ಡಾ.ಜಿ.ಪರಮೇಶ್ವರ್ ಜೊತೆ ಫೋಟೋ ತೆಗೆಸಿಕೊಳ್ಳಲು ಜಡೆ ಹಿಡಿದು ಜಗಳವಾಡಿದ ಕಾಂಗ್ರೆಸ್ ಮಹಿಳಾ ಮಣಿಯರು, ಮುಂದೇನಾಯ್ತ?

| Updated By: ಆಯೇಷಾ ಬಾನು

Updated on: Jun 08, 2022 | 1:58 PM

ಡಾ.ಜಿ.ಪರಮೇಶ್ವರ್ ತುಮಕೂರಿನ ಜೈಲಿಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಪರಮೇಶ್ವರ್ ಜೊತೆ ಫೋಟೋಗೆ ನಿಂತ‌ ಮಹಿಳಾ ಕಾರ್ಯಕರ್ತೆಯರ ನಡುವೆ ಜಡೆ ಜಗಳವಾಗಿದೆ. ಡಾ.ಜಿ.ಪರಮೇಶ್ವರ್ ಜೈಲು ಆವರಣದಿಂದ ಹೊರಟ ಬಳಿಕ ಮಹಿಳಾ‌ ಮಣಿಗಳು ಜಗಳಕ್ಕೆ ಬಿದ್ದಿದ್ದಾರೆ.

ಡಾ.ಜಿ.ಪರಮೇಶ್ವರ್ ಜೊತೆ ಫೋಟೋ ತೆಗೆಸಿಕೊಳ್ಳಲು ಜಡೆ ಹಿಡಿದು ಜಗಳವಾಡಿದ ಕಾಂಗ್ರೆಸ್ ಮಹಿಳಾ ಮಣಿಯರು, ಮುಂದೇನಾಯ್ತ?
ಡಾ.ಜಿ.ಪರಮೇಶ್ವರ್ ಜೊತೆ ಫೋಟೋ ತೆಗೆಸಿಕೊಳ್ಳಲು ಜಡೆ ಹಿಡಿದು ಜಗಳವಾಡಿದ ಕಾಂಗ್ರೆಸ್ ಮಹಿಳಾ ಮಣಿಯರು, ಮುಂದೇನಾಯ್ತ?
Follow us on

ತುಮಕೂರು: ಪೋಟೋಗಾಗಿ ಕಾಂಗ್ರೆಸ್ ಮಹಿಳಾ ಮಣಿಯರ ನಡುವೆ ಜಗಳ ನಡೆದ ಘಟನೆ ನಡೆದಿದೆ. ಬಂಧಿತ NSUI ಕಾರ್ಯಕರ್ತರನ್ನ ಭೇಟಿ ಮಾಡಲು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ತುಮಕೂರಿನ ಜೈಲಿಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಪರಮೇಶ್ವರ್ ಜೊತೆ ಫೋಟೋಗೆ ನಿಂತ‌ ಮಹಿಳಾ ಕಾರ್ಯಕರ್ತೆಯರ ನಡುವೆ ಜಡೆ ಜಗಳವಾಗಿದೆ. ಡಾ.ಜಿ.ಪರಮೇಶ್ವರ್ ಜೈಲು ಆವರಣದಿಂದ ಹೊರಟ ಬಳಿಕ ಮಹಿಳಾ‌ ಮಣಿಗಳು ಜಗಳಕ್ಕೆ ಬಿದ್ದಿದ್ದಾರೆ. ಬಳಿಕ ಮಾಧ್ಯಮಗಳ ಕ್ಯಾಮರಾ ಕಂಡು ಎಚ್ಚೆತ್ತು ಮುಖಂಡರು ಮಹಿಳೆಯರ ಜಗಳ ಬಿಡಿಸಿದ್ದಾರೆ.

ಕರ್ತವ್ಯನಿರತ ಇಬ್ಬರು ಕಾನ್ಸ್ಟೇಬಲ್ಗಳ ಮೇಲೆ ಹಲ್ಲೆ
ಜನರ ಓಡಾಟಕ್ಕೆ ಅಡೆತಡೆ ಮಾಡದಂತೆ ಹೇಳಿದ್ದಕ್ಕೆ ಕರ್ತವ್ಯನಿರತ ಇಬ್ಬರು ಕಾನ್ಸ್ಟೇಬಲ್ಗಳ ಮೇಲೆ ಹಲ್ಲೆ ನಡೆಸಲಾಗಿದೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಂಕಾಪುರ ಟೋಲ್ ಗೇಟ್ ಬಳಿ ಚಹಾ ಅಂಗಡಿ ಇಟ್ಟುಕೊಂಡಿದ್ದವರು ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ನಾವು ಅಭ್ಯರ್ಥಿಯನ್ನು ಹಾಕಿದ ಒಂದು ದಿನದ ಬಳಿಕ ಜೆಡಿ(ಎಸ್) ತನ್ನ ಅಭ್ಯರ್ಥಿಯ ನಾಮಪತ್ರ ಸಲ್ಲಿಸಿದೆ: ಸಿದ್ದರಾಮಯ್ಯ

ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹರವಿ ಗ್ರಾಮದ ಅರ್ಜುನ ಮತ್ತು ಶಿವಕುಮಾರ ಎಂಬುವವರು ಬಂಕಾಪುರ ಪೊಲೀಸ್ ಠಾಣೆಯ ಗಂಗಾಧರ ಹರಿಜನ ಮತ್ತು ದುಂಡಪ್ಪ ಎಂಬ ಕಾನ್ಸ್ಟೇಬಲ್ಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ಕಾನ್ಸ್ಟೇಬಲ್ ತಲೆಗೆ ಗಂಭೀರ ಗಾಯಗಳಾಗಿದ್ದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಟೋಲ್ ಗೇಟ್ ಬಳಿ ಇರುವ ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳು ಅಂಗಡಿ ಮುಂದಿನ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಟ್ಟಿಗೆ ಇಟ್ಟು ಹಗ್ಗ ಕಟ್ಟಿ ತಿಂಡಿ ಪ್ಯಾಕೇಟ್ ಹಾಕಿ ವಾಹನಗಳ ಓಡಾಟಕ್ಕೆ ತೊಂದರೆ ಮಾಡುತ್ತಿದ್ದರು. ರಸ್ತೆಯಲ್ಲಿ ಇಟ್ಟಿಗೆ ಇಟ್ಟು ಹಗ್ಗ ಕಟ್ಟಿದ್ದನ್ನು ತೆಗೆಯುವಂತೆ ಹೇಳಿದ್ದಕ್ಕೆ ಕಟ್ಟಿಗೆಯಿಂದ ಕಾನ್ಸ್ಟೇಬಲ್ಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:58 pm, Wed, 8 June 22