ಗುಣಮಟ್ಟದ ವ್ಯವಹಾರಕ್ಕಾಗಿ ‘ISO’ ಪ್ರಮಾಣೀಕರಣ ಪಡೆಯಿರಿ, ಇದರ ಅನುಕೂಲಗಳು ಇಲ್ಲಿವೆ ನೋಡಿ

ಕಂಪನಿ ಸಣ್ಣದಾಗಿರಲಿ ಅಥವಾ ದೊಡ್ಡದಾಗಿರಲಿ, ಅದರ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯನ್ನು ಅಳೆಯುವುದು ISO ಪ್ರಮಾಣೀಕರಣದ ಮೂಲಕ ಎಂಬುದನ್ನು ಮರೆಯಬಾರದು. ಐಎಸ್​ಒ ಪ್ರಾಮಾಣೀಕೃತ ಪಡೆಯುವುದರಿಂದ ವ್ಯಾಪಾರಿಗಳು ಅನೇಕ ರೀತಿಯ ಅನುಕೂಲಗಳನ್ನು ಪಡೆಯಬಹುದು.

ಗುಣಮಟ್ಟದ ವ್ಯವಹಾರಕ್ಕಾಗಿ 'ISO' ಪ್ರಮಾಣೀಕರಣ ಪಡೆಯಿರಿ, ಇದರ ಅನುಕೂಲಗಳು ಇಲ್ಲಿವೆ ನೋಡಿ
ಸಾಂಕೇತಿಕ ಚಿತ್ರ
Follow us
TV9 Web
| Updated By: Rakesh Nayak Manchi

Updated on: May 24, 2022 | 4:24 PM

ಯಾವುದೇ ಒಂದು ಕಂಪನಿಯ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯನ್ನು ಅಳೆಯುವುದು ISO ಪ್ರಮಾಣೀಕರಣ (ISO certification). ಕಂಪನಿ ಸಣ್ಣದಾಗಿರಲಿ ಅಥವಾ ದೊಡ್ಡದಾಗಿರಲಿ ಅದು ಯಾವ ರೀತಿಯ ವ್ಯವಹಾರದಲ್ಲಿದೆ ಎಂಬುದರ ಆಧಾರದ ಮೇಲೆ ವಿವಿಧ ರೀತಿಯ ಐಎಸ್​ಒ ಪ್ರಮಾಣೀಕರಣವನ್ನು ನೀಡಲಾಗುತ್ತದೆ. ಈ ಪ್ರಮಾಣೀಕರಣವು ಪ್ರತಿಯೊಂದು ಕಂಪನಿಗೆ ಅವಶ್ಯಕವಾಗಿದ್ದು, ಸರಿಯಾದ ಕಾರ್ಯನಿರ್ವಹಣೆ ಮತ್ತು ದಕ್ಷತೆ ಸುಧಾರಣೆಯಲ್ಲಿ ಅದು ಪ್ರಮುಖ ಪಾತ್ರ ವಹಿಸುತ್ತದೆ.

ಐಎಸ್​ಒ ಉಲ್ಲೇಖಿಸಿರುವ ವಿಶೇಷಣಗಳನ್ನು ತೆಗೆದುಕೊಂಡರೆ, ಕಂಪನಿಯು ಗುಣಮಟ್ಟದ ಪ್ರಮಾಣಿತ ಪ್ರೋಟೋಕಾಲ್ (protocol) ಅನ್ನು ನಿರ್ವಹಿಸುತ್ತದೆ. ಇದು ಅಂತಿಮವಾಗಿ ಉತ್ಪನ್ನಗಳು ಮತ್ತು ಸೇವೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅಲ್ಲದೆ ISO ಪ್ರಮಾಣೀಕರಣ ಪಡೆದರೆ ಒಂದಷ್ಟು ಅನುಕೂಲಗಳು (Advantages) ಇವೆ. ಅವುಗಳು ಯಾವುವು ಎಂದು ಮುಂದಕ್ಕೆ ಹೇಳುತ್ತೇವೆ.

