ತುಮಕೂರು: ಟೆಕ್ನಾಲಜಿ (Technology) ಬದಲಾದಂತೆ ಜನರು ಅದಕ್ಕೆ ಹೊಂದಿಕೊಳ್ಳುತ್ತಾರೆ. ಕೈಯಲ್ಲೇ ಹಣವಿಟ್ಟು ವ್ಯವಹಾರ (Transaction) ನಡೆಸುತ್ತಿದ್ದ ಕಾಲವಿತ್ತು. ಆದರೆ ಇದೀಗ ಕಾಲ ಬದಲಾಗಿದೆ. ಪ್ರತಿ ವ್ಯವಹಾರಕ್ಕೂ ಗೂಗಲ್ ಪೇ, ಫೋನ್ ಪೇಗೆ ಜನರು ಅವಲಂಬಿತರಾಗಿದ್ದಾರೆ. ಮೊಬೈಲ್ನಲ್ಲೇ ವ್ಯವಹಾರ ನಡೆಯುತ್ತಿರುವ ಕಾರಣ ದೇವಸ್ಥಾನಕ್ಕೆ ಬರುವವರು ಕಾಣಿಕೆ ತಂದಿರಲ್ಲ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಡಿಜಿಟಲೀಕರಣವನ್ನು ಜಾರಿಗೊಳಿಸಿದ್ದರು. ಸದ್ಯ ಮೋದಿಯ ಈ ಕ್ಯಾಶ್ಲೆಸ್ನ ಕನಸನ್ನು ತುಮಕೂರಿನ ದೇವಾಲಯ ಮಂಡಳಿ ನನಸು ಮಾಡಿದೆ.
ತುಮಕೂರಿನ ದೇವರಾಯನದುರ್ಗದ ಭೋಗ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದಲ್ಲಿ ಇ – ಕಾಣಿಕೆ ಹುಂಡಿ ಮಾಡಿದ್ದು, ರಾಜ್ಯದಲ್ಲೇ ಮೊದಲ ಬಾರಿಗೆ ಪ್ರಧಾನಿ ಮೋದಿಯ ಡಿಜಿಟಲಿಕರಣವನ್ನು ದೇವಾಲಯ ಮಂಡಳಿ ಚಾಲ್ತಿಗೊಳಿಸಿದೆ.
ಕಾಣಿಕೆಯ ಹುಂಡಿಯ ಜೊತೆಗೆ ದೇವಾಲಯದಲ್ಲಿ ಇ – ಸ್ಕ್ಯಾನಿಂಗ್, ಸ್ವೈಪಿಂಗ್ ಸೇರಿ ಇತರೆ ಸೌಲಭ್ಯ ಲಭ್ಯವಿದೆ. ಇನ್ನು ಭಕ್ತರು ಫೋನ್ ಪೇ, ಯುಪಿಐ ಇತರೆ ಡಿಜಿಟಲ್ ಮೂಲಕ ದೇವರಿಗೆ ಕಾಣಿಕೆ ಹಣ ಪಾವತಿ ಮಾಡಬಹುದು. ಈ ಬಗ್ಗೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಟಿ ಸುನೀಲ್ ಕುಮಾರ್ ಮಾತನಾಡಿ, ಬೆಂಗಳೂರು, ಮೈಸೂರು ಸೇರಿ ಇತರೆ ಕಡೆಗಳಿಂದ ಬರುವವರು ಹಣ ತರುವುದಕ್ಕೆ ಆಗಲ್ಲ. ಅಂತಹವರ ಅನುಕೂಲಕ್ಕಾಗಿ ಈ ಡಿಜಿಟಲ್ ವ್ಯವಸ್ಥೆ ಕಲ್ಪಿಸಲಾಗಿದೆ ಇನ್ನು ಮುಂದೆ ದೇವಾಲಯದಲ್ಲಿ ಹುಂಡಿಗಳಿಗೆ ಹಾಕಲು ಭಕ್ತರು ಚಿಲ್ಲರೆಗಾಗಿ ಪರದಾಡುವ ಅಗತ್ಯವಿಲ್ಲ ಎಂದರು.
ಇದನ್ನೂ ಓದಿ: ಫಿಲ್ಮ್ ಚೇಂಬರ್ ನೂತನ ಅಧ್ಯಕ್ಷ ಭಾಮಾ ಹರೀಶ್ಗೆ ಪೊರಕೆ, ಫಿನಾಯಿಲ್ ಗಿಫ್ಟ್! ಕಾರಣವೇನು?
ಸ್ಫಟಿಕಲಿಂಗ ಕಳ್ಳತನ:
ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಲಿಂಗದಹಳ್ಳಿ ಹಿರೇಮಠದಲ್ಲಿ ಸ್ಫಟಿಕಲಿಂಗವನ್ನು ಕಳ್ಳತನ ಮಾಡಿದ್ದಾರೆ. 13 ಇಂಚು ಉದ್ದ ಮತ್ತು 13 ಇಂಚು ಸುತ್ತಳತೆ ಹೊಂದಿದ್ದ ಸ್ಫಟಿಕಲಿಂಗ ಕಳ್ಳತನವಾಗಿದೆ. ದಕ್ಷಿಣ ಭಾರತದಲ್ಲೇ ಇದುಅತ್ಯಂತ ದೊಡ್ಡ ಸ್ಫಟಿಕಲಿಂಗವಾಗಿದೆ. ನಿನ್ನೆ ರಾತ್ರಿ ಮಠದಲ್ಲಿ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ಇಲ್ಲದ ವೇಳೆ ಕಳ್ಳತನ ಆಗಿದೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:45 pm, Tue, 7 June 22