ಫೆ 1ರಿಂದ ಕೊಬ್ಬರಿ ಖರೀದಿ: ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕೇಂದ್ರ ಮಾಡಿದ್ದೇನು ಗೊತ್ತಾ?

| Updated By: ಗಂಗಾಧರ​ ಬ. ಸಾಬೋಜಿ

Updated on: Jan 24, 2024 | 3:37 PM

ತುಮಕೂರಿನಲ್ಲಿ ಆಯೋಜಸಿದ್ದ ಕೊಬರಿ ಉಂಡೆ ಖರೀದಿ ಕೇಂದ್ರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕೇಂದ್ರ ಸರ್ಕಾರ ಹೆಚ್ಚು ಉಂಡೆ ಕೊಬ್ಬರಿ ಖರೀದಿ ಮಾಡಲಿದೆ. ರೈತರ ಜೊತೆ ಕೇಂದ್ರ ಸರ್ಕಾರ ಇದೆ. ಫೆಬ್ರವರಿ 1ರಿಂದ ಕೊಬ್ಬರಿ ಖರೀದಿ ಮಾಡಲು ಅವಕಾಶ ನೀಡಲಾಗಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಬಯೋಮೆಟ್ರಿಕ್​ ಆಧಾರದ ಮೇಲೆ ಕೊಬ್ಬರಿ ಖರೀದಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.

ಫೆ 1ರಿಂದ ಕೊಬ್ಬರಿ ಖರೀದಿ: ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕೇಂದ್ರ ಮಾಡಿದ್ದೇನು ಗೊತ್ತಾ?
ಕೇಂದ್ರ ಸಚಿವೆ ಶೋಭಾ
Follow us on

ತುಮಕೂರು, ಜನವರಿ 24: ಫೆಬ್ರವರಿ 1ರಿಂದ ಕೊಬ್ಬರಿ ಖರೀದಿ ಮಾಡಲು ಅವಕಾಶ ನೀಡಲಾಗಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಬಯೋಮೆಟ್ರಿಕ್​ ಆಧಾರದ ಮೇಲೆ ಕೊಬ್ಬರಿ ಖರೀದಿಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹೇಳಿದ್ದಾರೆ. ನಗರದಲ್ಲಿ ಆಯೋಜಸಿದ್ದ ಕೊಬರಿ ಉಂಡೆ ಖರೀದಿ ಕೇಂದ್ರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾ.ಪಂ.ಕಚೇರಿಗಳಲ್ಲಿ ಕರಪತ್ರ ಅಂಟಿಸಿ ರೈತರಿಗೆ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ಹೆಚ್ಚು ಉಂಡೆ ಕೊಬ್ಬರಿ ಖರೀದಿ ಮಾಡಲಿದೆ. ರೈತರ ಜೊತೆ ಕೇಂದ್ರ ಸರ್ಕಾರ ಇದೆ ಎಂದಿದ್ದಾರೆ.

ಕೋಲ್ಡ್​​ ಸ್ಟೋರೇಜ್ ಸ್ಥಾಪನೆಗೆ ಮೋದಿ ಸರ್ಕಾರ ಹಣ ಮೀಸಲಿಟ್ಟಿದೆ

ಹಣ್ಣು, ತರಕಾರಿಗಳನ್ನು ಕೋಲ್ಡ್​​​​​ ಸ್ಟೋರೇಜ್​​ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ವೈಜ್ಞಾನಿಕವಾಗಿ ಹಣ್ಣು, ತರಕಾರಿ ಸಂಗ್ರಹಿಸಿಡಲು ಸೂಕ್ತ ವ್ಯವಸ್ಥೆ ಇಲ್ಲ. ಕೋಲ್ಡ್​​ ಸ್ಟೋರೇಜ್ ಸ್ಥಾಪನೆಗೆ ಮೋದಿ ಸರ್ಕಾರ ಹಣ ಮೀಸಲಿಟ್ಟಿದೆ. ರಾಜ್ಯದಲ್ಲಿ ಕೋಲ್ಡ್​ ಸ್ಟೋರೇಜ್​ ಸ್ಥಾಪನೆಗೆ ಕೇಂದ್ರ ಹಣ ನೀಡಲಿದೆ. ನಮ್ಮಲ್ಲಿ ಮಾರ್ಕೆಟಿಂಗ್​ ಮಾಡುವುದು ಕಡಿಮೆಯಾಗಿದೆ. ಕೊಬ್ಬರಿಯನ್ನು ಬೇರೆ ಬೇರೆ ರೂಪದಲ್ಲಿ ಮಾಡಿಕೊಡಬೇಕಿದೆ. ಕೊಬ್ಬರಿ ಎಣ್ಣೆಯನ್ನು ಯುರೋಪ್​ನಲ್ಲಿ ಕ್ಯಾಪ್ಸಿಂಗ್ ಮಾಡುತ್ತಾರೆ. ಆಹಾರ ಪೂರೈಕೆ ಪ್ರಕ್ರಿಯೆಯಲ್ಲಿ ತಂತ್ರಜ್ಞಾನ ಬಳಕೆ ಅಗತ್ಯವಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಂಗನವಾಡಿಗಳಿಗೆ ಬಾಡಿಗೆ ಕಟ್ಟಲು ಯೋಗ್ಯತೆ ಇಲ್ಲದ ರಾಜ್ಯ ಸರ್ಕಾರ: ಆರ್ ಅಶೋಕ್ ಕಿಡಿ

