ಯದಿಂದ ಪಾರು ಮಾಡಿದ್ದಾರೆ. ಜಿಲ್ಲೆಯ ವಿವಿಧೆಡೆ ಆರು ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ಬಾಲ್ಯ ವಿವಾಹಗಳು ನಡೆಯುತ್ತಿರೋ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ತೆರಳಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮದುವೆ ಎಂಬ […]

ತುಮಕೂರು: ಲಾಕ್ಡೌನ್ ವೇಳೆಯಲ್ಲೂ ದುರುಳರು ಮಕ್ಕಳ ಮೇಲಿನ ದೌರ್ಜನ್ಯ ನಡೆಸಿರೋದು ಬೆಳಕಿಗೆ ಬಂದಿದೆ. ತುಮಕೂರು ಜಿಲ್ಲೆಯಲ್ಲಿ 12 ಮಕ್ಕಳ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ. ಇನ್ನು ವಿಷಯ ತಿಳಿದ ತಕ್ಷಣ ಅಧಿಕಾರಿಗಳು ಪೊಲೀಸರ ಸಹಕಾರದಿಂದ ದುರುಳರ ಹೆಡೆಮುರಿಕಟ್ಟಿದ್ದಾರೆ. ಅಲ್ಲದೆ ಮಕ್ಕಳನ್ನು ದೌರ್ಜನ್ಯದಿಂದ ಪಾರು ಮಾಡಿದ್ದಾರೆ.
ಜಿಲ್ಲೆಯ ವಿವಿಧೆಡೆ ಆರು ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ಬಾಲ್ಯ ವಿವಾಹಗಳು ನಡೆಯುತ್ತಿರೋ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ತೆರಳಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮದುವೆ ಎಂಬ ಬಂಧನಕ್ಕೆ ಒಳಗಾಗುತ್ತಿದ್ದ ಬಾಲಕಿಯರನ್ನು ಪಾರು ಮಾಡಿದ್ದಾರೆ. ಆರು ಮಂದಿ ಬಾಲಕಿಯರ ಪೋಷಕರಿಗೆ ಕೌನ್ಸಲಿಂಗ್ ನಡೆಸಿ ಮದುವೆ ಮಾಡದಂತೆ ಮನಪರಿವರ್ತನೆ ಮಾಡಲಾಗಿದೆ.
ಅಲ್ಲದೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ. ಎಲ್ಲಾ ಬಾಲಕಿಯರು 16 ವರ್ಷ ವಯೋಮಾನದವರಾಗಿದ್ದಾರೆ ಗುಬ್ಬಿ, ತುರುವೇಕೆರೆ, ಕುಣಿಗಲ್, ಪಾವಗಡ, ಶಿರಾ ತಾಲೂಕುಗಳಲ್ಲಿ ಈ ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ಇನ್ನುಳಿದಂತೆ ಅನ್ಯ ಆರು ವಿವಿಧ ದೌರ್ಜನ್ಯ ಪ್ರಕರಣಗಳಿಂದ ನಲುಗಿದ್ದ ಮಕ್ಕಳನ್ನು ರಕ್ಷಿಸಲಾಗಿದೆ. ಒಟ್ಟಾರೆ ಕೊರೊನಾ ಭೀತಿ ನಡುವೆಯೂ ದೌರ್ಜನ್ಯಕ್ಕೆ ಒಳಗಾಗಿದ್ದ ಮಕ್ಕಳನ್ನು ಪಾರುಮಾಡುವಲ್ಲಿ ಮುಂದಾಗಿರೋದು ಪ್ರಶಂಸೆಗೆ ಪಾತ್ರವಾಗಿದೆ.

Published On - 2:58 pm, Thu, 11 June 20