ಇದನ್ನೂ ಓದಿ: BUSINESS: ವ್ಯಾಪಾರೋದ್ಯಮ ಸದೃಢವಾಗಿ ನೆಲೆಯೂರಲು ಸಹಾಯಕವಾಗುವ ಟಿಪ್ಸ್ ಇಲ್ಲಿದೆ ನೋಡಿ

ವಿಶ್ವಾಸಾರ್ಹತೆ ಸಾಧಿಸಲು ಸಹಾಯಕ

ಯಾವುದೇ ಸಂಸ್ಥೆಯ ಅಂತಿಮ ಉದ್ದೇಶ ಗ್ರಾಹಕರನ್ನು ತೃಪ್ತಿ ಪಡಿಸುವುದಾಗಿದ್ದು, ಇದಕ್ಕಾಗಿ ಪ್ರತಿಯೊಂದು ಸಂಸ್ಥೆಯು ಅನೇಕ ಮಾರ್ಗಗಳನ್ನು ಕಂಡುಕೊಳ್ಳುತ್ತದೆ. ಇದರಲ್ಲಿ ISO ಪ್ರಮಾಣೀಕರಣ ಪಡೆಯುವುದು ಒಂದಾಗಿದೆ. ಏಕೆಂದರೆ, ಒಂದಷ್ಟು ಗ್ರಾಹಕರು ಐಎಸ್​ಒ ಪ್ರಮಾಣೀಕೃತ ಕಂಪನಿಗಳೊಂದಿಗೆ ವ್ಯವಹಾರ ನಡೆಸಲು ಬಯಸುತ್ತಾರೆ. ಸ್ಪರ್ಧಾತ್ಮಕ ವ್ಯವಹಾರ ಬಯಸುವ ಯಾವುದೇ ಸಂಸ್ಥೆಯು ISO ಪ್ರಮಾಣೀಕರಣ ಪಡೆಯಲೇಬೇಕು. ಈ ಗುರುತು ಗ್ರಾಹಕರನ್ನು ತಾನೇತಾನಾಗಿ ಆಕರ್ಷಿಸುತ್ತದೆ. ಇದು ನಿಮ್ಮ ಮಾರ್ಕೆಟಿಂಗ್ ಮತ್ತು ಜಾಹೀರಾತು ತಂತ್ರಗಳಿಗೆ ವಿಶ್ವಾಸಾರ್ಹತೆಯನ್ನು ಸೇರಿಸುತ್ತದೆ.

ರಚನಾತ್ಮಕ ಚೌಕಟ್ಟನ್ನು ನೀಡುತ್ತದೆ

ಯಾವುದೇ ಸಂಸ್ಥೆಗೆ ಪ್ರಮುಖ ವಿಷಯವೆಂದರೆ, ಅದು ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು. ಇಲ್ಲಿ ISO ಪ್ರಮುಖ ಪಾತ್ರ ವಹಿಸಲಿದ್ದು,  ಗುಣಮಟ್ಟದ ನಿರ್ವಹಣೆಗಾಗಿ ರಚನಾತ್ಮಕ ಚೌಕಟ್ಟನ್ನು ಅದು ಒದಗಿಸುತ್ತದೆ ಮತ್ತು ಸರಿಯಾದ ನಿರ್ಧಾರವನ್ನು ಖಾತ್ರಿಪಡಿಸುತ್ತದೆ.

ಇದನ್ನೂ ಓದಿ: Business Idea: ಮನೆಯಿಂದಲೇ ಶುರು ಮಾಡಿ ತಿಂಗಳಿಗೆ 35ರಿಂದ 40 ಸಾವಿರ ರೂಪಾಯಿ ಲಾಭ ಬರುವ ಬಿಜಿನೆಸ್ ಐಡಿಯಾ ಇದು

ಸರ್ಕಾರಿ ಒಪ್ಪಂದಗಳಿಗೆ ಅರ್ಜಿ ಸಲ್ಲಿಸಲು ಅರ್ಹ

ಯಾವುದೇ ಕಂಪನಿಗೆ ಸರ್ಕಾರದ ಒಪ್ಪಂದವನ್ನು ಪಡೆಯುವುದು ದೊಡ್ಡ ವ್ಯವಹಾರವಾಗಿದೆ. ಸರ್ಕಾರಿ ಟೆಂಡರ್‌ಗಳು ಸಾಮಾನ್ಯವಾಗಿ ISO ಪ್ರಮಾಣೀಕರಣವನ್ನು ಅರ್ಹತಾ ಮಾನದಂಡವಾಗಿ ಉಲ್ಲೇಖಿಸುತ್ತವೆ. ಆದ್ದರಿಂದ ಈ ಪ್ರಮಾಣೀಕರಣವನ್ನು ಹೊಂದಿದ್ದರೆ ನಿಮ್ಮ ಕಂಪನಿಯು ಸರ್ಕಾರಿ ಒಪ್ಪಂದಗಳಿಗೆ ಅರ್ಜಿ ಸಲ್ಲಿಸಲು ಅರ್ಹವಾಗಿರುತ್ತದೆ.