ಕೃಷಿ ಕೆಲಸ ಹೆಚ್ಚಿಸಲು ರಾಜ್ಯ ಸರ್ಕಾರ ಕೆಲಸ ಮಾಡಬೇಕಿದೆ. ಟಾರ್ಗೆಟ್​ಗಿಂತ ಹೆಚ್ಚು ಉಂಡೆ ಕೊಬರಿ ಖರೀದಿಗೆ ಹೆಚ್ಚು ಒತ್ತು ನೀಡಬೇಕಿದೆ. ಕೇಂದ್ರ ಸರ್ಕಾರ ಬರಗಾಲ ಹಣ ಕೊಡಿಸಿ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಕೇಂದ್ರ ಹಾಗೂ ರಾಜ್ಯ ಜೊತೆಗೆ ಜಂಟಿ ಖಾತೆ ಆಗಬೇಕಿದೆ. ಇನ್ನೂ ಯಾವುದೇ ಯೋಜನೆ ಬಂದರು ಜಂಟಿಯಾಗಿ ಆಗಬೇಕಿದೆ. 60%-40 % ಇದೆ ಹೀಗಾಗಿ ನೀತಿ ಆಯೋಗ ಸೂಚನೆ ನೀಡಿದೆ.

ಇದನ್ನೂ ಓದಿ: ನಾಳೆಯಿಂದ 2 ದಿನ ಮೈಸೂರು, ಕೊಡಗು ಜಿಲ್ಲಾ ಪ್ರವಾಸ ಕೈಗೊಂಡ ಸಿಎಂ ಸಿದ್ದರಾಮಯ್ಯ

ಜಂಟಿ‌ ಖಾತೆ ಯಾವ ರಾಜ್ಯ ಸರ್ಕಾರ ಮಾಡುತ್ತಾರೆ ಆಗ ಕೂಡಲೇ ಆ ಖಾತೆಗೆ ಹಣ ಬರಲಿದೆ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವರು ಹೇಳಿದ್ದಾರೆ. 2047 ಕ್ಕೆ ಭಾರತ ನಂಬರ್ ಒನ್ ಆಗಬೇಕಿದೆ. ಇದು ಪ್ರಧಾನಿಯವರ ಸಂಕಲ್ಪ. ನಾವು ಯಾರಿಗೂ ಎಲ್ಲಿಯೂ ತಾರತಮ್ಯ ಮಾಡಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೊಂಡಿಯಾಗಿ ಕೆಲಸ ಮಾಡಿದ್ದರೇ ಅಭಿವೃದ್ಧಿ ಸಾಧ್ಯ. ಇದು ಯಾವುದೇ ರಾಜಕೀಯ ಇಲ್ಲ ಎಂದಿದ್ದಾರೆ.

ಕೇಂದ್ರದ ನೀತಿ ಆಯೋಗದ ಸಭೆಗಳಿಗೆ ಮಂತ್ರಿಗಳನ್ನು ಕರೆಯುವ ಪ್ರಯತ್ನ ಮಾಡಿದ್ದೇವೆ. ತೆಂಗಿನಿಂದ ಹಾಲು ಚೀಪ್ಸ್ ಸೇರಿದಂತೆ ಆಹಾರ ಪದಾರ್ಥಗಳನ್ನು ಮಾಡಬೇಕಿದೆ. ಇದಕ್ಕೆ ಮತ್ತಷ್ಟು ಬೇಡಿಕೆ ಬರಲಿದೆ. ತಮಿಳುನಾಡಿನಲ್ಲಿ ತೆಂಗಿನ ನಾರಿನ ಪುಡಿಯನ್ನ ಬಳಕೆ‌ಮಾಡುತ್ತಾರೆ. ಅಲ್ಲಿನ ನರ್ಸರಿಗಳಲ್ಲಿ ಬಳಸುತ್ತಾರೆ. ಹೊರ ದೇಶಗಳಿಗೆ ನಾರಿನ‌ ಪುಡಿ ಹೋಗುತ್ತದೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.