ದುರಸ್ತಿ ಮತ್ತು ಇತರ ನಷ್ಟಗಳ ಕಡಿಮೆ

ಒಂದೊಮ್ಮೆ ನೀವು ಐಎಸ್​ಒ ಗುರುತನ್ನು ಪಡೆದರೆ ಮರುಕೆಲಸ, ದುರಸ್ತಿ, ಉತ್ಪಾದನೆಯ ಮರುಸ್ಥಾಪನೆ, ಹಳತಾದ ದಾಸ್ತಾನು ಮತ್ತು ಇತರ ಗುಣಮಟ್ಟದ ಸಮಸ್ಯೆ, ಸಮಯ ಮತ್ತು ಶಕ್ತಿಯ ನಷ್ಟವನ್ನು ಕಡಿಮೆ ಮಾಡಬಹುದು. ISO ನಿರ್ದಿಷ್ಟಪಡಿಸಿದ ಗುಣಮಟ್ಟದ ನಿರ್ವಹಣಾ ಪ್ರೋಟೋಕಾಲ್‌ನೊಂದಿಗೆ ದುರಸ್ತಿ ಮತ್ತು ಇತರ ನಷ್ಟಗಳ ಕಡಿಮೆ ಸಂಭವನೀಯತೆ ಇರುತ್ತದೆ. ಹೀಗಾಗಿ ಇತರ ಕಾರ್ಯಗಳಿಗೆ ಪರಿಣಾಮಕಾರಿಯಾಗಿ ಬಳಸಬಹುದಾದ ಬಂಡವಾಳವನ್ನು ಉಳಿಸಲು ನಿಮಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: Business Idea: ವರ್ಷವಿಡೀ ಬೇಡಿಕೆ ಇರುವ ಈ ಕೃಷಿ ಉತ್ಪನ್ನದ ಮೂಲಕ 15 ಲಕ್ಷ ರೂಪಾಯಿ ತನಕ ಗಳಿಸಿ

ಸಿಬ್ಬಂದಿಯ ತರಬೇತಿ

ISO ಪ್ರಮಾಣೀಕರಣವನ್ನು ಪಡೆಯಲು ಯಾವುದೇ ಕಂಪನಿಯು ಹೊಂದಿಕೆ ಆಗಬೇಕಾದ ಪ್ರಮುಖ ಮಾನದಂಡವೆಂದರೆ ಸಿಬ್ಬಂದಿಯ ತರಬೇತಿ. ಇದು ಅಂತಿಮವಾಗಿ ಉದ್ಯೋಗಿಗಳಿಗೆ ಹೆಚ್ಚಿನ ಜ್ಞಾನವನ್ನು ನೀಡಲು ಸಹಾಯ ಮಾಡುತ್ತದೆ ಮತ್ತು ಅವರು ತಮ್ಮ ಕಾರ್ಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ನ್ಯೂನತೆಗಳಿಲ್ಲದೆ ನಿರ್ವಹಿಸಲು ಸಹಾಯಕವಾಗಿದೆ.

ಅಂತಾರಾಷ್ಟ್ರೀಯ ಗುಣಮಟ್ಟದ ಮನ್ನಣೆ

ISO ಜಾಗತಿಕವಾಗಿ ಗುರುತಿಸಲ್ಪಟ್ಟ ಮಾನದಂಡವಾಗಿದೆ. ಈ ಪ್ರಮಾಣೀಕರಣವನ್ನು ಹೊಂದಿರುವ ಯಾವುದೇ ಸಂಸ್ಥೆಯು ಅಂತಾರಾಷ್ಟ್ರೀಯ ಗುಣಮಟ್ಟದ ಮನ್ನಣೆ ಪಡೆಯಬಹುದಾಗಿದೆ. ಗುಣಮಟ್ಟ ನಿರ್ವಹಣೆ, ಉತ್ಪಾದನೆಯ ಪ್ರೋಟೋಕಾಲ್ ಜಾಗತಿಕವಾಗಿ ಒಂದೇ ಆಗಿರುತ್ತದೆ. ಆದ್ದರಿಂದ ನೀವು ಸುಲಭವಾಗಿ ಜಾಗತಿಕ ಗ್ರಾಹಕರನ್ನು ಸಂಪರ್ಕಿಸಬಹುದು.

ಈಗ ನಿಮಗೆ ಐಎಸ್​ಒ ಪ್ರಾಮಾಣೀಕೃತದ ಅನುಕೂಲಗಳ ಬಗ್ಗೆ ತಿಳಿಯಿತು. ನೀವು ಜಾಗತಿಕವಾಗಿ ಗ್ರಾಹಕರನ್ನು ಸಂಪರ್ಕಿಸಲು ಹಾಗೂ ಗುಣಮಟ್ಟದ ಸ್ಪರ್ಧಾತ್ಮಕ ವ್ಯವಹಾರವನ್ನು ನಡೆಸಲು ಬಯಸುವುದಾದರೆ ISO ಪ್ರಮಾಣೀಕೃತ ಮಾಡಿಸಬಹುದು.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